ಕಬ್ಬು ಬೆಳೆಗಾರರ ಹೋರಾಟದಲ್ಲಿ ರಾಜಕೀಯ ಸಲ್ಲದು

0
19

ಆಳಂದ: ಭೂಸನೂರಿನ ಎನ್‍ಎಸ್‍ಎಲ್ ಕಾರ್ಖಾನೆ ಎದುರು ಕಬ್ಬು ಬೆಳೆಗಾರರು ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಪಕ್ಷಾತೀತವಾಗಿದ್ದು ತಾವು ಸ್ವತ: ಆಡಳಿತ ಪಕ್ಷದ ಶಾಸಕರಾಗಿದ್ದರೂ ಕಬ್ಬು ಬೆಳೆಗಾರರ ಹಿತ ಕಾಪಾಡುವುದಕ್ಕೆ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದೇನೆ ಎಂದು ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.

ಬುಧುವಾರ ಭೂಸನೂರು ಕಾರ್ಖಾನೆ ಎದುರು ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದರ ಅವರು, ಪ್ರತಿಟನ್ ಕಬ್ಬಿಗೆ 2500 ರೂಪಾಯಿ ಬೆಲೆ ನೀಡಲು ಒಪ್ಪದೇ ಹೋದರೆ ಸಂಪೂರ್ಣವಾಗಿ ಕಾರ್ಖಾನೆಯಲ್ಲಿ ಯಾವುದೇ ಕಾರ್ಯ ಚಟುವಟಿಕೆ ಕೈಗೊಳ್ಳಬಾರದು. ಈ ವಿಷಯದ ಕುರಿತು ಈಗಾಗಲೇ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವರನ್ನು ಭೇಟಿಯಾಗಿ ಕಬ್ಬು ಬೆಳೆಗಾರರ ಸ್ಥಿತಿಗತಿ ಮನವರಿಕೆ ಮಾಡಿದ್ದೇನೆ ಅವರು ಕರೆದಿರುವ ಸಭೆಯಲ್ಲಿ ಇದರ ಕುರಿತು ನಿರ್ಧಾರಕ್ಕೆ ಬರುವುದಾಗಿ ತಿಳಿಸಿದ್ದಾರೆ ಎಂದರು.

Contact Your\'s Advertisement; 9902492681

ನೆರೆಯ ಅಫಜಲಪೂರದ ರೇಣುಕಾ ಸಕ್ಕರೆ ಕಾರ್ಖಾನೆ ನೀಡುವ ದರವನ್ನು ಇಲ್ಲಿಯೂ ನೀಡುವಂತೆ ಕಾರ್ಖಾನೆ ಆಡಳಿತ ಮಂಡಳಿಯನ್ನು ಒತ್ತಾಯಿಸಿದ ಅವರು, ರೇಣುಕಾ ಶುಗರ್ಸನವರು 2500ರಿಂದ 2600 ರೂಪಾಯಿ ವರೆಗೆ ಪ್ರತಿಟನ್ ಕಬ್ಬಿಗೆ ನೀಡುತ್ತಿದ್ದು, ಎನ್‍ಎಸ್‍ಎಲ್ ಕಾರ್ಖಾನೆಯುವರು ಸಹ ಇವರ ದರವನ್ನೇ ಪ್ರತಿವರ್ಷ ಅನುಸರಿಸುತ್ತಾ ಬಂದು ಈ ವರ್ಷ ಮಾತ್ರ ಅವರನ್ನು ಅನುಸರಿಸದೆ, 2400 ರೂಪಾಯಿ ಮಾತ್ರ ನೀಡುವ ಹೇಳಿಕೆ ಕೊಡುವುದು ಸರಿಯಲ್ಲ. ಜಿಲ್ಲಾಧಿಕಾರಿಗಳ ಆದೇಶದಂತೆ ಎನ್‍ಎಸ್‍ಎಲ್ 2500 ರೂಪಾಯಿ ಬೆಲೆ ನಿಗದಿಪಡಿಸಿದರೆ ಕಾರ್ಖಾನೆ ಆರಂಭಕ್ಕೆ ಯಾವುದೇ ತಕರಾರಿಲ್ಲ ಎಂದು ಅವರು ಹೇಳಿದರು.

