ಪಿಡಿಎ ಕಾಲೇಜಿನಲ್ಲಿ ಮೂರು ದಿನಗಳ ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವ

0
20

ಕಲಬುರಗಿ: ಕಲಿಕೆಯ ಮಾರ್ಗದಲ್ಲಿರುವ ವಿದ್ಯಾರ್ಥಿಗಳಿಗೆ ಗುರಿ ಇರಬೇಕು, ಗುರಿ ಸಾಧಿಸಲು ಹಿಂದೆ ಗುರುವಿನ ಮಾರ್ಗದರ್ಶನವಿರಬೇಕು, ಗುರಿ ಮತ್ತು ಗುರುವಿನ ಮಾರ್ಗದರ್ಶನವಿದ್ದಾಗ ವಿದ್ಯಾರ್ಥಿಗೆ ಗುರುತು ಸಿಗುತ್ತದೆ. ಅಂತಹ ತಾಂತ್ರಿಕ ಮತ್ತು ಸಾಂಸ್ಕೃತಿಕ ಪ್ರತಿಭೆಯ ಗುರುತಿನ ಪ್ರದರ್ಶನವೇ ಇವತ್ತಿನ ನಿರ್ಮಾಣ-೨೦೨೨ ಉತ್ಸವ. ವಿದ್ಯಾರ್ಥಿಗಳು ಸಾಧನೆ ಮಾಡಬೇಕಾದರೆ, ವಿಶ್ವೇಶ್ವರಯ್ಯರಂತೆ ಅವಿರತ ಪರಿಶ್ರಮ, ಶಿಸ್ತು, ಸಮಯ ಪಾಲನೆ ಮಾಡಿದಾಗ ಮಾತ್ರ ನೀವೆಲ್ಲರೂ ವಿಶ್ವೇಶ್ವರಯ್ಯರಂತೆ ಬೆಳೆದು ನಮ್ಮ ಕಾಲೇಜು ಮತ್ತು ತಂದೆ ತಾಯಿಯರ ಕೀರ್ತಿ ಹೆಚ್ಚಿಸಬಹುದು. ಇತ್ತಿನ ಎಲ್ಲಾ ವಿದ್ಯಾರ್ಥಿಗಳ ಪ್ರೊಜೆಕ್ಟಗಳು ಪ್ರದರ್ಶನಗೊಂಡು ನಿಜ ಬದುಕಿನಲ್ಲಿ, ಸಾರ್ವಜನಿಕರಿಗೆ ಸದುಪಯೋಗ ಆಗಬೇಕೆಂದು,ಕಮ್ಯುನಿಕೇಷನ್ ಅಂಡ್ ಬಿಲ್ಡಿಂಗ್, ಪಿಡ್ಲ್ಯುಡಿ ಚೀಪ್ ಇಂಜಿನಿಯರ್‌ರವರಾದ ಜಗನ್ನಾಥ ಹಾಲಿಂಗೆಯವರು ನುಡಿದರು.

ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜು, ಸ್ಯಾಕ್ ಆಡಿಟೋರಿಯಂ ನಲ್ಲಿ ಆಯೋಜಿಸಿದ ಜುಲೈ, ೭, ೮, ೯ ರಂದು ಮೂರು ದಿನಗಳ ಕಾಲ ನಡೆಯುವ, ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವ ನಿರ್ಮಾಣ-೨೦೨೨ ರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ಶೈಕ್ಷಣಿಕ ಪಠ್ಯಕ್ರಮದ ಅಭ್ಯಾಸದ ನಡುವೆ ಮನಸ್ಸಿಗೆ ಮುದ ನೀಡುವ ಉಲ್ಲಾಸ ತರುವ ಹುಮ್ಮಸ್ಸು, ಚೇತನ, ವೃದ್ಧಿಸುವ ನಿರ್ಮಾಣ-೨೦೨೨ ರಂತಹ ಸಾಂಸ್ಕೃತಿಕ ಪ್ರತಿಭಾ ಪ್ರದರ್ಶನದಂತಹ ಕಾರ್ಯಕ್ರಮಗಳು ಪ್ರತಿ ಮೂರು ತಿಂಗಳಿಗೊಮ್ಮೆ ಜರುಗಬೇಕು. ಇಂತಹ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಡಳಿತ ಮಂಡಳಿಯ ಸಂಪೂರ್ಣ ಬೆಂಬಲವಿದೆ ಎಂದು ಹೈ.ಕ.ಶಿ ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ.ಸಿ. ಬಿಲಗುಂದಿಯವರು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದರು.

