ಮಾಸಿಕ ಶಿವಾನುಭವಗೋಷ್ಠಿ ಮತ್ತು ನೀಲಾಂಬಿಕೆ ಜಯಂತಿ

0
8

ಭಾಲ್ಕಿ: ನಿರಂತರ ಗುರು ದರ್ಶನ ಹಾಗೂ ಸತ್ಸಂಗದಿಂದ ಮನುಷ್ಯನಲ್ಲಿ ಸದ್ಭಾವ ಬೆಳೆಯುತ್ತದೆ. ಸದ್ಗುಣಗಳು ಅಳವಡುತ್ತವೆ. ಬದುಕು ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಶರಣರ ವಚನಗಳು ನಮಗೆ ದಾರಿದೀಪಗಳಾಗಿ ಅರಿವಿನ ಬೆಳಕು ನೀಡುತ್ತವೆ ಎಂದು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಜರುಗಿದ 459 ನೇ ಮಾಸಿಕ ಶಿವಾನುಭವಗೋಷ್ಠಿ ಮತ್ತು ಶರಣೆ ನೀಲಾಂಬಿಕೆ ಜಯಂತಿ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಪೂಜ್ಯ ಶ್ರೀಗಳು ಆಶೀರ್ವಚನಗೈದರು. ಪೂಜ್ಯ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು.

Contact Your\'s Advertisement; 9902492681

ಶರಣೆ ಮಹಾನಂದಾ ದೇಶಮುಖ ಅಧ್ಯಕ್ಷತೆ ವಹಿಸಿದ್ದರು. ಭಾಲ್ಕಿ ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ.ಮಲ್ಲಮ್ಮ ಆರ್.ಪಾಟೀಲ ನೀಲಾಂಬಿಕೆ ಅವರ ಜೀವನ ಚರಿತ್ರೆ ಮತ್ತು ವಚನಗಳು ಕುರಿತು ಉಪನ್ಯಾಸ ನೀಡಿದರು.

ಕದಳಿ ಮಹಿಳಾ ವೇದಿಕೆ ಅಧ್ಯಕ್ಷ ಮಲ್ಲಮ್ಮ ನಾಗನಕೇರೆ, ಅಕ್ಕನ ಬಳಗದ ಪ್ರೇಮಲಾ ತೊಂಡಾರೆ, ಶೋಭಾ ಮೇತ್ರೆ ಇತರರು ಅತಿಥಿಗಳಾಗಿದ್ದರು. ಬಸವರಾಜ ಮರೆ, ಶಿಖರೇಶ್ವರ ಶೆಟಕಾರ, ವೀರಣ್ಣ ಕುಂಬಾರ, ಶಾಂತಯ್ಯ ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು. ಯಲ್ಲನಗೌಡ ಬಾಗಲಕೋಟ ವಚನ ಗಾಯನ ಮಾಡಿದರು. ಪಾರ್ವತಿ ಧೂಮ್ಮನಸೂರೆ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here