ಶಾಲಾ ಸಂದರ್ಶನ ನಡೆಸಿದ ಉಪನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ

0
545

ಕಲಬುರಗಿ: ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ ಮತ್ತು ಅಭಿವೃದ್ಧಿ) ಇವರ ನೇತೃತ್ವದಲ್ಲಿ “ಕಲಿಕಾಚೇತರಿಕೆ ಶೈಕ್ಷಣಿಕ ಕಾರ್ಯಪಡೆ” ರಚನೆ ಮಾಡಿದ್ದು ಈ ತಂಡದ ಸದಸ್ಯರಿಂದ ಶಾಲೆಗಳ ಸಂದರ್ಶನ ಭೇಟಿ ಮತ್ತು ಶೈಕ್ಷಣಿಕ ಮಾರ್ಗದರ್ಶನ ಹಮ್ಮಿಕೊಳ್ಳಲಾಗಿತ್ತು.

ಕಲಿಕಾಚೇತರಿಕೆ ಉಪಕ್ರಮವು 2022-23 ನೇ ಶೈಕ್ಷಣಿಕ ವರ್ಷದ ಬಹು ಆಪೇಕ್ಷಿತ ಕಾರ್ಯಕ್ರಮವಾಗಿದ್ದು, ಸದರಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಅನುಷ್ಠಾನ ಅಧಿಕಾರಿಗಳ ಪಾತ್ರ ಅತೀ ಮುಖ್ಯವಾಗಿರುತ್ತದೆ. ತತ್ಸಬಂಧ ರಾಜ್ಯ ಮಟ್ಟದ ಕೋರ್ ಸಮಿತಿ ಸಭೆಯಲ್ಲಿ ನಿರ್ಣಯಿಸಿದಂತೆ ಪ್ರತೀ ಜಿಲ್ಲಾ ಹಂತದಲ್ಲಿ “ಕಲಿಕಾಚೇತರಿಕೆ ಶೈಕ್ಷಣಿಕ ಕಾರ್ಯಪಡೆ” ರಚನೆ ಮಾಡಿ ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಇಲಾಖೆ ಆದೇಶ ಹೊರಡಿಸಿದೆ.

Contact Your\'s Advertisement; 9902492681

ಕಾರ್ಯಪಡೆ ತಂಡವು ಇಂದು ಉಪನಿರ್ದೇಶಕರ ನೇತೃತ್ವದಲ್ಲಿ ಕಲಬುರಗಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಓಂನಗರಕ್ಕೆ ಸಂದರ್ಶನ ಭೇಟಿ ನೀಡಿ ಪರಿಶೀಲನೆ ನಡೆಸಿ ಹಾಗೂ ಮಾರ್ಗದರ್ಶನ ಮಾಡಿ, ಈ ಭೇಟಿಯ ಸಂದರ್ಭದಲ್ಲಿ ಶೈಕ್ಷಣಿಕ ಕಾರ್ಯಪಡೆಯ ಅಧ್ಯಕ್ಷ ಹಾಗೂ ಉಪನಿರ್ದೇಶಕರಾದ ಸಕ್ರೆಪ್ಪಗೌಡ ಬಿರಾದಾರ ಅವರು ಮಾರ್ಗದರ್ಶನ ನುಡಿಗಳನ್ನಾಡುತ್ತಾ ಕಲಿಕಾಚೇತರಿಕೆ ಕಾರ್ಯಕ್ರಮ ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದೆ, ಶಾಲೆಗಳಲ್ಲಿ ಸರಿಯಾದ ಅನುಷ್ಠಾನಗೊಳಿಸಬೇಕು, ಮಕ್ಕಳಿಗೆ ಆರಂಭಿಕ ಭಾಷೆ ಮತ್ತು ಗಣಿತವನ್ನು ಸರಿಯಾಗಿ ಕಲಿಸಬೇಕು ಎಂದರು.

ನಮ್ಮ ಶಾಲೆಗಳಲ್ಲಿ ಕಲಿಯುವಂತಹ ಮಕ್ಕಳು ಬಡವರ ಮಕ್ಕಳಾಗಿದ್ದು ಅವರ ಸಮಗ್ರ ಅಭಿವೃದ್ಧಿ ನಮ್ಮ ಗುರಿಯಾಗಬೇಕು. ಕಲಿಸಬೇಕು ಎಂಬುವುದು ನಮ್ಮೆಲ್ಲರ ಮನೋಧರ್ಮ ಆಗಬೇಕು. ಮಕ್ಕಳು ಕಲಿಯತ್ತಿಲ್ಲವೆಂದು ಅಸಡ್ಡೆ ತೋರಿಸದೇ ವಿವಿಧ ರೀತಿಯ ಬೋಧನಾ ವಿಧಾನಗಳನ್ನು ಅಳವಡಿಸಿಕೊಂಡು ಮಕ್ಕಳ ಕಲಿಕೆಗಾಗಿ ಶ್ರಮಿಸಬೇಕು ಎಂದರು. ಶೈಕ್ಷಣಿಕ ಕಾರ್ಯಪಡೆಯು ಇಲಾಖೆ ನೇಮಿಸಿರುವ ತಂಡವಾಗಿದ್ದು ಜಿಲ್ಲೆಯಲ್ಲಿ ಕಲಿಕಾಚೇತರಿಕೆ ಅನುಷ್ಠಾನಕ್ಕೆ ಸೂಕ್ತವಾದ ಮಾರ್ಗದರ್ಶನ ಒದಗಿಸಲಿದೆ ಎಂದರು.

