ನ್ಯಾಯಾಲಯ ಆವರಣದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ

0
11

ಸುರಪುರ: ನಗರದ ನ್ಯಾಯಾಲಯ ಆವರಣದಲ್ಲಿ ಬುಧವಾರ ರಾಷ್ಟ್ರೀಯ ಕಾನೂನು ಸೇವೆಗಳ ದಿನವನ್ನು ಆಚರಿಸಲಾಯಿತು.ತಾಲೂಕು ಕಾನೂನು ಸೇವಾ ಸಮಿತಿ,ತಾಲೂಕು ನ್ಯಾಯವಾದಿಗಳ ಸಂಘ ಹಾಗೂ ತಾಲೂಕು ಆಡಳಿತ ದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಹಿರಿಯ ದಿವಾಣಿ ನ್ಯಾಯಾಧೀಶ ಮಲ್ಲಿಕಾರ್ಜುನ ಈಶ್ವರಪ್ಪ ಕಮತಗಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯಾಧೀಶರು, ದೇಶಾದ್ಯಂತ ಇಂದು ಕಾನೂನು ಸೇವೆಗಳ ದಿನವನ್ನು ಆಚರಿಸಲಾಗುತ್ತಿದೆ,ಈ ದಿನವನ್ನು ಮೊದಲು 1987ರ ಕಾಯಿದೆಯಂತೆ 1995 ನವೆಂಬರ್ 9 ರಂದು ಆರಂಭಿಸಲಾಗಿದೆ.ಸುಪ್ರೀಂ ಕೋರ್ಟ್‍ನ ನ್ಯಾಯಾಧೀಶರು ಪತ್ರಿಕೆಯೊಂದರಲ್ಲಿ ಓದುಗರೊಬ್ಬರು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದರು,ಅದನ್ನು ಗಮನಿಸಿದ ನ್ಯಾಯಾಧೀಶರು ಆ ವ್ಯಕ್ತಿಯ ಸಮಸ್ಯೆಗೆ ಪರಿಹಾರ ದೊರಕಿಸಲು ಅವರ ಸಮಸ್ಯೆಯ ಹೇಳಿಕೆಯನ್ನೆ ದೂರನ್ನಾಗಿ ತೆಗೆದುಕೊಂಡು ಅಂತವರಿಗೆ ಕಾನೂನಿನ ನೆರವು ನೀಡಲು ಮುಂದಾಗಿರುವ ದಿನವನ್ನು ಇಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.ಎಲ್ಲಾ ಇಲಾಖೆಗಳಲ್ಲಿಯೂ ಸೇವೆಗಳ ದಿನವನ್ನು ಆಚರಿಸಲಾಗುತ್ತಿದೆ,ಅದರಂತೆ ನಮ್ಮ ನ್ಯಾಯಾಂಗ ಇಲಾಖೆಯಿಂದಲೂ ಕಾನೂನು ಸೇವೆಯನ್ನು ನೀಡುತ್ತಿರುವುದರಿಂದ ಈ ದಿನವನ್ನು ಆಚರಿಸಲಾಗುತ್ತಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ನಂದಪ್ಪ ಜೆ ಬಾಲ್ಕಿ ವಹಿಸಿ ಮಾತನಾಡಿದರು,ಮುಖ್ಯ ಅತಿಥಿಗಳಾಗಿ ದಿವಾಣಿ ನ್ಯಾಯಾಧೀಶರಾದ ಮಾರುತಿ ಕೆ,ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಬಸವರಾಜ,ಸಹಾಯಕ ಸರಕಾರಿ ಅಭಿಯೋಜಕ ಮರೇಪ್ಪ ಹೊಸಮನಿ,ಹಿರಿಯ ವಕೀಲರಾದ ದೇವಿಂದ್ರಪ್ಪ ಬೇವಿನಕಟ್ಟಿ,ಉದಯಸಿಂಗ,ಮಹ್ಮದ್ ಹುಸೇನ್,ಜಿ.ಎಸ್ ಪಾಟೀಲ್, ಬಸವರಾಜ ಕಿಲ್ಲೇದಾರ,ವಿ.ಎಸ್.ಬೈಚಬಾಳ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಶ್ರೀದೇವಿ ಪಾಟೀಲ್ ಕಾನೂನು ಸೇವೆಗಳ ಅಧಿನಿಯಮ 1987ರ ಪಕ್ಷಿನೋಟದ ಕುರಿತು ಹಾಗೂ ವಿನಾಯಕ ಹೆಚ್.ನಾಯಕ ಅವರು ಕಾನೂನಿನ ಅರಿವು ನೆರವು ಕುರಿತು ಉಪನ್ಯಾಸ ನೀಡಿದರು.ಸುಭಾಷ ಬಿರಾದಾರ ನಿರೂಪಿಸಿದರು,ಭೀಮಣ್ಣ ಬನಸೋಡೆ ವಂದಿಸಿದರು.ಕಾರ್ಯಕ್ರಮದಲ್ಲಿ ವಕೀಲರಾದ ಮಂಜುನಾಥ ಹುದ್ದಾರ,ಬಲಭೀಮನಾಯಕ ದೇವಾಪುರ ಸೇರಿದಂತೆ ಅನೇಕ ಜನ ವಕೀಲರು ಹಾಗೂ ಕಕ್ಷಿದಾರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here