ಕಲಬುರಗಿ: 2022-23ನೇ ಸಾಲಿನ ರೋಟರಿ ಕ್ಲಬ್ ಅಧ್ಯಕ್ಷರಾಗಿ ರೊ. ರಮೇಶ ಪಾಟೀಲ್ ಹಾಗೂ ಕಾರ್ಯದರ್ಶಿಯಾಗಿ ಚೇತನಕುಮಾರ ಗಾಂಗಜೀ ಅವರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆದ ಇನ್ ಸ್ಟಾಲೇಶನ ಮತ್ತು ಇಂಡಕ್ಶನ್ ಸಮಾರಂಭದಲ್ಲಿ ರೊ.ರಮೇಶ್ ಪಾಟೀಲ್ (ಅಧ್ಯಕ್ಷರು) ಚೇತನಕುಮಾರ ಗಾಂಗಜೀ ಹಾಗೂ 15 ಜನ ನಿರ್ದೇಶಕರನ್ನು ಹಾಗೂ 12 ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಅವರನ್ನು ಅಭಿನಂದಿಸಲಾಯಿತು.
ದೇವನೂರ ಮಹಾದೇವರ ಪರಿಚಯ: ಅವರು ಬರೆದ ‘ಆರ್|ಎಸ್|ಎಸ್| ಆಳ ಮತ್ತು ಅಗಲ’ ಪುಸ್ತಕ
ಈ ಸಂದರ್ಭದಲ್ಲಿ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರುಡಾ.ದೀಪಕ್ ಪೋಪಲೆ,ಡಾ.ಸುಚೇತಾ ಪೋಪಲೆ. ಪಾರ್ವತಿ ನಿಲಂಗೆ, ಶಿವಲೀಲಾ ಕುಳಗೇರಿ, ಮಾಣಿಕ ಪವಾರ್, ಗೌತಮ್ ಜಹಾಂಗೀರದಾರ,ರಾಜು ಜವಳಕರ ಡಾ.ರಮೇಶ ಯಳಸಂಗಿಕರ, ಡಾ.ಸದಾಶಿವ ಜಡಗೇಕರ, ಅತಿಥಿಗಳಾಗಿ ಭಾಗವಹಿಸಿದ್ದರು ಎಂದು ರೋಟರಿ ಕ್ಲಬ್ ನಿರ್ದೇಶಕ ಡಾ.ಎ.ಎಸ್.ಭದ್ರಶೆಟ್ಟಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.