ಕಬ್ಬು ಸಾಗಾಣೆಯ ವಾಹನಗಳ ಕಳೆದ ಸಾಲಿನಲ್ಲಿ 252 ರೂಪಾಯಿ ಪ್ರತಿಟನ್‍ಗೆ ದರ ನೀಡುವ ಬದಲು ಈ ಬಾರಿ 202 ರೂಪಾಯಿ ಮಾತ್ರ ಇದ್ದು ಇದು ಸಹ 30 ಕಿ.ಮೀ ಸಾರಿಗೆ ಬದಲು 20 ಕಿ.ಮೀ ಕೊಡುವುದಾಗಿ ಹೇಳುತ್ತಿದ್ದಾರೆ ಇದು ಕೂಡ ಸರಿಯಲ್ಲ. ಮೊದಲಿನ 252 ರೂಪಾಯಿ ಹೆಚ್ಚಿಸುವುದು ಮತ್ತು ಪ್ರತಿಟನ್ ಕಬ್ಬಿಗೆ 2500 ರೂಪಾಯಿ ಬೆಲೆ ಘೋಷಿಸಿ ಕಾರ್ಖಾನೆ ಆರಂಭಿಸಿ ಆಗ್ರಹಿಸಿದರು.

ಮನೆಯಲ್ಲಿರುವ ಬೆಳ್ಳಿ, ಬಂಗಾರ ಮಾರಿ, ಸಾಲ ಪಡೆದು ಕಬ್ಬು ಬೆಳೆದು ಕಾರ್ಖಾನೆಗೆ ಕೊಡುತ್ತಿದ್ದೇವೆ. ಸಹಕಾರಿ ರಂಗದ ಕಾರ್ಖಾನೆ ಗುತ್ತಿಗೆ ಪಡೆದು 11 ವರ್ಷವಾಗಿದೆ. ನಿಯಮದಂತೆ ಯಾವುದೂ ಅನುಸರಿಸಿಲ್ಲ. ಕಬ್ಬು ಕೊಟ್ಟವರಿಗೆ ಸಮಯಕ್ಕೆ ಹಣ ಪಾವತಿಸಿಲ್ಲ. ಜಿಲ್ಲಾಡಳಿತದ ಆದೇಶ ಎಲ್ಲಿ ಪಾಲಿಸಿದ್ದೀರಿ, ಹೈಕೋರ್ಟ್ ಆದೇಶವು ಪಾಲಿಸಿಲ್ಲ. ರೈತರನ್ನು ಮೋಸ ಮಾಡುತ್ತಿದ್ದೀರಿ ರೈತರನ್ನು ಒಡಕು ಮಾಡಿ ಜಗಳ ಹಚ್ಚುವ ಕೆಲಸ ಮಾಡುತ್ತೀರಿ ಎಂದು ಏರುಧ್ವನಿಯಲ್ಲಿ ಕಾರ್ಖಾನೆಯವರನ್ನು ತರಾಟೆಗೆ ತೆಗೆದುಕೊಂಡರು.

