ಸಂವಿಧಾನದಿಂದ ಸಮಾನ ಅವಕಾಶ

0
14

ಕಲಬುರಗಿ : ನಗರದ ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದಲ್ಲಿ ಸಂವಿಧಾನ ಸಮರ್ಪಣಾ ದಿನ ಆಚರಿಸಲಾಯಿತು. ಡಾ.ಅಂಬೇಡ್ಕರ್ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಐ.ಎಸ್. ವಿದ್ಯಾಸಾಗರ ಮಾತನಾಡಿ, ಜಗತ್ತಿನಲ್ಲಿ ಸಂವಿಧಾನ ಶ್ರೇಷ್ಠ ಭಾರತ ಸಂವಿಧಾನವಾಗಿದೆ. ಜಾತ್ಯಾತೀತ ರಾಷ್ಟ್ರವಾಗಿದ್ದು ಎಲ್ಲ ನಾಗರಿಕರಿಗೆ ಸಮಾನ ಅವಕಾಶಗಳನ್ನು ಸಂವಿಧಾನ ನೀಡಿದೆ.

ಹೀಗಾಗಿ ಯಾವುದೇ ವ್ಯಕ್ತಿ ತನ್ನ ಸಾಮರ್ಥ್ಯದ ಆಧಾರದ ಮೇಲೆ ಜಾತಿ ಮತ ಎಂಬ ಬೇಧ ಭಾವಯಿಲ್ಲದೆ ತನಗಿಷ್ಟವಾದ ವೃತ್ತಿ ಆಯ್ಕೆ ಮಾಡಿಕೊಳ್ಳಬಹುದು. ಇಂತಹ ಶ್ರೇಷ್ಠ ಸಂವಿಧಾನವನ್ನು ನಮ್ಮ ದೇಶ ಹೊಂದಿದೆ. ಇಂತಹ ಸಂವಿಧಾನ ನೀಡುವಲ್ಲಿ ಕಾರಣರಾದ ಹಾಗೂ ಸಂವಿಧಾನದ ಡಾ.ಅಂಬೇಡ್ಕರ್ ಪಿತಾಮಹಾರಾದ ಅವರನ್ನು ನಾವೆಲ್ಲರೂ ಪೂಜಿಸಬೇಕು ಎಂದು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಪಿಲೂಹೋಮಿ ಇರಾನಿ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯೆ ಜ್ಯೋತಿ ಸ್ವಾಮಿ, ಕಾಲೇಜಿನ ಪ್ರಾಚಾರ್ಯ ಡಾ. ಎಸ್ ಚಂದ್ರಶೇಖರ, ಡಾ.ಅಪರ್ಣಾ ಸಿಂಧೆ, ಡಾ. ತಿಪ್ಪೇಸ್ವಾಮಿ ಎಸ್, ಪ್ರೊ ಮಹಾಂತೇಶ ಬಿದನೂರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here