ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಿದ ಗಜವೇ

0
147
ಸಮಾಜ ಮರಳಿ ನೀಡು ಅಭಿಯಾನ

ಆನೇಕಲ್: ಗಂಧದನಾಡು ಜನಪರ ವೇದಿಕೆ-ಗಜವೇ ವತಿಯಿಂದ “ಸಮಾಜಕ್ಕೆ ಮರಳಿ ನೀಡು” ಅಭಿಯಾನದ ಪ್ರಯುಕ್ತ ಇಂದು ಆನೇಕಲ್ ತಾಲೂಕಿನ ಕಾವಲ ಹೊಸಹಳ್ಳಿ ಜನತಾ ಕಾಲೋನಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳು ಹಾಗೂ ಕಲಿಕಾ ಸಾಮಗ್ರಿಗಳ ವಿತರಣೆ ಮಾಡಲಾಯಿತು.

Contact Your\'s Advertisement; 9902492681

ಇದೇ ವೇಳೆ 2021-22ನೇ ಸಾಲಿನಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿ ಅತಿ ಹೆಚ್ಚು ಅಂಕಗಳಿಸಿದ 7ಹೆಣ್ಣು ಮಕ್ಕಳಿಗೆ ಸನ್ಮಾನ ಹಾಗೂ ಒಬ್ಬ ಹೆಣ್ಣು ಮಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಧನಸಹಾಯ ನೀಡಲಾಯಿತು.

ಕಾರ್ಯಕ್ರಮದಲ್ಲಿ ಗಜವೇ ಸಂಸ್ಥಾಪಕ ಅಧ್ಯಕ್ಷ ವಿಜಯರಾಮ, ರಾಯಸಂದ್ರ ಜಿ.ದೊರೆಸ್ವಾಮಿ, ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಿಡಿಹೊಸಕೋಟೆ ಮುನಿಕೃಷ್ಣಪ್ಪ, ಲಯನ್ಸ್ ಕ್ಲಬ್ ರಿಜಿನಲ್ ಚೇರ್ ಪರ್ಸನ್ ಮೋಹನ್ ಕುಮಾರ್, ಶ್ರೀ ವಿನಾಯಕ ಏಜೇನ್ಸಿಸ್ ಮಾಲಿಕರಾದ ಮುನಿತಿಮ್ಮಾರೆಡ್ಡಿ, ಚಂದಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ್ ಬಿಜೂರ್, ಹೋರಾಟಗಾರ್ತಿ ಮಮತಾ ಯಜಮಾನ್, ಕವಿ/ನಿವೃತ್ತ ಶಿಕ್ಷಕ ಪ್ರಭಾಕರ್ ರೆಡ್ಡಿ, ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಸರಸ್ವತಮ್ಮ, ನೆರಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ವಿಜಯಕುಮಾರಿ, ವಕೀಲರಾದ ಪುರುಷೋತ್ತಮ್, ಮುರಳಿ, ಶ್ರೀನಿವಾಸನ್ ಟ್ರಸ್ಟ್ ಕಮಲಕಣ್ಣನ್, ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಈ ಅಭಿಯಾನದ ಉಸ್ತುವಾರಿಗಳಾದ ಗಜವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಹಾಗೂ ರಾಜ್ಯ ಕಾರ್ಯದರ್ಶಿ ದೇವರಾಜ್ ನಾಯ್ಕ, ರಾಜ್ಯ ಖಜಾಂಚಿ ಬಂಡಾಪುರ ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ಚಂದ್ರಬಾಬು, ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಸ್ವಾಭಿಮಾನಿ ಸತೀಶ್, ಬೆಂ.ದ.ವಿ.ಕ್ಷೇತ್ರದ ಅಧ್ಯಕ್ಷರಾದ ಸುನೀಲ್ ಕುಮಾರ್, ಆನೇಕಲ್ ವಿಧಾನ ಸಭಾ ಕ್ಷೇತ್ರದ ಬೀಡಾ ರಾಜಪ್ಪ, ಗಜವೇ ಪದಾಧಿಕಾರಿಗಳಾದ ಹೇಮಂತ್ ಕುಮಾರ್, ರಾಜೇಶ್, ಮಹಂತಲಿಂಗಾಪುರ ಮಂಜು, ಅರ್ಜುನ್, ತಿಮ್ಮರಾಯಪ್ಪ, ವರುಣ್, ಯುವ ಮುಖಂಡ ಚಿಕ್ಕಹಾಗಡೆ ಶ್ರೀನಿವಾಸ್, ಶ್ರೀನಿವಾಸನ್ ಟ್ರಸ್ಟ್ ವನಜಾಕ್ಷಿ ಸೇರಿದಂತೆ ಹಲವರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here