ಇ-ತ್ಯಾಜ್ಯ ನಿರ್ವಹಣೆ ಮತ್ತು ಪುನರ್‌ಬಳಕೆಗೆ ಜನಸಾಮಾನ್ಯರಲ್ಲಿ ಪ್ರೋತ್ಸಾಹ ಅಗತ್ಯ: ನ್ಯಾಯಮೂರ್ತಿ ಸುಭಾಷ್‌ ಅಡಿ

0
10
  • ಮೂರು ದಿನಗಳ ಇ-ತ್ಯಾಜ್ಯ ಅಂತರಾಷ್ಟ್ರೀಯ ಸಮ್ಮೇಳನ ರಿಕಾಮರ್ಸ್‌ ಉದ್ಘಾಟನೆ
  • ಜನರಲ್ಲಿ ಇ-ತ್ಯಾಜ್ಯದ ಬಗ್ಗೆ ವ್ಯಾಪಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕರೆ

ಬೆಂಗಳೂರು ಮೇ 18: ಉತ್ಪತ್ತಿಯಾಗುವ ಶೇಕಡಾ 80 ರಷ್ಟು ಇ-ತ್ಯಾಜ್ಯವನ್ನು ಮರುಬಳಕೆ ಮಾಡಬಹುದಾಗಿದ್ದು, ಇದರ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಬೇಕಾಗಿದೆ ಎಂದು ಕರ್ನಾಟಕದ ಘನ ತ್ಯಾಜ್ಯ ನಿರ್ವಹಣೆಯ ನ್ಯಾಷನಲ್‌ ಗ್ರೀನ್‌ ಟ್ರೀಬ್ಯೂನಲ್‌ ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಸುಭಾಷ್‌ ಆಡಿ ಅವರು ಕರೆ ಹೇಳಿದರು.

ಇಂದು ಬೆಂಗಳೂರಿನಲ್ಲಿ ಊರ್ಧವ್ ಮ್ಯಾನೇಜ್ಮೆಂಟ್ ವತಿಯಿಂದ ಆಯೋಜಿಸಲಾಗಿದ್ದ ಮೂರು ದಿನಗಳ ನಗರದಲ್ಲಿ ಆಯೋಜಿಸಲಾಗಿರುವ ಇ-ತ್ಯಾಜ್ಯ ಹಾಗೂ ವಿದ್ಯುನ್ಮಾನ ತ್ಯಾಜ್ಯ ಮರುಬಳಕೆ ಹಾಗೂ ನಿರ್ವಹಣೆಯ ಕ್ಷೇತ್ರದ ದೇಶದಲ್ಲೇ ದೊಡ್ಡ ಎಕ್ಸ್ಪೋ ರಿ ಕಾಮರ್ಸ್‌ 2022 ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇ-ತ್ಯಾಜ್ಯ ನಿರ್ವಹಣೆ ವಿಶ್ವದಲ್ಲೆ ಅತಿ ದೊಡ್ಡ ಸಮಸ್ಯೆ ಆಗಲಿದೆ. ಉತ್ಪತ್ತಿಯಾಗುವ ಶೇಕಡಾ 80 ಇ-ತ್ಯಾಜ್ಯಗಳ ಮುರುಬಳಕೆ ಸಾಧ್ಯ.

Contact Your\'s Advertisement; 9902492681

ಈ ನಿಟ್ಟಿನಲ್ಲಿ ಸಮರ್ಪಕ ನಿರ್ವಹಣೆ, ಪುನರ್‌ಬಳಕೆ ಹಾಗೂ ವೈಜ್ಞಾನಿಕ ಸಂಸ್ಕರಣೆಯ ವಿಷಯದಲ್ಲಿ ಇನ್ನು ಸಾಕಷ್ಟು ಕೆಲಸಗಳು ನಡೆಯಬೇಕಾಗಿದೆ. ನಮ್ಮ ದೇಶದಲ್ಲಿ ಘನತ್ಯಾಜ್ಯ ನಿರ್ವಹಣೆಯ ಬಗ್ಗೆ 2016 ರಲ್ಲಿ ಕಾಯಿದೆಯನ್ನು ರೂಪಿಸಲಾಗಿದೆ. ಈ ಕಾಯಿದೆ ಅಡಿಯಲ್ಲಿ ಇ-ತ್ಯಾಜ್ಯ ನಿರ್ವಹಣೆಗೂ ಅವಕಾಶ ಒದಗಿಸಲಾಗಿದೆ. ಇ-ತ್ಯಾಜ್ಯದ ಉತ್ಪಾದನೆ ಹಾಗೂ ಅದರ ಸಮರ್ಪಕ ವಿಲೇವಾರಿಯ ಬಗ್ಗೆ ಜನಸಾಮಾನ್ಯರಲ್ಲಿ ತಿಳುವಳಿಕೆ ಕಡಿಮೆ ಇದೆ. ಇದನ್ನ ಸರಿಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟಂತಹ ಸಂಸ್ಥೆಗಳು ಹಾಗೂ ಇಲಾಖೆಗಳು ಕ್ರಮ ಕೈಗೊಳ್ಳಬೇಕು. ಹಾಗೂ ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿಕೊಂಡಿರುವ ನಿಜವಾದ ಉದ್ಯಮಿಗಳನ್ನು ಪ್ರೋತ್ಸಾಹಿಸಬೇಕು. ಅಲ್ಲದೆ, ಅವರಲ್ಲಿ ಪರಿಸರ ಪೂರಕವಾದಂತಹ ವೈಜ್ಞಾನಿಕ ತಾಂತ್ರಿಕತೆಯನ್ನು ಅಳವಡಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾದ ಶಾಂತಾ ತಿಮ್ಮಯ್ಯ ಮಾತನಾಡಿ, ಅಕ್ಟೋಬರ್‌ 14 ನ್ನು ವಿಶ್ವ ಇ-ತ್ಯಾಜ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಒಂದು ತಿಂಗಳುಗಳ ಕಾಲ ಜನರಲ್ಲಿ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. 2019-20 ರಲ್ಲಿ ದೇಶದಲ್ಲಿ 2.3 ಮಿಲಿಯನ್‌ ಟನ್‌ ಗಳಷ್ಟು ಇ-ತ್ಯಾಜ್ಯ ಉತ್ಪತ್ತಿಯಾಗಿದೆ. ನಮ್ಮ ರಾಜ್ಯದಲ್ಲಿ 0.1 ಮಿಲಿಯನ್‌ ನಷ್ಟು ತ್ಯಾಜ್ಯ ಉತ್ಪತ್ತಿಯಾಗಿದ್ದು ಅದರ ನಿರ್ವಹಣೆ ಬಹಳ ಸವಾಲೇ ಸರಿ. ಉತ್ಪತ್ತಿಯಾಗುವಂತಹ ಬಹಳಷ್ಟು ಇ-ತ್ಯಾಜ್ಯ ಅಸಂಘಟಿತವಾದ ಕ್ಷೇತ್ರದ ಮೂಲಕ ಪರಿಷ್ಕರಣೆಗೆ ಒಳಪಡುತ್ತಿದೆ.