ವೇದಿಕೆ ಮೇಲೆ ಹೈಕಶಿ ಸಂಸ್ಥೆಯ ಉಪಾಧ್ಯಕ್ಷರಾದ  ಶರಣ ಬಸಪ್ಪ ಹರವಾಳ, ಕಾರ್ಯದರ್ಶಿಗಳಾದ  ಜಗನ್ನಾಥ ಬಿಜಾಪೂರೆ, ಜಂಟಿ ಕಾರ್ಯದರ್ಶಿಗಳಾದ ಡಾ. ಮಹದೇವಪ್ಪ ರಾಂಪೂರೆ, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು ಮತ್ತು ಹೈಕ.ಶಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ  ಸೋಮನಾಥ ನಿಗ್ಗುಡಗಿ, ವಾಸ್ತುಶಿಲ್ಪಿ  ಬಸವರಾಜ ಖಂಡೇರಾವ್, ಡಾ. ಶರಣಬಸಪ್ಪ ಕಾಮರೆಡ್ಡಿ,  ವಿನಯಪಾಟೀಲ್,  ಅರುಣಕುಮಾರ ಪಾಟೀಲ್,  ಸಾಯಿನಾಥ ಪಾಟೀಲ್, ಡಾ. ಅನಿಲಪಠ್ಠನ, ಕಾಲೇಜಿನ ಪ್ರಾಚಾರ್ಯರಾದ ಡಾ. ಶಶಿಧರ ಕಲಶೆಟ್ಟಿ, ಉಪ ಪ್ರಾಚಾರ್ಯರಾದ ಡಾ ಸಿದ್ದರಾಮ ಪಾಟೀಲ್, ಡಾ. ಕಲ್ಪನಾ ವಾಂಜೇರ್‌ಖೇಡೆ, ಟೆಕ್ನೋವಿಷನ್ ಸಂಚಾಲಕರಾದ ಡಾ. ದೇವಿ ಸೋಮಾ, ನಿರ್ಮಾಣ-೨೦೨೨ ನ ಸಂಚಾಲಕರಾದ ಡಾ. ಶರಣಗೌಡ ಮಾಲೀಪಾಟೀಲ್, ಸಂಯೋಜಕರಾದ ಪ್ರೊ.ಅಕ್ಷಯ ಆಸಪಲ್ಲಿ, ಡಾ. ಬಿ.ಜಿ. ಮಹೇಂದ್ರ, ಡಾ. ಧರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ವಾತಿದೇಶಪಾಂಡೆ ನೃತ್ಯದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರಾಚಾರ್ಯರಾದ ಡಾ. ಶಶಿಧರ ಕಲಶೆಟ್ಟಿ ಸ್ವಾಗತಿಸಿದರು. ಸಂಚಾಲಕಿ ಡಾ. ದೇವಿ ಸೋಮಾ ನಿರ್ಮಾಣ-೨೦೨೨ ರ ಪಕ್ಷಿನೋಟದ ವಿವರಣೆ ನೀಡಿದರು. ಡಾ. ಬಿ.ಜಿ. ಮಹೇಂದ್ರ ಅತಿಥಿ ಪರಿಚಯಿಸಿದರು. ಸಂಚಾಲಕ ಡಾ. ಶರಣಗೌಡ ಮಾಲೀಪಾಟೀಲ ವಂದಿಸಿದರು.

ಡಾ. ಧರ ಪಾಂಡೆ ಮತ್ತು ಡಾ. ಸುಜಾತ ಪಾಟೀಲ್ ನಿರೂಪಿಸಿದರು. ಟೆಕ್ನೋವಿಷನ್-೨೦೨೨ ರ ಸ್ಮರಿಣಿಕೆ ಬಿಡುಗಡೆಗೊಳಿಸಲಾಯಿತು, ವಿದ್ಯಾರ್ಥಿಗಳಿಂದ ಕಣ್ಮನ ಸೆಳೇಯುವ ಪ್ಲ್ಯಾಷ್ ಮೋಬ್ ನೃತ್ಯ ಪ್ರದರ್ಶನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಡೀನ್‌ರಾದ ಡಾ. ಭಾರತಿ ಹರಸೂರು, ಎಸ್. ಆರ್. ಹೊಟ್ಟಿ, ಮಾಧ್ಯಮ ಸಂಚಾಲಕರಾದ ಡಾ. ಬಾಬುರಾವ್ ಶೆರಿಕಾರ, ಎಲ್ಲಾ ವಿಭಾಗದ ಮುಖ್ಯಸ್ಥರು, ಉಪನ್ಯಾಸಕ ವೃಂದ, ಶಿಕ್ಷಕೇತರ ಸಿಬ್ಬಂಧಿ, ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು. ಸುಮಾರು ೧೫೦ ಸಂಶೋಧನಾ ಪ್ರೊಜೆಕ್ಟಗಳ ಪ್ರದರ್ಶನ ನಡೆಯಿತು.

