ಹನುಮಾನ ಜಯಂತ್ಯೋತ್ಸವ ನಿಮಿತ್ತ ಕಲಬುರಗಿಯಲ್ಲಿ ವಿವಿಧ ಕಾರ್ಯಕ್ರಮ

0
15

ಕಲಬುರಗಿ: ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜೀರ್ಣೋದ್ಧಾರ ಸಂಘ ಹಾಗೂ ಶ್ರೀ ಜೈ ಗಂಗಾ ಹನುಮಾನ ಜಾತ್ರಾ ಉತ್ಸವ ಸಮಿತಿ ವತಿಯಿಂದ ಮಾರ್ಚ್ ೧೬ರಂದು ಶನಿವಾರ ಬ್ರಹ್ಮಪೂರ ಗಂಗಾನಗರದಲ್ಲಿ ಶ್ರೀ ಹನುಮಾನ ಜಯಂತ್ಯೋತ್ಸವ ನಿಮಿತ್ಯವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ೩೩ನೇ ರಥೋತ್ಸವ ಕಾರ್ಯಕ್ರಮವನ್ನು ಸಾಯಂಕಾಲ ೬.೦೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ: ಉಪನ್ಯಾಸಕರ ಸಂಘದಿಂದ 371ಜೆ ವಿಚಾರ ಸಂಕಿರಣ

Contact Your\'s Advertisement; 9902492681

ಬೆಳಿಗ್ಗೆ: ೬.೦೦ ಗಂಟೆಗೆ ಹನುಮಾನ ದೇವರ ತೊಟ್ಟಿಲು ಕಾರ್ಯಕ್ರಮ ನಂತರ ಅಭಿಶೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಂತರ ೧೦.೦೦ ಗಂಟೆಗೆ ಭಕ್ತರಿಗೆ ಪ್ರಸಾದ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂತರ ಸಾಯಂಕಾಲ ೬.೦೦ ಗಂಟೆಗೆ ವಿವಿಧ ಮಠಾಧೀಶರು ಮತ್ತು ಸಾವಿರಾರು ಭಕ್ತ ಜನ ಸಾಗರದಲ್ಲಿ ಶ್ರೀ ಜೈ ಗಂಗಾ ಹನುಮಾನ ಜಯಂತ್ಯೋತ್ಸವದ ರಥೋತ್ಸವ ಕಾರ್ಯಕ್ರಮವನ್ನು ನಂದಿಕೋಲ ಕುಣಿತದೊಂದಿಗೆ ಪಲ್ಲಕ್ಕಿ ಉತ್ಸವ, ಹೆಸರಾಂತ ಪುರಾಂತರ ಪುರವಂತರೋಂದಿಗೆ ಡೊಳ್ಳು, ಬಾಜಾ, ಬಜಂತ್ರಿ, ಹಲಿಗೆ, ಬ್ಯಾಂಡ ದೊಂದಿಗೆ ಹಾಗೂ ವಿವಿಧ ಕಲಾತಂಡಗಳು ಭಾಗವಹಿಸಲಿದ್ದಾರೆ ಎಂದು ಜಯಂತ್ಯೋತ್ಸವ ಸಮಿತಿಯ ಜಂಟಿಯಾಗಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: ಮಾಜಿ ಶಾಸಕ ಜಿ.ವಿ ಶ್ರೀರಾಮ ರೆಡ್ಡಿ ನಿಧನಕ್ಕೆ ಹೆಚ್.ಡಿ.ಕುಮಾರಸ್ವಾಮಿ ಕಂಬನಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here