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ಇದರಿಂದ ಪರಿಸರದ ಮೇಲೆ ಆಗುತ್ತಿರುವ ಹಾನಿ ಬಹಳಷ್ಟು. ಇದನ್ನ ಸರಿದಾರಿಗೆ ತರುವ ನಿಟ್ಟಿನಲ್ಲಿ ನಾವುಗಳು ಸರಿಯಾದ ಮೂಲಭೂತ ಸೌಕರ್ಯದ ಕೊರತೆ, ಕೈಗಾರಿಕೆಯನ್ನು ಸ್ಥಾಪಿಸಲು ಬೇಕಾದಂತಹ ಹೆಚ್ಚಿನ ಹಣ ಇವೆಲ್ಲವುಗಳಿಂದ ಸರಿಯಾದ ಪ್ರಮಾಣದಲ್ಲಿ ಸೌಲಭ್ಯಗಳು ಸೃಷ್ಟಿಯಾಗಿಲ್ಲ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಗತ್ಯವಿರುವಂತಹ ಎಲ್ಲಾ ಸಹಕಾರವನ್ನು ಈ ಕೈಗಾರಿಕೆಗಳಿಗೆ ನೀಡಲಾಗುವುದು. ಹಾಗೆಯೇ, ಅನುಮತಿಯನ್ನು ಶೀಘ್ರವಾಗಿ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಮಾತನಾಡಿ, ಮಾಲಿನ್ಯದಿಂದ ಮನುಕುಲ ತತ್ತರಿಸಿದೆ. ಮನುಕುಲ ಉಳಿಯಬೇಕು ಎಂದರೆ ಮಾಲಿನ್ಯ ನಿಯಂತ್ರಣಕ್ಕೆ ಬರಬೇಕು. ಘನ, ಮಲ, ಇ ತ್ಯಾಜ್ಯ, ಬ್ಯಾಟರೀ ತ್ಯಾಜ್ಯ, ಆಟೋಮೊಬೈಲ್‌ ತ್ಯಾಜ್ಯದಿಂದ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುವಂತಹ ಹಲವಾರು ಸಮಸ್ಯೆಗಳು ಆಗುತ್ತವೆ. ಅದನ್ನ ಸರಿಯಾಗಿ ನಿರ್ವಹಣೆ ಗೊತ್ತಿಲ್ಲದೆ ಹಲವರು ಅನಾರೋಗ್ಯಕ್ಕೂ ತುತ್ತಾಗಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಇ-ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮತ್ತು ಸಂಸ್ಕರಣೆ ಮಾಡುವುದು ಅಗತ್ಯ. ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ವಿಫುಲವಾಗಿವೆ. ಇಂತಹ ಕೈಗಾರಿಕೆಗಳು ಹೆಚ್ಚು ಹೆಚ್ಚು ಸ್ಥಾಪನೆ ಅಗುವುದರಿಂದ ಪರಿಸರವೂ ಸ್ವಚ್ಚವಾಗುತ್ತದೆ. ಅಲ್ಲದೆ, ನಾವೆಲ್ಲರೂ ಝೀರೋ ವೇಸ್ಟ್‌ ಉತ್ಪಾದನಾ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ: 2 ವರ್ಷದ ಬಾಲಕ ಮುಜಮ್ಮಿಲ್ ಹತ್ಯೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಮೂರು ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನದಲ್ಲಿ ಊರ್ಧವ್ ಮ್ಯಾನೇಜ್ಮೆಂಟ್ ನ ಸಂಸ್ಥಾಪಕ ರು ಹಾಗೂ ವ್ಯವಸ್ಥಾಪಕ ನಿರ್ದೇಶಕ ವೆಂಕಟ್ ರೆಡ್ಡಿ ಪಾಟೀಲ್, ದೇಶ-ವಿದೇಶದ ಹಲವಾರು ತಂತ್ರಜ್ಞರು, ಕೈಗಾರಿಕೋದ್ಯಮಿಗಳು ಹಾಗೂ ವಿಜ್ಞಾನಿಗಳು ಪಾಲ್ಗೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here