ಮಳೆಗಾಗಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಬುಟ್ಟಿಜಾತ್ರೆ

0
159

ಕಲಬುರಗಿ: ಮಳೆಗಾಗಿ ಪ್ರಾರ್ಥಿಸಿ ಕಲಬುರಗಿಯ ಸ್ವಸ್ತಿಕ ನಗರದ ಮಹಿಳೆಯರು ಶ್ರೀ ಮಹಾಲಕ್ಷ್ಮಿ ದೇವಾಲಯದ ಅವರಣದಲ್ಲಿ ಬುಟ್ಟಿಜಾತ್ರೆ ನಡೆಸಲಾಯಿತು.

ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಿಂದ ಸಜ್ಜೆರೊಟ್ಟಿ, ಬಿಳಿಜೋಳರೊಟ್ಟಿ, ದಪಾಟಿ, ಚಪಾತಿ, ಕಡಬು, ಬಜ್ಜಿ, ಹಿಂಡಿಪಲ್ಲೆ, ತುಂಬಿದ ಬದ್ನಿಕಾಯಿ, ಪಿಟ್ಲ, ಪುಂಡಿಪಲ್ಯ, ಬರ್ತಾ, ಅಗಸಿ ಹಿಂಡಿ, ಸೇಂಗಾದ ಹಿಂಡಿ, ಲಡ್ಡು, ಹುಗ್ಗಿ, ಬೂಂದಿ, ಪೇಡಾ, ಸೇಂಗಾದ ಹೋಳಿಗಿ, ಸಜ್ಜಕದ ಹೋಳಿಗಿ, ಜಿಲೇಬಿ, ಚಿತ್ರಾನ್ನ, ಬಿಳಿಅನ್ನ, ಲೆಮನ್ ರೈಸ್, ಸಾಂಬಾರ್ ಮೊಸರನ್ನ ಮುಂತಾದ ಖಾದ್ಯ ಪದಾರ್ಥಗಳನ್ನು ಮಾಡಲಾಗಿತ್ತು 1200 ಕ್ಕೂ ಹೆಚ್ಚು ಜನ ತುಂತುರು ಮಳೆಯ ನಡುವೆ ಊಟ ಸವಿದರು.

Contact Your\'s Advertisement; 9902492681

ಸ್ವಸ್ತಿಕ ನಗರದ ಮಹಿಳಾ ಸಮಾಜದ ವತಿಯಿಂದ ಪ್ರತೀ ವರ್ಷ ಬುಟ್ಟಿ ಜಾತ್ರೆ, ದಸರಾ ಉತ್ಸವ, ಶ್ರಾವಣ ಮಾಸದ ವಿಶೇಷ ಕಾರ್ಯಕ್ರಮಗಳು ಅಲ್ಲದೇ ಅನೇಕ ವಿಶೇಷ ಕಾರ್ಯಗಳನ್ನು ಆಯೋಜಿಸಿ ನಗರದಲ್ಲಿ ಹಳ್ಳಿ ಸಂಸ್ಕ್ರತಿಯ ಚಟುವಟಿಕೆಗಳನ್ನು ಅತ್ಯಂತ ಉತ್ಸಾಹದಿಂದ ನಡೆಸುತ್ತಿರುವುದು ವಿಶೇಷವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here