ಕನ್ನಡದ ಶ್ರೀಮಂತಿಕೆಗೆ ಕಾರಣರಾದ ಮಾಸ್ತಿ ಕನ್ನಡದ ಆಸ್ತಿ

0
6

ಶಹಾಬಾದ: ನವೋದಯ ಕಾಲದ ಕನ್ನಡದ ಶ್ರೀಮಂತಿಕೆಗೆ ಕಾರಣರಾದ ಮಾಸ್ತಿ ಕನ್ನಡದ ಆಸ್ತಿಯಾಗಿದ್ದಾರೆ ಎಂದು ನಗರದ ಸರಕಾರಿ ಬಾಲಕರ ಪ್ರೌಢಶಾಲೆಯ ಶಿಕ್ಷಕಿ ಅಜರಾ ಸುಲ್ತಾನಾ ಹೇಳಿದರು.

ಅವರು ಮಂಗಳವಾರ ನಗರದ ಮಿನಿರೋಸ್ ಶಾಲೆಯಲ್ಲಿ ಕಸಾಪ ತಾಲೂಕಾ ಘಟಕದ ವತಿಯಿಂದ ಆಯೋಜಿಸಲಾದ ಮಾಸ್ತಿ ವೆಂಕಟೇಶ ಅಯ್ಯಂಗಾರರ ಬದುಕು-ಬರಹದ ಕುರಿತ ಕಾರ್ಯಕ್ರಮದಲ್ಲಿ ಉಪನ್ಯಾಸಕರಾರಿ ಮಾತನಾಡಿದರು.

Contact Your\'s Advertisement; 9902492681

ಅನೇಕ ಪ್ರಕಾರದ ಸಾಹಿತ್ಯವನ್ನು ರಚಿಸಿ, ಕನ್ನಡ ಸಾಹಿತ್ಯ ಪರಂಪರೆಯನ್ನು ಉತ್ತುಂಗಕ್ಕೆ ಏರಿಸಿದವರಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಮುಖರು. ಕನ್ನಡದ ಮೊದಲ ಕಥೆಗಾರರಲ್ಲ, ಆದರೆ ಅವರಷ್ಟು ಉತ್ತಮ ಕಥೆಗಳನ್ನು ಕನ್ನಡದಲ್ಲಿ ಬರೆದವರು ವಿರಳ. ಕಥೆಗಳಿಗೂ ಮಾಸ್ತಿಯವರಿಗೂ ಅವಿನಾವ ಸಂಬಂಧ. ಕನ್ನಡ ಕಥಾಬ್ರಹ್ಮ, ಸಣ್ಣಕಥೆಗಳ ಪಿತಾಮಹ, ಕಥೆಗಾರರ ಅಣ್ಣ ಎಂಬ ಹೇಳಿಕೆಗಳು ಇದಕ್ಕೆ ಸಾಕ್ಷಿ. ಮಾಸ್ತಿ ಅವರ ಮನೆಮಾತು ತಮಿಳು, ಕಾಲೇಜಿನಲ್ಲಿ ಓದಿದ್ದು ಇಂಗ್ಲಿμï. ಬದುಕಿದ್ದು, ಬರೆದದ್ದು ಕನ್ನಡ. ಅವರು ಮೊದಲಿನಿಂದಲೂ ಕನ್ನಡದ ಪರವಾಗಿ ದನಿಗೂಡಿಸಿದವರು.

1910ರ ಸುಮಾರಿನಲ್ಲಿ ಕನ್ನಡದಲ್ಲಿ ಮಾತಾಡುವುದಕ್ಕೆ, ಬರೆಯುವುದಕ್ಕೆ ವಿದ್ಯಾವಂತರು ಹಿಂದುಮುಂದು ನೋಡುತ್ತಿದ್ದರು. ಅಂಥ ದಿನಗಳಲ್ಲಿ ಮಾಸ್ತಿಯವರು ಕನ್ನಡದಲ್ಲಿ ಬರೆದರು. ಕನ್ನಡದ ಏಳಿಗೆಗೆ ಹೋರಾಡಿದರು. ಇದರಿಂದ ಕನ್ನಡ ಭಾμÉ, ಸಾಹಿತ್ಯ ಬೆಳೆಯಲು ಸಹಾಯವಾಯಿತು. ಮಾಸ್ತಿಯವರ ಮಾರ್ಗ ಹಲವರಿಗೆ ದಾರಿದೀಪವಾಯಿತು. ಕರ್ನಾಟಕ ಏಕೀಕರಣಕ್ಕೆ ಅವರು ನಿμÉ್ಠಯಿಂದ ದುಡಿದರು. ತಮ್ಮ ಉಪನ್ಯಾಸಗಳಿಂದ, ವೈಚಾರಿಕ ಬರಹಗಳಿಂದ ಜನರನ್ನು ಎಚ್ಚರಿಸಿದರು. ಅವರಿಂದ ಕನ್ನಡ ಸಾಹಿತ್ಯ ಕ್ಷೇತ್ರ ವಿಸ್ತಾರವಾಯಿತು ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ವಿಶ್ವರಾಧ್ಯ ಬೀರಾಳ ಮಾತನಾಡಿ, ಮಾಸ್ತಿಯವರ ಸಾಹಿತ್ಯದಂತೆ ಅವರ ಬದುಕೂ ದೊಡ್ಡದು. ಅವರ ಬದುಕು ಒಂದು ಮಹಾಕೃತಿ. ಅವರ ಬದುಕಿಗೂ, ಬರಹಕ್ಕೂ ಅಂತರ ಕಡಿಮೆ. ಬದುಕಿದಂತೆ ಬರೆಯಬೇಕು, ಬರೆದಂತೆ ಬದುಕಬೇಕು ಎನ್ನುವುದಕ್ಕೆ ಅವರು ಉತ್ತಮ ಉದಾಹರಣೆ. ಕನ್ನಡಕ್ಕೆ ಅಖಿಲ ಭಾರತ ಖ್ಯಾತಿ ದೊರಕಿಸಿಕೊಟ್ಟ ಕೀರ್ತಿ ಅವರದ್ದು.ಮಾಸ್ತಿಯಂತಹ ಶ್ರೇಷ್ಠ ಆಸ್ತಿ ಉಳಿಯಬೇಕಾದರೆ ಅವರ ಸಾಹಿತ್ಯ ಕೃತಿಗಳನ್ನು ಓದಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಸಾಪ ತಾಲೂಕಾ ಅಧ್ಯಕ್ಷ ಶರಣಬಸಪ್ಪ ಕೋಬಾಳ, ಕಸಾಪ ಖಜಾಂಚಿ ಬಾಬುರಾವ ಪಂಚಾಳ,ಕಜಾಪ ಅಧ್ಯಕ್ಷ ರಾಜಶೇಖರ ದೇವರಮನಿ,ಮಿನಿರೋಸ್ ಶಾಲೆಯ ಅಧ್ಯಕ್ಷ ಶಬ್ಬೀರ್ ಅಹ್ಮದ್, ಮುಖ್ಯಗುರು ಪರಶುರಾಮ ವೇದಿಕೆಯ ಮೇಲಿದ್ದರು.

ಕಸಾಪ ಗೌರವ ಕಾರ್ಯದರ್ಶಿ ಶರಣು ವಸ್ತ್ರದ್ ಪ್ರಾಸ್ತಾವಿಕ ನುಡಿದರು, ಶರಣಮ್ಮ ನಿರೂಪಿಸಿದರು, ಗೀತಾ ಸ್ವಾಗತಿಸಿದರು,ಅರ್ಚನಾ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here