ಇದಕ್ಕೂ ಮುಂಚೆ ಬೆಳಿಗ್ಗೆ ೬.೩೦ ಗಂಟೆಗೆ ನಿರ್ಮಾಣ-೨೦೨೨ ರ ಪ್ರಯುಕ್ತ ಮ್ಯಾರಾಥಾನ್ ಓಟವನ್ನು ಹಮ್ಮಿಕೊಳ್ಳಲಾಗಿತ್ತು. ಹೈ.ಕ.ಶಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ  ಬಸವರಾಜ ಖಂಡೇರಾವ್ ಮತ್ತು  ವಿನಯ ಪಾಟೀಲ್ ಧ್ವಜ ತೋರಿಸಿ, ಮ್ಯಾರಥಾನ್‌ಗೆ ಚಾಲನೆ ನೀಡಿದರು. ಈ ಮ್ಯಾರಥಾನ್, ಪಿಡಿಎ ಕಾಲೇಜಿನಿಂದ ಹೊರಟು, ಐವಾನ್ ಇ ಶಾಹಿ, ಮಿನಿ ವಿಧಾನಸೌಧ ಮೂಲಕ ಸರ್ದಾರ್ ವಲ್ಲಭಭಾಯಿ ಪಟೇಲ್ ಚೌಕನಿಂದ ಪುನಃ ಕಾಲೇಜಿಗೆ ತಲುಪಿತು. ಮ್ಯಾರಥಾನ್‌ನಲ್ಲಿ ವಿಜೇತರಾದ ಸಾಗರ್, ವಿಶ್ವನಾಥ, ವಿನಯ್‌ಪಾಟೀಲ್ ರವರಿಗೆ ಪ್ರಶಸ್ತಿ ನೀಡಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ, ಡಾ. ಎಸ್.ಎಸ್. ಕಲಶೆಟ್ಟಿ ಉಪಪ್ರಾಚಾರ್ಯರಾದ ಡಾ. ಸಿದ್ಧರಾಮ ಪಾಟೀಲ್, ಡಾ. ಕಲ್ಪನಾ ವಾಂಜೆರ‍್ಖೇಡೆ, ಸಂಚಾಲಕ ಡಾ. ಶರಣಗೌಡ ಮಾಲಿ ಪಾಟೀಲ್, ಸಂಚಾಲಕಿ ಡಾ. ದೇವಿ ಸೋಮಾ, ಸಂಯೋಜಕ ಅಕ್ಷಯ ಆಸ್ಪಲ್ಲಿ, ಡಾ. ಬಿ.ಜಿ ಮಹೇಂದ್ರ, ಡಾ. ಭಾರತಿ ಹರಸೂರು, ಡಾ. ರಾಜೇಂದಕುಮಾರ ಹರಸೂರು, ಡಾ. ಸುಜಾತ ತೇರದಾಳ, ಡಾ. ಎಂ.ಎಸ್. ಉಪ್ಪಿನ್, ಪ್ರೊ. ರಾಜೇಂದ್ರ ಚಿಂಚೋಳಿ, ಡಾ. ವಿಶ್ವನಾಥ ಬುರಕಪಲ್ಲಿ, ಡಾ. ರಾಜೇಂದ್ರ ಸಂಗಶೆಟ್ಟಿ, ಡಾ. ವಿಜಯ ಹಿರೇಮಠ, ವಿದ್ಯಾರ್ಥಿ ಸಂಯೋಜಕರಾದ  ಶರಣುಕಲಶೆಟ್ಟಿ ಸೇರಿದಂತೆ, ೫೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಮ್ಯಾರಾಥಾನ್ ಓಟದಲ್ಲಿ ಭಾಗವಹಿಸಿದ್ದರು. ಈ ಮ್ಯಾರಾಥಾನ್ ಕಾರ್ಯಕ್ರಮವನ್ನು ರಾಜುರಿ ಸ್ಟೀಲ್ ಕಂಪನಿಯು ಆಯೋಜನೆ ಮಾಡಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here