ಕಲಿಕಾಚೇತರಿಕೆ ಕಾರ್ಯಪಡೆಯ ನೋಡಲ್ ಅಧಿಕಾರಿಗಳಾದ ರಾಜಶೇಖರ ಗೋಶಾಲ ಮತ್ತು ತಂಡದ ಸದಸ್ಯರು ಮಾಗದರ್ಶನ ಮಾಡುತ್ತಾ ಕಲಿಕಾಚೇತರಿಕೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಹತ್ವದ ಸಲಹೆಗಳನ್ನು ನೀಡಿದರು. ಕಲಿಕಾಚೇತರಿಕೆ ಉಪಕ್ರಮದ ತರಬೇತಿಯಲ್ಲಿ ತಿಳಿಸಿದ ಅಂಶಗಳನ್ನು ಅನುಷ್ಠಾನಕ್ಕೆ ತರಬೇತಿ ಮುಖ್ಯಗುರುಗಳು ಹಾಗೂ ಸಿ.ಆರ್.ಪಿ. ಅವರು ಇದನ್ನು ಶಾಲಾ ಹಂತದಲ್ಲಿ ಪುನ:ಶ್ಚೇತನಗೊಳಿಸಬೇಕು. ಮಕ್ಕಳವಾರು ಕೃತಿ ಸಂಪುಟ ನಿರ್ವಹಣೆ ಸಮರ್ಪಕವಾಗಿ ಮಾಡಬೇಕು.

ಮಕ್ಕಳ ಕಲಿಕಾ ಹಾಳೆಗಳಲ್ಲಿ ರಚನಾತ್ಮಕ ಸಲಹೆಗಳನ್ನು ನೀಡಬೇಕು. ಮಕ್ಕಳಿಗೆ ರಚನಾತ್ಮಕವಾಗಿ ಕಲಿಯುವ ವಾತಾವರಣ ಸೃಷ್ಠಿಸಬೇಕು. ಮಕ್ಕಳಿಗೆ ಆರಂಭಿಕ ಭಾಷೆ ಮತ್ತು ಗಣಿತದ ಸಾಮಥ್ರ್ಯಗಳನ್ನು ಸರಿಯಾಗಿ ಕಲಿಯಲು ಒತ್ತು ನೀಡಬೇಕು. ಗಣಿಕ ಕಲಿಕಾ ಕಿಟ್, ಕಲಿಕಾ ಹಾಳೆಗಳು, ಅಭ್ಯಾಸ ಪುಸ್ತಕ, ಶಿಕ್ಷಕರ ಕೈಪಿಡಿ, ಕಲಿಕಾ ಫಲಗಳು, ಪೂರಕ ಚಟುವಟಿಕೆಗಳು, ಪಠ್ಯಪುಸ್ತಕ ಇತ್ಯಾದಿಗಳು ಸರಿಯಾಗಿ ಬಳಕೆ ಮಾಡಬೇಕು. ವಿದ್ಯಾರ್ಥಿಗಳ ಸ್ವಮೌಲ್ಯಮಾಪನ, ಸ್ವವೇಗದ ಕಲಿಕೆ, ಸ್ವಮೌಲ್ಯಮಾಪನ ನೈಜ ಕಲಿಕೆಗೆ ಒತ್ತು ನೀಡಬೇಕು. ಕಲಿಕಾಚೇತರಿಕೆ ಕುರಿತು ಪಾಲಕ ಪೋಷಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಕಾರ್ಯಪಡೆಯ ಸದಸ್ಯರಾದ ರಮೇಶ ಜಾನಕರ್ ವಿಷಯ ಪರಿವೀಕ್ಷಕರು, ಪ್ರವೀಣ ಬಿ.ಆರ್.ಪಿ., ಕವಿತಾ ಸಿ.ಆರ್.ಪಿ. ಹಾಜರಿದ್ದು ಶೈಕ್ಷಣಿಕ ಮಾರ್ಗದರ್ಶನ ಮಾಡಿದರು. ಇಲಾಖೆಯ ಅಧಿಕಾರಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಳ್ಳಿ, ಎ.ಪಿ.ಸಿ. ಬಸನಗೌಡ, ಶಾಲೆಯ ಮುಖ್ಯ ಗುರುಗಳು, ಶಿಕ್ಷಕರು ಹಾಗೂ ಡಿ.ಎಸ್.ಇ.ಆರ್.ಟಿ – ಸ್ಟರ್ ಸಂಸ್ಥೆಯ ವಿಭಾಗೀಯ ಮುಖ್ಯಸ್ಥರಾದ ಕೆ.ಎಂ.ವಿಶ್ವನಾಥ ಮರತೂರ ಹಾಜರಿದ್ದು ಮಾರ್ಗದರ್ಶನ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here