ಆಂದ್ರದಲ್ಲಿ ಕಲಬುರ್ಗಿ ಕಲಾವಿದರ ಕಲೆ ಪ್ರದರ್ಶನ

0
146

ಕಲಬುರಗಿ: ನಗರದ ಇಬ್ಬರು ಕುಂಚ ಕಲಾವಿದರ ಚಿತ್ರಕಲಾ ಪ್ರದರ್ಶನ ಜು.೧೫ ರಿಂದ ೧೯ರ ವರೆಗೆ ಮೂರು ದಿನಗಳ ಕಾಲ ಆಂದ್ರ ಪ್ರದೇಶದ ಹೈದರಾಬಾದ ನಗರದ ಸುಂದಯ್ಯಾ ವಿಜ್ಞಾನಕೇಂದ್ರ ಸಮೀಪದ ಪ್ರತಿಷ್ಠಿತ ಆಯಿಲಮ್ಮಾ ಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಲಾಗಿದೆ.

ಕಲಾವಿದರಾದ ಕೇಶವರಾಜ ಹಾಗರಗಿ ಹಾಗೂ ಜಗದೀಶ ಎಚ್.ಅಂಬಲಗಿ ಅವರ ಕಲಾಕೃತಿಗಳು ಸೋಲೋ ಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿದ್ದು, ಪ್ರತಿದಿನ ಬೆಳಗ್ಗೆ ೧೦:೩೦ ರಿಂದ ಸಂಜೆ ೪:೩೦ ವರೆಗೆ ಪ್ರದರ್ಶನ ನಡೆಯಲಿದೆ. ಜಗದೀಶ ಅಂಬಲಗಿ ಅವರ ಕಲಾಕೃತಿಗಳ ಪ್ರದರ್ಶನ ಜು.೧೫ ರಿಂದು ಉದ್ಘಾಟನೆಯಾದರೆ, ಕೇಶವರಾಜ ಹಾಗರಗಿ ಅವರ ಕಲಾಕೃತಿಗಳು ಜು.೧೭ ರಂದು ಉದ್ಘಾಟನೆಗೊಳ್ಳಲಿವೆ.

Contact Your\'s Advertisement; 9902492681

ಈ ಇಬ್ಬರು ಕಲಾವಿದರು ಒಂದೇ ಗ್ಯಾಲರಿಯಲ್ಲಿ ಪ್ರತ್ಯೇಕ ದಿನಗಳಲ್ಲಿ ಪ್ರದರ್ಶನ ಏರ್ಪಡಿಸುತ್ತಿದ್ದು, ಹೆಸರಾಂತ ಹಿರಿಯ ಕಲಾವಿದರು ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here