ಕಲಬುರಗಿ: ಉತ್ತರ ಮತ ಕ್ಷೇತ್ರದಲ್ಲಿ ಬರುವ ವಾರ್ಡ ನಂ.೨೫.ರ ಕೈಲಾಸ ನಗರದಲ್ಲಿ ೨೦೨೧-೨೨ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮುಖ್ಯಮಂತ್ರಿಗಳ ವಿವೇಚನಾ ನಿಧಿ ಕೋಟಾದ ಸಾಮನ್ಯ ಯೋಜನೆ ಅಡಿಯಲ್ಲಿ ೨೦ ಲಕ್ಷ ವೆಚ್ಚದ ಸಿ.ಸಿ ರಸ್ತೆ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯರಾದ ಬಿ ಜಿ ಪಾಟೀಲ ಹಾಗೂ ಕ್ರೆಡಲ ಅಧ್ಯಕ್ಷ ಚಂದು ಪಾಟೀಲ ಅವರು ಚಾಲನೆ ನೀಡಿದರು.
ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶಿವಾನಂದ ಪಿಸ್ತಿ, ಬಸವರಾಜ ಮುನ್ನಳ್ಳಿ, ಜಗದೇವ ಗುತ್ತೇದಾರ, ಸಚೀನ ಕಡಗಂಚಿ, ದಿಗಂಬರ ಮಾಗಣಗೇರಿ, ಬಿಜೆಪಿ ನಗರ ಅಧ್ಯಕ್ಷ ಸಿದ್ದಾಜಿ ಪಾಟೀಲ, ಬಿಜೆಪಿ ನಗರ ಪ್ರದಾನ ಕಾರ್ಯದರ್ಶಿ ಉಮೇಶ್ ಪಾಟೀಲ, ಮಾಜಿ ಪಾಲಿಕೆ ಸದಸ್ಯ ಶಿವಾನಂದ ಭಂಡಕ, ಬಡಾವಣೆಯ ಮುಖಂಡರಾದ ಅಶೋಕ ಪಟ್ಟಣಶೆಟ್ಟಿ, ಸಿದ್ದಣ ಅರಳಿ, ಅಮೃತರಾವ ದೇವಶೆಟ್ಟಿ, ವಿಶ್ವನಾಥ ಕೋಟ್ರಕಿ, ಜಿವನ ಜೈನ್, ಶರಣಯ್ಯ ಮಠ, ರವಿಂದ್ರ ಮೈನಾಳೆ, ಬಸವರಾಜ ಕಲ್ಯಾಣಿ, ಸತೀಶ ಜಮಖಂಡಿ ಇದ್ದರು.
ಇದನ್ನೂ ಓದಿ: 2 ವರ್ಷದ ಬಾಲಕ ಮುಜಮ್ಮಿಲ್ ಹತ್ಯೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