ಒತ್ತಡವಿಲ್ಲದ ಬದುಕಿನಿಂದ ಸದೃಢ ಆರೋಗ್ಯ

0
15

ಪ್ರೆಸ್ ಮತ್ತು ಟ್ರೆಸ್ ಎರಡಕ್ಕೂ ನಿಕಟ ಸಂಬಂಧವಿದೆ. ಬದುಕಿನಲ್ಲಿ ಹಾಗೂ ವೃತ್ತಿಯಲ್ಲಿ ಉಂಟಾಗುವ ಒತ್ತಡಗಳನ್ನು ಸೃಜನಾತ್ಮಕವಾಗಿ ಸ್ವೀಕರಿಸಬೇಕು. ನಮ್ಮ ಮನಸ್ಸಿನ ಆಲೋಚನಾ ಕ್ರಮ ಸರಿಯಿದ್ದರೆ ಒತ್ತಡವಿಲ್ಲದ ಬದುಕನ್ನು ಸಾಗಿಸಬಹುದು ಎಂದು ಪ್ರೊಜೆಕ್ಟರ್ ಮೂಲಕ ಹಲವು ಉದಾಹರಣೆ ನೀಡಿ ವಿವರಿಸಿದರು.

ಕಲಬುರಗಿ: ಪತ್ರಕರ್ತರು, ರಾಜಕಾರಣಿಗಳು, ವೈದ್ಯರು ಸೇರಿದಂತೆ ಕಾರ್ಪೋರೇಟ್ ಸಂಸ್ಥೆಯಲ್ಲಿ ಕೆಲಸ ಮಾಡುವ ಎಲ್ಲರೂ ಒಂದಿಲ್ಲ ಒಂದು ಒತ್ತಡದೊಳಗೆ ಕೆಲಸ ಮಾಡಬೇಕಾಗುತ್ತದೆ ಎಂದು ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೆಯ ಪಾಟೀಲ ಅಭಿಪ್ರಾಯಪಟ್ಟರು.

Contact Your\'s Advertisement; 9902492681

ಕಾರ್ಯನಿರತ ಪತ್ರಕರ್ತರ ಸಂಘದ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಮಾಧ್ಯಮ ಮಿತ್ರರು ಹಾಗೂ ಅವರ ಕುಟುಂಬಸ್ಥರಿಗೆ ಭಾನುವಾರ ಹಮ್ಮಿಕೊಂಡಿದ್ದ “ಒತ್ತಡ ರಹಿತ ಮನಸ್ಸು, ರೋಗ ರಹಿತ ದೇಹ” ರಿಫ್ರೆಶ್‍ಮೆಂಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರ, ಆಸ್ತಿ ಅಂತಸ್ತು ಗಳಿಸಬಹುದು. ಆದರೆ ಅದನ್ನು ಅನುಭವಿಸಲು ಆರೋಗ್ಯ ಮುಖ್ಯ ಹೀಗಾಗಿ ಒತ್ತಡ ರಹಿತವಾಗಿ ಕೆಲಸ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಂಡು ಬರಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಯುನೈಟೆಡ್ ಆಸ್ಪತ್ರೆಯ ಮುಖ್ಯಸ್ಥ ಡಾ. ವಿಕ್ರಂ ಸಿದ್ದಾರೆಡ್ಡಿ ಮಾತನಾಡಿ, ಶಾಲಾ-ಕಾಲೇಜು ಹಂತದಿಂದಲೇ ಈ ವಿಷಯವನ್ನು ಮಕ್ಕಳಿಗೆ ಕಲಿಸುವುದರಿಂದ ಮುಂದೆ ಅವರು ಒತ್ತಡ ರಹಿತವಾಗಿ ಬದುಕಬಹುದು. ಅದೇರೀತಿಯಾಗಿ ಹಣಕಾಸು ನಿರ್ವಹಣೆ ಮಾಡುವುದನ್ನು ಕೂಡ ಮಕ್ಕಳಿಗೆ ಕಲಿಸಬೇಕು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಬೆಂಗಳೂರಿನ ಮನೋತಜ್ಞ ಭುಜಬಲಿ ಬೋಗಾರ ಮಾತನಾಡಿ, ಇಂದು ಎರಡು ಕ್ಷಣದಲ್ಲಿ ಜಗತ್ತಿನಾದ್ಯಂತ 7 ಜನ ಮಾನಸಿಕ ಒತ್ತಡದಿಂದ ಸಾವನ್ನಪ್ಪುತ್ತಿದ್ದಾರೆ. ಅಂತೆಯೇ ಮಾನಸಿಕ ಒತ್ತಡ ಕೂಡ ಇಂದು ಮಾರ್ಕೆಟಿಂಗ್ ಪ್ರೊಡೆಕ್ಟ್ ಆಗಿದೆ. ಆದರೆ ಇದೆಲ್ಲವೂ ನಮ್ಮ ಕೈಯಲ್ಲಿಯೇ ಇದೆ. ಮನಸ್ಸು ದೇಹ ಬೇರೆ, ಬೇರೆ ಅಲ್ಲ. ಎರಡೂ ಒಂದೇ. ಹೀಗಾಗಿ ಎರಡನ್ನೂ ಹತೋಟಿಯಲ್ಲಿಟ್ಟುಕೊಂಡು ಬದುಕು ಸಾಗಿಸಬೇಕು ಎಂದು ತಿಳಿಸಿದರು.

ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಡಾ. ಶಿವರಂಜನ ಸತ್ಯಂಪೇಟೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಬಾಬುರಾವ ಕೋಬಾಳ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ ವಂದಿಸಿದರು.

ಸುರೇಶ ಬಡಿಗೇರ, ದೇವಿಂದ್ರಪ್ಪ ಅವಂಟಿ, ರಾಮಕೃಷ್ಣ ಬಡಶೇಷಿ, ಶೇಷಮೂರ್ತಿ ಅವಧಾನಿ, ಸಂಜಯ ಚಿಕ್ಕಮಠ, ರಾಜಶೇಖರ ಸ್ವಾಮಿ, ಅಶೋಕ ಕಪನೂರ, ಶ್ರಾವಣಯೋಗಿ ಹಿರೇಮಠ, ಅರುಣ ಕದಮ್, ವಿಶ್ವನಾಥ ಸ್ವಾಮಿ, ಬಿ.ವಿ. ಚಕ್ರವರ್ತಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here