ಕಾನೂನನ್ನು ಗೌರವಿಸಿದರೆ ಅದು ನಿಮ್ಮನ್ನು ಗೌರವಿಸುತ್ತದೆ

0
13

ಜೇವರ್ಗಿ: ಇಲ್ಲಿನ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಜೇವರ್ಗಿ ಸೇರಿದಂತೆ ಗ್ರಾಮ ಪಂಚಾಯತ್ ಕಾರ್ಯಾಲಯ ಬಳ್ಳುಂಡಗಿ ಇವರುಗಳ ಜಂಟಿ ಆಶ್ರಯದಲ್ಲಿ ಉಚಿತ ಕಾನೂನು ನೆರವಿನ ಕಾರ್ಯಕ್ರಮ ತಾಲೂಕಿನ ಬಳ್ಳುಂಡಗಿ ಗ್ರಾಮದಲ್ಲಿ ನಡೆಯಿತು.

ಕಾನೂನು ಎಲ್ಲರಿಗೂ ಸರಿಸಮಾನವಾದುದ್ದು ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾನೂನು ಚೌಕಟ್ಟಿನಲ್ಲಿಯೇ ಸೂಕ್ತವಾದ ನಿಬಂಧನೆಗೆ ಒಳಪಟ್ಟು ಹಾಗೂ ಅಗತ್ಯ ದಾಖಲಾತಿಗಳನ್ನು ನೀಡಿ ವಿವಾಹ ನೋಂದಣಿ ಕಾರ್ಯ ಪೂರ್ಣಗೊಳಿಸಬೇಕು. ಇದು ಕಾನೂನು ಚೌಕಟ್ಟಿನಲ್ಲಿ ಇರಬೇಕು ಕಾನೂನನ್ನು ಗೌರವಿಸಿದರೆ ಅದು ನಿಮ್ಮನ್ನು ಗೌರವಿಸುತ್ತದೆ ಎಂದು ತಿಳಿಸಲಾಯಿತು.

Contact Your\'s Advertisement; 9902492681

ವಕೀಲರಾದ ರಾಜು ಮುದ್ದಡಗಿ ಮಾತನಾಡಿ ವಿವಾಹದ ನೋಂದಣಿಯು ಅತಿ ಮಹತ್ವದ್ದಾಗಿದೆ ಇದರಿಂದಾಗಿ ಸ್ತ್ರೀ ಕಾನೂನು ದತ್ತ ಅಧಿಕಾರ ಚಲಾಯಿಸಲು ಸರಕಾರಿ ಸವಲತ್ತುಗಳ ಸದುಪಯೋಗವನ್ನು ಪಡೆದುಕೊಳ್ಳಲು ಸಹಕಾರಿ, ತೊಂದರೆಗಳನ್ನು ನಿವಾರಿಸಬಹುದು ಹಾಗೂ ಮಹಿಳೆಯರಿಗೆ ಇದು ಭದ್ರತೆ ಹಾಗೂ ವಿಶ್ವಾಸವನ್ನು ನೀಡುತ್ತದೆ ಎಂದು ತಿಳಿಸಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ವಟಗಲ್ ಸೇರಿದಂತೆ ಪ್ರೌಢಶಾಲೆಯ ಮುಖ್ಯ ಗುರುಗಳು ಹಾಗೂ ಶಿಕ್ಷರು ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ವಿದ್ಯಾರ್ಥಿ ಪ್ರತಿನಿಧಿಗಳು ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಉಚಿತ ಕಾನೂನು ಅರಿವು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶರಣಮ್ಮ ದೊಡ್ಡಮನಿ ವಕೀಲರಾದ, ವಕೀಲರಾದ ಭಗವಂತರಾಯ, ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here