ವಚನ ಸಾಹಿತ್ಯ ಸಂರಕ್ಷಿಸುವ ಕೆಲಸ ಮಾಡಿದವರು ಡಾ. ಫ.ಗು.ಹಳಕಟ್ಟಿ: ಸತ್ಯಂಪೇಟೆ

0
59

ಶಹಾಬಾದ: ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡಿದವರಲ್ಲಿ ಡಾ. ಫ.ಗು.ಹಳಕಟ್ಟಿಯವರು ಮೊದಲಿಗರು ಎಂದು ಶರಣ ಸಾಹಿತಿ, ಪತ್ರಕರ್ತ ಡಾ.ಶಿವರಂಜನ್ ಸತ್ಯಂಪೇಟೆ ಹೇಳಿದರು.

ಅವರು ನಗರದ ಶರಣಬಸವೇಶ್ವರ ದೇವಾಲಯದಲ್ಲಿ ಕಸಾಪವತಿಯಿಂದ ಫ.ಗು.ಹಳಕಟ್ಟಿ ಅವರ ಬದುಕು, ಬರಹ ಕುರಿತು ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಈ ಹಿಂದೆ ಸಾಹಿತ್ಯ ಸಂಗ್ರಹಣೆ ಮತ್ತು ಮುದ್ರಣ ಬಹಳ ಕಷ್ಟವಾಗಿತ್ತು. ಕಾಗದ ಲೇಖನ ಸಾಮಗ್ರಿ ಮುದ್ರಣ ಸೇರಿದಂತೆ ಯಾವುದೇ ಸೌಲಭ್ಯಗಳು ಇರಲಿಲ್ಲ. ಅಂತಹ ಕಷ್ಟಕರ ಪರಿಸ್ಥಿತಿಯಲ್ಲಿಯೂ ಸಹ ವಚನ ಸಾಹಿತ್ಯ ಸಂರಕ್ಷಿಸುವ ಕೆಲಸ ಮಾಡಿರುವುದು ಸ್ಮರಣೀಯ.

ಇಡೀ ಸಾಹಿತ್ಯ ವಲಯದಲ್ಲಿ ವಚನ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ. ಹಿಂದೆ ಕೇವಲ 40 ಶರಣರ ಮಾಹಿತಿ ಲಭ್ಯವಿತ್ತು. ಆದರೆ ಇವರು 450 ಕ್ಕೂ ಹೆಚ್ಚು ಶರಣರ ಹಾಗೂ ಅವರ ವಚನಗಳ ಸಾಹಿತ್ಯ ಸಂಗ್ರಹಿಸಿ ಪರಿಚಯಿಸಿದ್ದಾರೆ. ತಮ್ಮ ಸಂಶೋಧನೆಗಳ ಮೂಲಕ ಅನೇಕ ಶರಣರ ವಚನಗಳು ಬೆಳಕು ಕಾಣುವಂತೆ ಮಾಡಿದರು. ವಚನ ಸಾಹಿತ್ಯದ ಸಂಶೋಧನೆ, ಅಧ್ಯಯನ ಮತ್ತು ಅಧ್ಯಾಪನಕ್ಕೆ ಮುನ್ನುಡಿ ಬರೆದು ವಚನ ಸಂಶೋಧನ ಪಿತಾಮಹರೆನಿಸಿಕೊಂಡಿದ್ದಾರೆ ಎಂದರು.

ವಚನ ಸಾಹಿತ್ಯದ ಮೂಲ ಪ್ರತಿಗಳ ಸಂಗ್ರಹಕ್ಕೆ ಮನೆ ಮನೆಗೆ ತೆರಳಿ ಬೇಡಿದ ಅವರ ತ್ಯಾಗ ಅರ್ಪಣಾ ಮನೋಭಾವ ಮತ್ತು ಅವುಗಳ ಸಂರಕ್ಷಣೆ ಹಾಗೂ ಮುದ್ರಣಕ್ಕೆ ತಮ್ಮ ಜೀವನವನ್ನೇ ಮುಡುಪಾಗಿತ್ತು ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಅತ್ಯಮೂಲ್ಯ ಕೊಡುಗೆ ಅವರನ್ನು ವಚನ ಸಾಹಿತ್ಯದ ಪಿತಾಮಹ ಎಂದು ಗುರುತಿಸುವಂತೆ ಮಾಡಿದೆ ಮನೆಗಳಲ್ಲಿ ಧಾರ್ಮಿಕತೆ ಹೆಸರಿನಲ್ಲಿ ಪೂಜಿಸಲ್ಪಡುತ್ತಿದ್ದ ವಚನ ಸಾಹಿತ್ಯದ ತಾಳೆಗರಿಗಳನ್ನು ಮನೆಯ ಅಟ್ಟದ ಮೇಲೆ ಧೂಳು ಹಿಡಿದಿದ್ದ ಹುಳುಗಳು ತಿಂದಿದ್ದ ಅಧರ್ಂಬರ್ಧ ನಾಶವಾಗಿದ್ದ ವಚನಗಳ ಮೂಲ ಪ್ರತಿಗಳನ್ನು ಸಂಬಂಧಪಟ್ಟ ಮನೆಯವರಿಂದ ಸಂಗ್ರಹಿಸಿ ರಕ್ಷಿಸಿದ್ದಾರೆ.

