ಸತತ ಅಧ್ಯಯನಶೀಲತೆಯೇ ವಿದ್ಯಾರ್ಥಿ ಲಕ್ಷಣ: ಡಾ. ಮೇಧಾವಿನಿ ಕಟ್ಟಿ

0
12

ಕಲಬುರಗಿ: ಸತತ ಅಧ್ಯಯನವೇ ವಿದ್ಯಾರ್ಥಿಯ ಲಕ್ಷಣ ವಿದ್ಯಾರ್ಥಿಗಳು ಸತತವಾಗಿ ಅಧ್ಯಯನ ಮಾಡಬೇಕು ಹಾಗೂ ವಿಶ್ವವಿದ್ಯಾಲಯದ ಎಲ್ಲಾ ಸೌಲಭ್ಯವನ್ನು ಪಡೆದುಕೊಂಡು ತಾವು ಉನ್ನತವಾದ ಜ್ಞಾನವನ್ನು ಗಳಿಸಿಕೊಳ್ಳಬೇಕೆಂದು ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಗುಲಬರ್ಗಾ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವರಾದ ಡಾ. ಮೇಧಾವಿನಿ ಕಟ್ಟಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಇದನ್ನೂ ಓದಿ: ಸ್ವಾತಂತ್ರ್ಯದ‌ ಜೊತೆಗೆ ಸಾಮಾಜಿಕ‌ ಸಮಾನತೆಗಾಗಿ ಅಂಬೇಡ್ಕರ ಹೋರಾಟ: ಪ್ರಿಯಾಂಕ್ ಖರ್ಗೆ

Contact Your\'s Advertisement; 9902492681

ಮುಖ್ಯ ಅತಿಥಿಯಾಗಿದ್ದ ಕಲಾ ನಿಕಾಯದ ಡೀನರು ಹಾಗೂ ಆಂಗ್ಲ ವಿಭಾಗದ ಪ್ರಾಧ್ಯಾಪಕ ಡಾ. ರಮೇಶ ರಾಠೋಡ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸವನ್ನು ಕೈಗೊಳ್ಳಬೇಕು ಅಂದಾಗ ಮಾತ್ರ ವಿದ್ಯಾರ್ಥಿಗಳು ಕಂಡ ಕನಸು ನನಸಾಗುವುದು.  ವಿದ್ಯಾರ್ಥಿಗಳು ಸಮಯಕ್ಕೆ ಬೆಲೆಯನ್ನು ಕೊಡಬೇಕು. ಅದೇರೀತಿ ಕನ್ನಡ ಜೊತೆ ಜೊತೆಗೆ ಇಂಗ್ಲಿಷ ಭಾಷೆಯನ್ನು ವ್ಯವಹಾರಿಕ ದೃಷ್ಟಿಯಿಂದ ಹಾಗೂ ಪರೀಕ್ಷೆ ದೃಷ್ಟಿಯಿಂದ ವಿದ್ಯಾರ್ಥಿಗಳು ಇಂದು ಅನಿವಾರ‍್ಯವಾಗಿ ಕಲಿಯಬೇಕಾಗಿದೆ. ಅಂದಾಗ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದು ಉನ್ನತವಾದ ಉದ್ಯೋಗವನ್ನು ಪಡೆಯಬಹುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಮಾತನಾಡಿ, ವಿದ್ಯಾರ್ಥಿಗಳು ಪುಸ್ತಕವನ್ನು ತಮ್ಮ ಉತ್ತಮ ಗೆಳೆಯನಾಗಿಸಬೇಕು ಅಂದಾಗ ಮಾತ್ರ ಯಶಸ್ಸು ಪಡೆಯಬಹುದು. ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸತತ ಅಧ್ಯಯನ ಶೀಲರಾಗಿರಬೇಕು ಅಂದಾಗ ಮಾತ್ರ ಹೊಸ ಸಾಹಿತ್ಯವನ್ನು ಸೃಷ್ಟಿಸಬಹುದು ಎಂದು ಮಾತನಾಡಿದರು.

ಇದನ್ನೂ ಓದಿ: ಬುದ್ಧ, ಬಸವ, ಅಂಬೇಡ್ಕರ್ ತತ್ವ ಪಾಲನೆಗೆ ಪ್ರಿಯಾಂಕ್ ಖರ್ಗೆ ಕರೆ

ಡಾ. ಶ್ರೀಶೈಲ ನಾಗರಾಳ, ಶ್ರೀಧರ, ಅರುಣ, ಭೀಮಾಂಶಕರ ವೇದಿಕೆಯಲ್ಲಿದ್ದರು.ಸ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here