’ಡಾ ಅಂಬೇಡ್ಕರರ ಚಿಂತನೆ ಶೋಷಿತರಿಗೆ ತಲುಪಿಸಿರಿ’: ಗುರುಪಾದ ಕೋಗನೂರ

0
16

ಕಲಬುರಗಿ: ಸಮ ಬಾಳು ಸಮ ಪಾಲು ಎಂಬ ಆದರ್ಶಗಳೊಂದಿಗೆ ಸಂವಿಧಾನ ರೂಪಿಸಿದ ಡಾ ಅಂಬೇಡ್ಕರವರ ಚಿಂತನೆಗಳನ್ನು ಶೋಷಿತ ಸಮುದಾಯಕ್ಕೆ ತಲುಪಿಸಬೇಕಾಗಿದೆ ಎಂದು ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘದ ರಾಜ್ಯಾಧ್ಯಕ್ಷ ಗುರುಪಾದ ಕೋಗನೂರ ಕರೆ ನೀಡಿದರು.

ನಗರದ ಎನ್ ಜಿ ಓ ಕಾಲೋನಿಯ ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘದ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಿದ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರವರ ೧೩೧ನೇ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿ ಜಾತಿ ಮತ್ತು ಧರ್ಮಗಳ ಜನರಿಗೆ ಅನುಕೂಲವಾಗಲು ಹಕ್ಕುಗಳು ನೀಡಲಾಗಿದೆ. ಹಾಗೂ ಮಹಿಳೆಯರಿಗೆ ಕಾನೂನು ಬದ್ಧ ಸಮಾನತೆಯ ಹಕ್ಕು ನೀಡುವ ಮೂಲಕ ಅವರ ವಿಮೋಚನೆಗೆ ಶ್ರಮಿಸಿದರು. ಇಂದು ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಲು ಜನ ಸಾಮಾನ್ಯರಿಗೆ ಮತದಾನದ ಹಕ್ಕು ನೀಡಿದ್ದಾರೆ. ಇಡೀ ಜಗತ್ತಿಗೆ ಮಾದರಿಯಾಗುವ ಸಂವಿಧಾನವನ್ನು ಡಾ ಅಂಬೇಡ್ಕರವರು ರೂಪಿಸಿ ಕೊಟ್ಟಿದ್ದಾರೆ ಎಂದು ನುಡಿದರು.

Contact Your\'s Advertisement; 9902492681

ಇದನ್ನೂ ಓದಿ: ಭಾವ ದೀಪ್ತಿ ಗ್ರಂಥ ಬಿಡುಗಡೆ ನಾಳೆ

ಸಾಹಿತಿ ಧರ್ಮಣ್ಣ ಎಚ್ ಧನ್ನಿ ಅವರು ಉಪನ್ಯಾಸ ಭಾಷಣ ಮಾಡಿ, ಮಹಿಳೆಯರಿಗೆ ಹೆರಿಗೆ ರಜೆ, ಶಿಶು ಪಾಲನಾ ರಜೆ, ಕಾರ್ಮಿಕರಿಗೆ ಎಂಟು ಗಂಟೆಗಳ ದುಡಿಮೆ ಹಾಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮ ಪಾಲು ಕಲ್ಪಿಸಿ ಕೊಟ್ಟಿದ್ದಾರೆ. ಸ್ವಾತಂತ್ರ್ಯ ಸಮಾನತೆ ಮತ್ತು ಭಾತೃತ್ವ ಆದರ್ಶಗಳಡಿ ಸಂವಿಧಾನ ರಚಿಸಿ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ಈಗ ನಾವು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು ಎಂದರು.

ಸ್ಕೂಪ್ಸ್ ಕೋಶಾಧ್ಯಕ್ಷೆ ಸಾವಿತ್ರಿ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಕೂಪ್ಸ್ ರಾಜ್ಯ ಉಪಾಧ್ಯಕ್ಷೆ ಸೇವಂತಾ ಪಿ ಚವ್ಹಾಣ, ಸಂಘಟನಾ ಕಾರ್ಯದರ್ಶಿ ಧೇನು ರಾಠೋಡ ಬೆಳಮಗಿ, ವೆಂಕಟರೆಡ್ಡಿ ಕರೆಡ್ಡಿ, ಸಹ ಕಾರ್ಯದರ್ಶಿ ಝಾಕೀರ ಹುಸೇನ ಕುಪನೂರ, ಲಲಿತಾ ದೇಸಾಯಿ, ವಿಶಾಲಾಕ್ಷೀ ಮಾಯಣ್ಣನವರ ಸೇರಿ ಇತರ ಗಣ್ಯರು ಪಾಲ್ಗೊಂಡಿದರು. ಜ್ಯೋತಿ ಅಗ್ನಿಹೋತ್ರಿ ಅವರು ಪ್ರಾರ್ಥನಾ ಗೀತೆ ಹಾಡಿದರು. ಸ್ಕೂಪ್ಸ್ ವತಿಯಿಂದ ಬೆಳಿಗ್ಗೆ ನಗರದ ಡಾ ಅಂಬೇಡ್ಕರವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ಇದನ್ನೂ ಓದಿ: ಕಲಬುರಗಿ ಭ್ರಷ್ಟಾಚಾರ ಜಿಲ್ಲೆಯಾಗಿದೆ: ಸೂಕ್ತ ತನಿಖೆಗೆ ಅಲ್ಲಮಪ್ರಭು ಪಾಟೀಲ್ ಆಗ್ರಹ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here