-
ಸುರಪುರ:ಧಮ್ಮ ದೀಕ್ಷಾ ಕಾರ್ಯಕ್ರಮದ ಅಂಗವಾಗಿ ಪೂರ್ವಭಾವಿ ಸಭೆ
ಸುರಪುರ: ಸಂವಿಧಾನ ಶಿಲ್ಪಿ ಬೋಧಿಸತ್ವ ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ರವರ ೬೬ ನೇ ಧಮ್ಮ ಚಕ್ರ ಪ್ರವರ್ತನ ದಿನದ ಅಂಗವಾಗಿ ನಗರದ ಗೋಲ್ಡನ್ ಕೇವ್ ಬುದ್ದ ವಿಹಾರದಲ್ಲಿ ಟ್ರಸ್ಟ್ ವತಿಯಿಂದ ಸುರಪುರ ಮತ್ತು ಹುಣಸಗಿ ತಾಲೂಕಿನ ಎಲ್ಲ ದಲಿತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ನಾಯಕುರುಗಳ ಪೂರ್ವಭಾವಿ ಸಭೆ ಕರೆಯಲಾಗಿತ್ತು.
ಸಬೆಯ ಸಾನಿಧ್ಯವಹಿಸಿದ್ದ ವರಜ್ಯೋತಿ ಬಂತೇಜಿ ಮಾತನಾಡಿ,ನಿಮ್ಮೆಲ್ಲರ ಅಭಿಪ್ರಾಯದಂತೆ ಅಕ್ಟೋಬರ್ ೧೪ ರಂದು ಗೋಲ್ಡನ್ ಕೆವ್ ಬುದ್ಧ ವಿಹಾರದಲ್ಲಿ ಎರೆಡು ತಾಲೂಕುಗಳಿಂದ ಅಂದು ಕನಿಷ್ಠ ೫೦೦ ಜನ ದಮ್ಮ ಧೀಕ್ಷಾ ಪಡೆಯುವ ಕಾರ್ಯಾಕ್ರಮ ಆಗಬೇಕು ಎಂದರು.
ಬುದ್ಧಘೋಷ್ ದೇವೆಂದ್ರ ಹೆಗ್ಗಡೆಯವರ ಮಾತನಾಡಿ ಇದೊಂದು ಐತಿಹಾಸಿಕ ಬೌದ್ಧ ದಾರ್ಮಿಕ ಕೇಂದ್ರವನ್ನಾಗಿ ಮಾಡಲೂ ಧಮ್ಮ ದೀಕ್ಷೆಯನ್ನು ಪಡೆಯುದರ ಮುಖಾಂತರ ನೀಜವಾದ ಡಾ.ಅಂಬೇಡ್ಕರ್ ಅನುಯಾಯಿಗಳು ಎಂದು ಅವರನ್ನು ಸ್ಮರಿಸಬಹುದಾಗಿದೆ ಎಂದರು.ಬೌದ್ಧ ಧಾರ್ಮಿಕವಾಗಿರಬೇಕು ಎನ್ನುವ ಕಾರಣದಿಂದ ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಬೌದ್ಧ ರಥಯಾತ್ರೆಯನ್ನು ಅರ್ಥಪುರ್ಣವಾಗಿ ಸೆಪ್ಟಂಬರ್ ೯ ರ ನಂತರ ಪೂಜ್ಯ ವರಜ್ಯೋತಿ ಭಂತೆಜಿಯವರ ನೆತೃತ್ವದಲ್ಲಿ ಡಾ. ಅಂಬೆಡ್ಕರ್ ಸರ್ಕಲ್ ನಿಂದ ಪ್ರಾರಂಭವಾಗಿ ಬುದ್ಧ ವಿಹಾರದಲ್ಲಿ ಸಮಾರೋಪಗೊಳ್ಳುವದು ಅದಕ್ಕಾಗಿ ಯಾವೂದೇ ಸವಸ್ಯಗಳಿಗೆ ಕಿವಿಗೋಡದೆ ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಹೇಳಿದರು.
ಸಭೆಯಲ್ಲಿ ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಹೊಸಮನಿ,ಮುಖಂಡರಾದ ಚಂದ್ರಶೆಖರ್ ಕಟ್ಟಿಮನಿ, ನಾಗಣ್ಣ ಕಲ್ಲದೇವನಹಳ್ಳಿ, ಗಿರೀಶ್ ಕರ್ನಾಳ, ಆದಪ್ಪ ಹೊಸಮನಿ, ಭಿಮಣ್ಣ ಮುದನೂರು, ಹಣಮಂತ ಬಾಂಬೆಕರ್, ಹುಲಗಪ್ಪ ದೇವತ್ಕಲ್ , ಗೋಪಾಲ್ ವಜ್ಜಲ್, ರಾಜು ದೊಡ್ಡಮನಿ, ಚಂದಪ್ಪ ಪಂಚಮ್, ಮಲ್ಲು ಮುಷ್ಠಳ್ಳಿ, ಮಲ್ಲಪ್ಪ ತಳವಾರಗೇರಾ, ಗೋಪಾಲ್ ಕುಂಬಾರಪೆಟ, ವಿರಭದ್ರ ತಳವರಗೆರಾ, ಪರುಶುರಾಮ್ ಗಡ್ಡದ್, ಶರಣು ಹಸನಾಪುರ, ಶರಣು ಚಂದಲಾಪುರ್, ಪರಶುರಾಮ್ ಮಾಲಗತ್ತಿ ,ಮಲ್ಲಿಕಾರ್ಜುನ್ ಜಾಲಿಬೆಂಚಿ,ಶಿವಣ್ಣ ಸಾಸಗೇರಿ, ಮಂಜುನಾಥ ಹೊಸಮನಿ, ಭಿಮರಾಯ ದೊಡ್ಡಮನಿ, ಶೇಖರ್ ಚಂದಲಾಪೂರ, ನಾಗರಾಜ್ ಭೆವಿನಾಳ, ಬಸವರಾಜ್ ಬಡಿಗೇರ, ಪರುಶುರಾಮ್ ಗೋವಾ, ಶರಣು ಹುಲಿಮನಿ,ಅವಿನಾಶ್, ಚಂದ್ರು, ಇತರರು ಬಾಗವಹಿಸಿದ್ದರು. ರಾಹುಲ್ ಹುಲಿಮನಿ ಸ್ವಾಗತಿಸಿದರು, ನಿರೂಪಿಸಿದರು ಶಂಕರ ಹೊಸಮನಿ ವಂದಿಸಿದರು.