ಜೇವರ್ಗಿ: ಶೈಕ್ಷಣಿಕ ಪ್ರಗತಿಗೆ ಧರಂಸಿಂಗ್ ಫೌಂಡೇಷನ್ ಕಟಿಬದ್ಧ- ಶಾಸಕ ಡಾ. ಅಜಯ್ ಸಿಂಗ್

0
19
  • ಮತ್ತೆ ಗ್ರಾಮ ವಾಸ್ತವ್ಯ ಆರಂಭಿಸುವೆ- ಶಾಸಕ ಡಾ. ಅಜಯ್ ಸಿಂಗ್
  • ಶೇ. 100 ರಷ್ಟು ಎಸ್ಸೆಸ್ಸೆಲ್ಸಿ ಫಲಿತಾಂಶ ಸಾಧನೆ ಗುರಿಯೊಂದಿಗೆ ಹೊಸ ಹೆಜ್ಜೆ

ಕಲಬುರಗಿ/ ಜೇವರ್ಗಿ: ಕೋವಿಡ್ ಕಾರಣದಿಂದಾಗಿ ತಾತ್ಕಾಲಿಕವಾಗಿ ನಿಲುಗಡೆಯಾಗಿದ್ದ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿಗಳನ್ನು ಒಳಗೊಂಡಿರುವ ಜೇವರ್ಗಿ  ಮತಕ್ಷೇತ್ರದ ತಮ್ಮ ಗ್ರಾಮ ವಾಸ್ತವ್ಯ ಬರುವ ದಿನಗಳಲ್ಲಿ ಮುಂದುವರಿಯಲಿದೆ ಎಂದು ಶಾಸಕ ಡಾ. ಅಜಯ್ ಸಿಂಗ್ ಹೇಳಿದ್ದಾರೆ.

ಜೇವರ್ಗಿ ಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಮ್ಮ ಹುಟ್ಟು ಹಬ್ಬದ ನಿಮಿತ್ತ ತಾವು ಶುರು ಮಾಡಿದ್ದ ಗ್ರಾಮ ವಾಸ್ತವ್ಯಕ್ಕೆ ಜನ ಸ್ಪಂದನೆ ತುಂಬ ಚೆನ್ನಾಗಿತ್ತು. ಅನೇಕ ಸಮಸ್ಯೆಗಳಿಗೂ ಪರಿಹಾರ ದೊರಕಿದೆ. ಈ ಬಗ್ಗೆ ಜನರೂ ಸಂತುಷ್ಟರಿದ್ದಾರೆ. ಕೋವಿಡ್ ಕಾರಣಕ್ಕಾಗಿ ಅದು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಆಗಸ್ಟ್ ನಿಂದ ಮತ್ತೆ ತಮ್ಮ ಗ್ರಾಮ ವಾಸ್ತವ್ಯ ಶುರು ಮಾಡುವುದಾಗಿ ಡಾ. ಅಜಯ್ ಸಿಂಗ್ ಹೇಳಿದರು.

Contact Your\'s Advertisement; 9902492681

ಇದನ್ನೂ ಓದಿ: ಕಲಬುರಗಿಯಲ್ಲಿ ಮೌನ ಸತ್ಯಾಗ್ರಹ

ಜೇವರ್ಗಿ ತಾಲೂಕನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವ ತಮ್ಮ ಸಂಕಲ್ಪಕ್ಕೆ ತಾವು ಬದ್ಧರಾಗಿರೋದಾಗಿ ಹೇಳಿದರಲ್ಲದೆ ಧರಂಸಿಂಗ್ ಫೌಂಡೇಷನ್ ಹಾಗೂ ಬೆಂಗಳೂರಿನ ಶಿಕ್ಷಣ ತಜ್ಞರನ್ನು ಜೇವರ್ಗಿಗೆ ಕರೆಯಿಸಿ ಇಲ್ಲಿನ ಶಿಕ್ಷಣ ಮಟ್ಟ ಶೇ. 100 ರಷ್ಟು ಫಲಿತಾಂಶ ಸಾಧನೆಗೆ ಅರ್ಹವಾಗಿರುವಂತೆ ತಾವು ಬರುವ ದಿನಗಳಲ್ಲಿ ಅಗತ್ಯ ವಾತಾವರಣ ರೂಪಿಸುವ ದಿಶೆಯಲ್ಲಿ ಹೊಸ ಪ್ರಯತ್ನಗಳನ್ನು ಮಾಡೋದಾಗಿಯೂ ಹೇಳಿದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ ಜೇವರ್ಗಿ ಹಾಗೂ ಡ3ಆಮಿ ತಾಲೂಕಿನಲ್ಲಿ ಶಾಲೆಗಳು ಶಿಥಿಲಗೊಂಡಿದ್ದಲ್ಲಿ ಅವುಗಳ ದುರಸ್ಥಿಗೆ, ಕೋಣೆಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡೋದಾಗಿ ಹೇಳಿದರಲ್ಲದೆ ತಮ್ಮೂರ ಶಾಲೆಗಳ ಶಿಥಿಲತೆ, ದುರವಸ್ಥೆ ಬಗ್ಗೆ ಜನರೂ ತಮ್ಮ ಗಮನಕ್ಕೆ ತರಬಹುದು. ಶಾಲೆಗಳು ಸುಸ್ಥಿರವಾಗಿದ್ದಿಲ್ಲಿ ಮಾತ್ರ ಮಕ್ಕಳ ಶಿಕ್ಷಣ ಸುಗಮವಾಗುತ್ತದೆ. ಈ ದಿಶೆಯಲ್ಲಿ ತಾವು ಬರುವ ದಿನಗಳಲ್ಲಿ ತಮ್ಮ ಅನುದಾನ ಸೇರಿದಂತೆ ಎಲ್ಲಾ ಲಭ್ಯ ಅನುದಾನ ಹೆಚ್ಚಿನ ಪ್ರಮಾಣದಲ್ಲಿ ಶಾಲೆಗಳ ರಿಪೇರಿ ಹಾಗೂ ಪುನರ್ ನಿರ್ಮಾಣಕ್ಕೇ ಹೆಚ್ಚಿಗೆ ವಿನಿಯೋಗಿಸೋದಾಗಿ ಭರವಸೆ ನೀಡಿದರು.

ಇದನ್ನೂ ಓದಿ: ಕಲಬುರಗಿ-ಸಂಸದರ ಸಹೋದರ ಸರಕಾರಕ್ಕೆ ಸುಳ್ಳು ಮಾಹಿತಿ ನೀಡಿದ ಆರೋಪ : ರಾಜೀನಾಮೆಗೆ ಪಟ್ಟು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here