ಬ್ರಹ್ಮಶ್ರೀ ನಾರಾಯಣ ಗುರು ಪ್ರಶಸ್ತಿ ಪ್ರದಾನ ನಾಳೆ

0
93

ಕಲಬುರಗಿ: ಅಫಜಲಪುರ ತಾಲೂಕಿನ ತೆಲ್ಲೂರಿನ ಬ್ರಹ್ಮಶ್ರೀ ನಾರಾಯಣಗುರು ಸಾಂಸ್ಕೃತಿಕ ಕಲಾ ಸಂಘದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ೧೬೮ನೇ ಜಯಂತ್ಯುತ್ಸವ ಅಂಗವಾಗಿ ದಿ. ೧೦ ರಂದು ಸಂಜೆ ೪ ಗಂಟೆಗೆ ಇಲ್ಲಿನ ಕನ್ನಡ ಭವನದ ಸುವರ್ಣಾ ಸಭಾವನದಲ್ಲಿ ೧೫ ಜನ ಸಾಧಕರಿಗೆ ಬ್ರಹ್ಮಶ್ರೀ ನಾರಾಯಣಗುರು ಪ್ರಶಸ್ತಿ ಪ್ರದಾನ ಹಾಗೂ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ದಸ್ತಯ್ಯ ಬಿ. ಗುತ್ತೇದಾರ್ ತಿಳಿಸಿದ್ದಾರೆ.

ನದಿಸಿಣ್ಣೂರನ ಶ್ರೀ ಮಹಾಲಕ್ಷ್ಮೀ ಮಹಾಶಕ್ತಿ ಪೀಠದ ಗುರುರಾಜೇಂದ್ರ ಶಿವಯೋಗಿಗಳ ಸಾನಿಧ್ಯದಲ್ಲಿ ಕ್ರೇಡಲ್ ಅಧ್ಯಕ್ಷ ಚಂದು ಪಾಟೀಲ್ ಕಾರ್ಯಕ್ರಮ ಉದ್ಘಾಟಿಸುವರು. ಜಿಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ್ ಅಧ್ಯಕ್ಷತೆವಹಿಸುವರು. ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ರಾಜೇಶ ಗುತ್ತೇದಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವರು.

Contact Your\'s Advertisement; 9902492681

ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ವಿನೋದ ಗುತ್ತೇದಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ್, ಆಕಾಶವಾಣಿ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ್, ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಬುರಾವ ಕೋಬಾಳ, ಉದ್ಯಮಿ ಅಂಬಯ್ಯ ಗುತ್ತೇದಾರ್, ಸತ್ಯಂ ಪಿಯು ಕಾಲೇಜಿನ ಪ್ರಾಚಾರ್ಯ ಬಿ.ಎಚ್. ನಿರಗುಡಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.

ಬ್ರಹ್ಮಶ್ರೀ ನಾರಾಯಣ ಗುರು ಪ್ರಶಸ್ತಿಗೆ ಆಯ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ವಾರ್ತಾ ಇಲಾಖೆಯ ಉಮಾಶಂಕರ ಚಿನ್ನಮಳ್ಳಿ (ಸರ್ಕಾರಿ ಸೇವಾ ಕ್ಷೇತ್ರ), ಪತ್ರಕರ್ತ ಭೀಮಾಶಂಕರ ಫಿರೋಜಾಬಾದ್ (ಪತ್ರಿಕಾ ಮಾಧ್ಯಮ), ಉದ್ಯಮಿ ಶಾಂತಕುಮಾರ ಗುತ್ತೇದಾರ್ (ಉದ್ಯಮ), ಪಂಚಪೀಠದ ವಾರ್ತಾಧಿಕಾರಿ ಸಿದ್ರಾಮಪ್ಪ ಆಗಲೂಡಕರ್ (ಧಾರ್ಮಿಕ), ಸೈಯದ್ ಮನ್ಸೂರ್ (ಟಿವಿ ಮಾಧ್ಯಮ), ಆಕಾಶವಾಣಿ ಕಲಾವಿದರಾದ ಅಣ್ಣಾರಾವ್ ಶೆಳ್ಳಗಿ, ಸಂಗೀತ ಶಿಕ್ಷಕ ಡಾ. ಶಿವಶಂಕರ ಬಿರಾದಾರ್, ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ (ಸಂಗೀತ), ಕೊರಳ್ಳಿ ಸಿಆರ್‌ಪಿ ವಿಜಯಲಕ್ಷ್ಮೀ ಗುತ್ತೇದಾರ್ (ಸಾಹಿತ್ಯ), ಜಿಲ್ಲಾ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ನಾಗಪ್ಪ ಹೊನ್ನಳ್ಳಿ (ಸಹಕಾರ), ಮೀನಾಕ್ಷಿ ಎ. ಗುತ್ತೇದಾರ್ (ಚಿತ್ರಕಲೆ), ಶಿಕ್ಷಕಿ ಲತಾ ಡಿ.ಎನ್, ಶಂಕರ ಮಗಿ (ಶಿಕ್ಷಣ), ಶಂಕರ ದೊಡ್ಡಮನಿ (ವೈದ್ಯಕೀಯ) ಕ್ಷೇತ್ರದಲ್ಲಿ ಗುರುತಿಸಿ ಮೂರನೇ ವರ್ಷದ ರಾಜ್ಯಮಟ್ಟದ ಬ್ರಹ್ಮಶ್ರೀ ನಾರಾಯಣ ಗುರು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಸ್ಮರಣಿಕೆ, ಸನ್ಮಾನ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here