ತಾವು ಸಂಗ್ರಹಿಸಿದ ವಚನಗಳ ಮುದ್ರಣಕ್ಕೆ ಮುದ್ರಣಾಲಯ ಆರಂಭಿಸಲು ತಮ್ಮ ಸ್ವಂತ ಮನೆಯನ್ನೇ ಮಾರಾಟ ಮಾಡಿ ಜೀವನದ ಕೊನೆಯವರೆಗೂ ಬಡತನ ಅನಾರೋಗ್ಯದಲ್ಲಿ ಅತ್ಯಂತ ಸರಳ ಜೀವನ ನಡೆಸಿದ ಹಳಕಟ್ಟಿ ಅವರು ವಚನ ಸಾಹಿತ್ಯ ವಿಶ್ಲೇಷಿಸಿ ವರ್ಗೀಕರಿಸದೆ ಇದ್ದಲ್ಲಿ ಅಜ್ಞಾತವಾಗಿ ಉಳಿದಿದ್ದ ಕನ್ನಡದ ಅಮೂಲ್ಯ ವಚನ ಗ್ರಂಥ ಬಂಡಾರ ಎಂದು ವಿಶ್ವಾಸಕ್ಕೆ ಪರಿಚಯವಾಗುತ್ತಿರಲಿಲ್ಲ. ಅವರ ಬದುಕು ಹಾಗೂ ಅವರು ಮಾಡಿರುವ ಸೇವೆ ಅವೀಸ್ಮರಣಿಯವಾದುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವೈದ್ಯರಾದ ಡಾ.ವಿ.ಸಿ.ಇಂಗಿನಶೆಟ್ಟಿ, ಡಾ.ಸದಾನಂದ ಕೋರಿ,ಡಾ.ವಿನೋದ ಕೌಲಗಿ ಸೇರಿದಂತೆ ಪತ್ರಕರ್ತರನ್ನು ಸನ್ಮಾನಿಸಲಾಯಿತು.ಕಸಾಪ ತಾಲೂಕಾಧ್ಯಕ್ಷ ಶರಣಬಸಪ್ಪ ಕೋಬಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗ ಬಾಳಿ, ಕಸಾಪ ಸಂಸಘ ಸಂಸ್ಥೆಗಳ ಪ್ರತಿನಿಧಿ ವಿಜಯಕುಮಾರ ಮುಟ್ಟತ್ತಿ, ಕೋಶಾಧ್ಯಕ್ಷ ಬಾಬುರಾವ ಪಂಚಾಳ,ವೀರಶೈವ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿಬಾಯಿ ರಾವೂರ ವೇದಿಕೆಯ ಮೇಲಿದ್ದರು.

ಗಿರಿಮಲ್ಲಪ್ಪ ವಳಸಂಗ ಪ್ರಾಸ್ತಾವಿಕ ನುಡಿದರು, ಲೋಹಿತ್ ಕಟ್ಟಿ ನಿರೂಪಿಸಿದರು. ರಾಜು ಕೋಬಾಳ ವಚನ ಗಾಯನ ಮಾಡಿದರು. ದಶರಥ ಕೋಟನೂರ್ ಸ್ವಾಗತಿಸಿದರು, ಶರಣು ವಸ್ತ್ರದ್ ವಂದಿಸಿದರು.

ಪ್ರಮುಖರಾದ ಅಣವೀರ ಇಂಗಿನಶೆಟ್ಟಿ, ವೀರಶೈವ ಸಮಾಜದ ಅಧ್ಯಕ್ಷ ಸೂರ್ಯಕಾಂತ ಕೋಬಾಳ, ಕಸಾಪ ಮಾಜಿ ಅಧ್ಯಕ್ಷನಾಗಣ್ಣ ರಾಂಪೂರೆ,ಲಿಂಗರಾಜ ಮಲಕೂಡ,ಶರಣಗೌಡ ಪಾಟೀಲ(ಗೋಳಾ),ನಿಂಗಣ್ಣ ಹುಳಗೋಳಕರ್,ಕನಕಪ್ಪ ದಂಡಗುಲಕರ್, ಶ್ರೀಶೈಲಪ್ಪ ಅವಂಟಿ,ಲಿಂಗರಾಜ ಮಲಕೂಡ,ಬಸವ ಸಮಿತಿ ಅಧ್ಯಕ್ಷ ನೀಲಕಂಠ ಮುದೋಳಕರ್,ಅಮೃತ ಮಾನಕರ, ಕಸಾಪ ಕಲಬುರಗಿ ಗ್ರಾಮೀಣ ಅಧ್ಯಕ್ಷ ಶರಣಗೌಡ, ಬಸವರಾಜ ಬಿರಾದಾರ,ಸುಭಾಷ ಜಾಪೂರ ಪಾಟೀಲ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here