ಶ್ರೀಮಂತರಿಗಿರುವ ಮೀಸಲಾತಿ ತಗೆಯಬೇಕು: ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ

0
23

ಕಲಬುರಗಿ: 70 ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ದಲಿತ ಮತ್ತು ಅಲ್ಪಸಂಖ್ಯಾತರನ್ನು ಕೇವಲ ಓಟ್‍ಬ್ಯಾಂಕ್ ಆಗಿ ಬಳಸಿಕೊಂಡು ಈಗ ಡಬಲ್‍ಗೇಮ್ ಮಾಡುತ್ತಿದ್ದಾರೆ ಇದು ಬಿಡಬೇಕೆಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ  ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಬಿಜೆಪಿ ಹಿಂದೂತ್ವಪರ ಹೌದು, ಇಲ್ಲಿರುವ ಬಡವರಿಗೆ ಮೀಸಲಾತಿ ಸಿಗಲಿ ಎನ್ನುವುದು ನಮ್ಮ ನಿಲುವು ಎಂದು ಈಶ್ವರಪ್ಪ ವೀರಶೈವ ಲಿಂಗಾಯತರನ್ನು ಒಡೆದಿದ್ದು ಯಾರು ಎಂದು ಪ್ರಶ್ನಿಸುವ ಮೂಲಕ ಶ್ರೀಮಂತರಿಗಿರುವ ಮೀಸಲಾತಿ ತಗೆಯಬೇಕು ಅನ್ನೋದು ನನ್ನ ವೈಯಕ್ತಿ ಬೇಡಿಕೆ ಎಂದರು.

Contact Your\'s Advertisement; 9902492681

ಕುಲಶಾಸ್ತ್ರ ಅಧ್ಯಯನ ಪ್ರಕಾರ ಅತ್ಯಂತ ಹಿಂದುಳಿದವರಿಗೆ ಮೀಸಲಾತಿ ಸಿಗಬೇಕು, ಜೊತೆಗೆ ಅಲ್ಪಸಂಖ್ಯಾತ ಮೀಸಲಾತಿಯಿಂದ ಮುಸಲ್ಮಾನರನ್ನು ತೆಗೆಯುವ ವಿಚಾರ ಕುಲಶಾಸ್ತ್ರೀಯ ವರದಿಯ ಪ್ರಕಾರ ಮುಂದಿನ ಕ್ರಮವಾಗಲಿದೆ ಎಂದರು.

ಎಸ್‍ಸಿ/ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿರುವ ಸರಕಾರದ ಕ್ರಮ ಸಂವಿಧಾನ ಬದ್ದನಾ? ಎಂದು ಟಿಕಿಸಿದ ಸಿದ್ದರಾಮಯ್ಯನವರು ಸರ್ವಪಕ್ಷ ಸಭೆಯಲ್ಲಿಯೇ ಈ ಕುರಿತು ಚರ್ಚೆ ನಡೆಸಬೇಕಿತ್ತು ಸಭೆಯಿಂದ ಹೊರಹೋಗಿ ಈ ರೀತಿ ಗೊಂದಲ ಮೂಡಿಸುತ್ತಿರುವುದು ಸರಿಯಲ್ಲ ಎಂದು ತಿವಿದರು.

ಚುನಾವಣೆಗೋಸ್ಕರ ಮೀಸಲಾತಿ ಹೆಚ್ಚಳ ಮಾಡಲಾಗಿದೆ ಎಂಬ ಕಾಂಗ್ರೆಸ್ ಆರೋಪ ತಳ್ಳಿಹಾಕಿದ ಈಶ್ವರಪ್ಪ ಗೊಂದಲ ಸೃಷ್ಟಿ ಕಾಂಗ್ರೆಸ್ ಮಾಡುತ್ತಿದೆ, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಓಟ್‍ಬ್ಯಾಂಕ್ ಮಾಡಿಕೊಂಡಿದೆ ಎಂದರು.

ಸಚಿವ ಸಂಪುಟ ವಿಸ್ತರಣೆಯ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರೀಯೆ ನೀಡಿದ ಅವರು, ಅದು ವರಿಷ್ಟರಿಗೆ ಬಿಟ್ಟ ವಿಚಾರ, ಅವರು ಬಯಸಿದರೆ ವಿಸ್ತರಿಸಬಹುದು ಅಥವಾ ಬಿಡಬಹುದು, ಆದರೆ ನನ್ನ ಮೇಲೆ ಷಡ್ಯಂತ್ರ ಮಾಡಿ ನನ್ನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಗರಂ ಆದ ಅವರು, ತಮಗೆ ಸಚಿವಸ್ಥಾನ ಪುನಃ ನೀಡದಕ್ಕೆ ಪರೋಕ್ಷವಾಗಿ ಅಸಮಧಾನ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here