ಆಡಳಿತ ಮಂಡಳಿಯವರು ರೇಣುಕಾ ಶುಗರ್ಸ್ ಕೊಟ್ಟ ಬೆಲೆ ನೀಡಿದರೆ ಮಾತ್ರ ಕಾರ್ಖಾನೆ ನಡೆಸಿ. ಇಲ್ಲವಾದಲ್ಲಿ ನಮ್ಮ ಜೀವ ಹೋದರು ಸರಿ ಕಾರ್ಖಾನೆ ನಡೆಯಲು ಬಿಡುವುದಿಲ್ಲ ಎಂದು ಅವರು ಗುಡಗಿದರು. ಮುಖಂಡ ಮಹಾಂತಪ್ಪ ಆಲೂರೆ ಮಾತನಾಡಿ, ಕಬ್ಬು ಬೆಳೆಗಾರರ ವಿಷಯದಲ್ಲಿ ಮಾಜಿ ಶಾಸಕ ಬಿ ಆರ್ ಪಾಟೀಲರು ರಾಜಕೀಯ ಮಾಡುತ್ತಿದ್ದು ಕಬ್ಬು ಬೆಳೆಗಾರರ ಹಿತ ಕಾಯುವುದನ್ನು ಬಿಟ್ಟು ಕಾರ್ಖಾನೆ ಆರಂಭಿಸಿ ಎಂದು ಹೇಳಿ ಕಾರ್ಖಾನೆಯವರ ಹಿತ ಕಾಯಲು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಶಿವರಾಜ ಕೋರಳ್ಳಿ, ಬಾಬುರಾವ ಸರ್, ರವೀಂದ್ರರೆಡ್ಡಿ, ಆನಂದರಾವ ಗಾಯಕವಾಡ, ಮಲ್ಲಿನಾಥ ಪರೇಣಿ, ಬಸವರಾಜ ಧನ್ನಾಜಿ ಸೇರಿದಂತೆ ಅನೇಕ ರೈತ ಮುಖಂಡರು ಮಾತನಾಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ರಾಜಶೇಖರ ಮಲಶೆಟ್ಟಿ, ಅನಂತರಾಜ ಸಾಹು, ಮಲ್ಲಿಕಾರ್ಜುನ ಕಂದಗೂಳೆ, ಅಶೋಕ ಗುತ್ತೇದಾರ, ಮಲ್ಲಿಕಾರ್ಜುನ ತಡಕಲ, ಅಶೋಕ ಹತ್ತರಕಿ, ಗುರುಶಾಂತ ಪಾಟೀಲ ನಿಂಬಾಳ, ಸಂತೋಷ ಹಾದಿಮನಿ, ಪ್ರಭಾಕರ ರಾಮಜಿ, ಶಿವಲಿಂಗಪ್ಪ ಜಮಾದಾರ, ಲಿಂಗರಾಜ ಉಡಗಿ, ಮಹಾಂತೇಶ ಶಿರೂರ, ಗಣೇಶ ಓನಮಶೆಟ್ಟಿ, ಪ್ರಭು ಸರಸಂಬಿ, ಗುರುನಾಥ ಪಾಟೀಲ, ಆದಿನಾಥ ಹೀರಾ, ಮಹಾಂತೇಶ ಪಾಟೀಲ, ಸುರೇಶ ನಂದೇಣಿ, ಶಂಕರ ಸೋಮಾ, ಚಂದ್ರಶೇಖರ ಸಾಹು, ಶರಣು ಕುಮಸಿ, ನಾಗರಾಜ ಶೇಗಜಿ, ಶರಣಗೌಡ ದೇವಂತಗಿ, ಪರಮೇಶ್ವರ ನಾಯ್ಕೋಡಿ, ಸೈನಿಕ ರಾಠೋಡ, ಧರೇಪ್ಪ ಜಕಾಪೂರೆ, ದಯಾನಂದ ಚೌಲ ಸೇರಿದಂತೆ ಕಲಬುರಗಿ, ಅಫಜಲಪೂರ, ಕಮಲಾಪೂರ, ಆಳಂದ ತಾಲೂಕಿನ ರೈತರು ಭಾಗವಹಿಸಿದ್ದರು.

ಬಾಕ್ಸ್: ಹಿರಿಯ ಮುಖಂಡ ಅಣ್ಣರಾವ ಪಾಟೀಲ ಕವಲಗಾ ಮಾತನಾಡಿ, ಶಾಸಕ ಸುಭಾμï ಆರ್ ಗುತ್ತೇದಾರ ಅವರು ರೈತರ ಕಬ್ಬಿಗೆ ನ್ಯಾಯಯುತ ಬೆಲೆ ಸಿಗಲಿ ಎಂದು ಪ್ರತಿಭಟನೆ ಮಾಡುತ್ತಾರೆ. ಆದರೆ ಮಾಜಿ ಶಾಸಕ ಬಿ ಆರ್ ಪಾಟೀಲ ಕಾರ್ಖಾನೆ ಆರಂಭವಾಗಲಿ ಎಂದು ಪ್ರತಿಭಟನೆ ಮಾಡುತ್ತಾರೆ. ಇಲ್ಲಿಯೇ ಗೊತ್ತಾಗುತ್ತದೆ ಅಲ್ಲವೇ ರೈತರ ಪರವಾಗಿ ಯಾರಿದ್ದಾರೆ ಅಂತಾ? ಪ್ರಶ್ನಿಸಿದರು.

ಬಾಕ್ಸ್: ಕಾರ್ಖಾನೆ ಆರಂಭಿಸಿ ಎಂದು ಹೇಳುವ ಮಾಜಿ ಶಾಸಕ ಬಿ ಆರ್ ಪಾಟೀಲರಿಗೆ ರೈತರಿಗೆ ನಿಗದಿತ ಬೆಲೆ ಕೊಡಿ ಎಂದು ಹೇಳಲು ಬಾಯಿಯಿಲ್ಲವೇ? ಎಂದು ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ ಪ್ರಶ್ನಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here