ಫಿರದೋಸ್ ನಗರದಲ್ಲಿ ಧ್ವಜಾರೋಹಣ: ಸಿಹಿ ಹಂಚಿ 75ನೇ ಸ್ವತಂತ್ರೋತ್ಸವ ಆಚರಣೆ

0
14

ಕಲಬುರಗಿ: ಇಲ್ಲಿನ ಫಿರದೋಸ್ ನಗರ ವೇಲ್ಫರ್ ಸೂಸೈಟಿ ಮತ್ತು ಯುವ ಜಾಗೃತಿ ವೇದಿಕೆ ಸಯೋಗದಲ್ಲಿ ಸೋಮವಾರ 75ನೇ ಸ್ವಾತಂತ್ರೋತ್ಸವ ಆಚರಣೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಫಿರದೋಸ್ ನಗರ ವೇಲ್ಫರ್ ಸೂಸೈಟಿಯ ಅಧ್ಯಕ್ಷರಾದ ದಸ್ತೇಗಿರ್ ಅಹ್ಮದ್, ಯುವ ಜಾಗೃತಿ ವೇದಿಕೆಯ ಕಾರ್ಯದರ್ಶಿ ಸಾಜಿದ್ ಅಲಿ, ಅಝಹರ್ ಅಲಿ, ನಿವೃತ ನೌಕರರಾದ ಶೇಖ ಚಾಂದ್ ಸಾಬ್, ಹಸನ್ ಅಲಿ ಸುಲ್ತಾನ್ ಪುರಿ, ಮೊಹಮ್ಮದ್ ನವಾಬ್ ಮಿಯ್ಯಾ, ಅಬ್ದುಲ್ ಮಜೀದ್ ವಕೀಲ್, ಮೊಹಮದ್ ಅಕ್ರಮ್, ಜೀಲಾನಿ, ಸೇರಿದಂತೆ ಬಡಾವಣೆಯ ನಿವಾಸಿಗಳು ಇದ್ದರು.

Contact Your\'s Advertisement; 9902492681

ಈ ವೇಳೆಯಲ್ಲಿ ಸೂಸೈಟಿಯಿಂದ ನಿರಂತರ ಜನರಿಗೆ ಸೇವೆ ನೀಡುತ್ತಿರುವ ಸಮಾಜ ಸೇವಕಾರಿಗೆ ಸನ್ಮಾನಿಸಲಾಯಿತು. ಧ್ವಜಾರೋಹಣದ ನಂತರ ಕಲಿಕಾ ಕೇಂದ್ರದ ಮಕ್ಕಳಿಗೆ ಮತ್ತು ಬಡಾವಣೆಯ ನಾಗರೀಕರಿಗೆ ಸಿಹಿ ಹಂಚುವ ಮೂಲಕ 75ನೇ ಸ್ವತಂತ್ರೋತ್ಸವ ಸಡಗರದಿಂದ ಆಚರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here