ಅಧ್ಯಾತ್ಮಿಕ ಪ್ರವಚನದಿಂದ ಬದುಕಿಗೆ ನೆಮ್ಮದಿ: ಶಾಮರಾವ ಪ್ಯಾಟಿ

0
51

ಕಲಬುರಗಿ:ಪ್ರತಿಯೋಬ್ಬರು ಅಧ್ಯಾತ್ಮಿಕ ಪ್ರವಚನಗಳನ್ನು ಕೇಳುವುದರಿಂದ ಬದುಕಿಗೆ ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂದು ಶರಣ ಚಿಂತಕ ಹಾಗೂ ಜಿಡಿಎ ಮಾಜಿ ಅಧ್ಯಕ್ಷರಾದ ಶಾಮರಾವ ಪ್ಯಾಟಿ ಹೇಳಿದರು.

ಜಯನಗರ ಶಿವಮಂದಿರದಲ್ಲಿ ಶ್ರಾವಣ ಮಾಸದ ನಿಮಿತ್ತ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಜರುಗುತ್ತಿರುವ 15 ನೇ ದಿನದ ಅಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶರಣರು,ಸಂತರು ನಡೆಸಿದ ಸರಳ ಜೀವನ ಇಂದಿನ ಜನಾಂಗಕ್ಕೆ ಮಾದರಿಯಾಗಬೇಕು.ಬಸವಣ್ಣನವರು, ಕಲಬುರಗಿ ಶರಣಬಸವೇಶ್ವರರು ಪರೋಪಕಾರಿಯಾಗಿ ಬದುಕಿದರು.ಕಾಯಕದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆ ಮೆರೆದವರು.

Contact Your\'s Advertisement; 9902492681

ಜಾತಿ, ಧರ್ಮ,ಭೇದ ಭಾವ ಅನ್ನದೆ ಮಾನವ ಕುಲದ ಉದ್ಧಾರಕ್ಕಾಗಿ, ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನರು.ಅಂಥವರ ಪ್ರವಚನ, ಪುರಾಣಗಳು ಕೇಳುವ ಮೂಲಕ ಬದುಕಿಗೆ ಹೊಸ ಚೈತನ್ಯ ತಂದುಕೊಳ್ಳಬೇಕು ಎಂದ ಅವರು ಅಕ್ಕಮಹಾದೇವಿ ಕನ್ನಡದ ಮೊದಲ ಮಹಿಳಾ ಕವಿತ್ರಿಯಾಗಿದ್ದು ಹೆಮ್ಮೆಯ ವಿಷಯ.ಚಿಕ್ಕ ವಯಸ್ಸಿನಲ್ಲಿ ಸಕಲ ಸುಖವನ್ನು ತ್ಯಜಸಿ, ಲೌಕಿಕ ಜೀವನವನ್ನು ತೊರೆದು ಶರಣ ಚಳುವಳಿಯ ಪ್ರಮುಖರಾಗಿ,ಸ್ವಾಭಿಮಾನದ ಪ್ರತೀಕವಾಗಿ ಬೆಳೆದವರು ಎಂದು ಗುಣಗಾನ ಮಾಡಿದರು.

ಪ್ರವಚನಕಾರರಾಗಿ ಆಗಮಿಸಿದ ಶರಣ ಶಿವಲಿಂಗಪ್ಪ ಚೆಂಗನಾಳ ಅವರು ಮಾತನಾಡಿ ಶರಣರ ಧರ್ಮ ಎಲ್ಲರಲ್ಲೂ ಸಮಾನತೆ ಕಾಣುವ, ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರಣೆ ನೀಡುತ್ತದೆ.ಸಕಲ ಜೀವರಾಶಿಯ ಲೇಸನ್ನೇ ಬಯಸಿ ಬಸವಣ್ಣನವರ ವಚನಗಳ ಮೂಲಕ ದಾರಿ ತೋರುವ ಬೇಳಕಾಗಿದೆ ಎಂದು ಹೇಳಿದ ಅವರು ಜಯನಗರ ಶಿವಮಂದಿರದಲ್ಲಿ ನಿರಂತರ ಯಶಸ್ವಿಯಾಗಿ 15 ದಿನದಿಂದ ಪ್ರವಚನ ನಡೆದಿದ್ದು ಸಂತೋಷ ತಂದಿದೆ ಎಂದು ಹೇಳಿದರು.

ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅಧ್ಯಕ್ಷತೆ ವಹಿಸಿದ್ದರು.ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಬಾಲಕೊಂದೆ, ಉಪಾಧ್ಯಕ್ಷ ವಿರೇಶ ದಂಡೋತಿ ಡಾ.ಎ.ಎಸ್.ಭದ್ರಶೆಟ್ಟಿ ವೇದಿಕೆಯಲ್ಲಿ ಇದ್ದರು.ಶ್ರೀಮತಿ ವಿಜಯಲಕ್ಷ್ಮೀ ಚೆಂಗನಾಳ ಅವರು ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯದರ್ಶಿ ಶಿವಪುತ್ರಪ್ಪ ಮರಡಿ ಕಾರ್ಯಕ್ರಮ ನಿರೂಪಿಸಿದರು.ಪ್ರಮುಖರಾದ ಬಸವರಾಜ ಮಾಗಿ, ಮಲ್ಲಿಕಾರ್ಜುನ ಕಲ್ಲಾ, ವಾಸುದೇವ ಮಾಲಿ ಬೀರಾದಾರ, ಬಸವರಾಜ ಅನ್ವರಕರ,ಎಂ.ಡಿ.ಮಠಪತಿ,ಬಡಶೇಷಿ, ಮಲ್ಲಯ್ಯ ಸ್ವಾಮಿ ಬಿದಿಮನಿ, ಸುರೇಖಾ ಬಾಲಕೊಂದೆ, ಗೀತಾ ಸಿರಗಾಪೂರ, ಅನುರಾಧ ಕುಮಾರಸ್ವಾಮಿ ಸೇರಿದಂತೆ ಬಡಾವಣೆಯ ಅನೇಕ ಮಹಿಳೆಯರು, ಹಿರಿಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here