ರಾಷ್ಟ್ರೀಯ ಲಾಂಛನ ವಿರೂಪ- ಶಿವಾನಂದ ಆರ್ ಕಿಳ್ಳಿ

0
61

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ದೇಶದ ರಾಷ್ಟ್ರ ಲಾಂಛನವನ್ನು ವಿರೂಪಗೊಳಿಸಿದೆ ಎಂದು ಕಲಬುರ್ಗಿ ಯುವ ಕಾಂಗ್ರೆಸ್‌ ಸಂಯೋಜಕ ಶಿವಾನಂದ ಆರ್ ಕಿಳ್ಳಿ ಆರೋಪಿಸಿದ್ದಾರೆ.

ಸುಂದರ ಮತ್ತು ವಿಶ್ವಾಸದ ಮುಖದಿಂದ ಕೂಡಿರುವ ಅಶೋಕನ ಸಿಂಹದ ಬದಲಿಗೆ ಭಯಾನಕ ಹಾಗೂ ಆಕ್ರಮಣಕಾರಿ ಭಂಗಿ ಹೊಂದಿರುವ ಸಿಂಹಗಳ ರೀತಿಯಲ್ಲಿ ಲಾಂಛನವನ್ನು ಬದಲಾಯಿಸಲಾಗಿದೆ. ಈ ಹಿಂದೆ ಈಶ್ವರಪ್ಪನವರು ರಾಷ್ಟ್ರ ಧ್ವಜ ಬದಲಾವಣೆ ಹೇಳಿಕೆ ಕೊಟ್ಟು ಧ್ವಜ ಕ್ಕೆ ಅವಮಾನ ಮಾಡಿದರು. ಈಗ ರಾಷ್ಟ್ರ ಲಾಂಛನಕ್ಕೆ ಅವಮಾನ ಮಾಡಿ ಸಂವಿಧಾನ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಒಕ್ಕೂಟ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಸಿಂಹದ ಮುಖವನ್ನೊಮ್ಮೆ ಸರಿಯಾಗಿ ಗಮನಿಸಿ. ಇದು ಪ್ರಸಿದ್ಧ ಸಾರಾನಾಥದಲ್ಲಿದ್ದ ಸಿಂಹದ ಲಾಂಛನಗಳೇ ಅಥವಾ ಗಿರ್‌ ಸಿಂಹದ ವಿಕೃತ ಆವೃತ್ತಿಯೇ? ಇದನ್ನು ಮತ್ತೊಮ್ಮೆ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಸರಿಪಡಿಸಿ ಎಂದು ಮನವಿ ಮಾಡಿ, ನಮ್ಮ ರಾಷ್ಟ್ರೀಯ ಚಿಹ್ನೆ, ಭವ್ಯ ಅಶೋಕನ ಸಿಂಹಗಳಿಗೆ ಅವಮಾನವಾಗಿದೆ. ಮೂಲ ಸಾರಾನಾಥದ ಸಿಂಹದ ಚಿತ್ರ ಎಡಭಾಗದಲ್ಲಿದೆ, ಆಕರ್ಷಕವಾಗಿದೆ, ಪ್ರಾಮಾಣಿಕವಾಗಿ ಆತ್ಮವಿಶ್ವಾಸವಿದೆ. ಬಲಭಾಗದಲ್ಲಿದ್ದು ಮೋದಿಯವರ ಆವೃತ್ತಿಯಾಗಿದೆ, ಹೊಸ ಸಂಸತ್ತಿನ ಕಟ್ಟಡದ ಮೇಲೆ ಇರಿಸಲಾಗಿದೆ . ಗರ್ಜನೆ ಮಾಡುತ್ತಿರುವ, ಅನಗತ್ಯವಾಗಿ ಆಕ್ರಮಣಕಾರಿಯಾಗಿ ಅಸಮಂಜಸವಾಗಿರುವ ನಾಚಿಕೆಗೇಡಿನ ಆವೃತ್ತಿ ಇದಾಗಿದೆ. ಇದನ್ನು ತಕ್ಷಣವೇ ಬದಲಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here