ಜನಪದವೇ ವಿಜ್ಞಾನಕ್ಕೆ ಮೂಲ

0
84

ಕಲಬುರಗಿ : ವಿಜ್ಞಾನ, ತಂತ್ರಜ್ಞಾನ ಬೆಳೆಯಲು ಜನಪದವೇ ಮೂಲ ಕಾರಣ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಭಿಪ್ರಾಯಪಟ್ಟರು.

ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಮಹಾವಿದ್ಯಾಲಯದಲ್ಲಿ ರವಿವಾರ ಕನ್ನಡ ವಿಭಾಗದ ಜನಪದ ಅಧ್ಯಯನ ಕೇಂದ್ರದಿಂದ ಜನಪದ ವಸ್ತುಗಳ ಮಹತ್ವ ವಿಷಯ ಕುರಿತು ರಾಜ್ಯಮಟ್ಟದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಆಧುನಿಕ ಸಂಸ್ಕøತಿಯಿಂದ ಜನಪದ ಸೊರಗುತ್ತಿದೆ ಅದನ್ನು ಯುವ ಪೀಳಿಗೆಗೆ ಮಹಾವಿದ್ಯಾಲಂiÀi ತಿಳಿಸಿಕೊಡುತ್ತಿರುವ ಕೆಲಸ ಶ್ಲಾಘನೀಯವಾಗಿದೆ. ಜನಪದ ಹಳೆಯ ವಸ್ತುಗಳಿಂದ ವೈಜ್ಞಾನಿಕ ತಳಹದಿ ನಿಂತಿದೆ. ಆಧುನಿಕತೆ ಬೆಳೆದಂತೆ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿವೆ ಎಂದು ಹೇಳಿದರು. ಈ ಭಾಗದಲ್ಲಿ ಕನ್ನಡ ಭಾಷೆ, ಸಂಸ್ಕøತಿ ಬೆಳೆಯಲು ಶರಣಬಸವೇಶ್ವರ ಸಂಸ್ಥಾನದ ಕೊಡುಗೆ ಅಪಾರವಾಗಿದೆ. ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಜನಪದ ಕಲೆ, ಸಂಸ್ಕøತಿ ಬೆಳೆಸಲು ಬಹಳಷ್ಟು ಶ್ರಮಿಸಿದ್ದಾರೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ವೆಂಕಣ್ಣ ಡೊಣ್ಣೆಗೌಡರ ಆಶಯ ನುಡಿಗಳಾಡಿ , ಜನಪದ ಆಧುನಿಕತೆಯ ತಾಯಿಬೇರು, ಹಳೆಯ ಪದ್ಧತಿಗಳಿಂದಲೇ ಆಧುನಿಕತೆ ಬೆಳೆಯಲು ಸಾಧ್ಯವಾಗುತ್ತಿದೆ. ಜನಪದ ಕಲೆ, ಸಾಹಿತ್ಯ ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಅನೇಕ ಉದಾಹರಣೆಗಳ ಸಮೇತ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ವೈದ್ಯಕೀಯ, ವಿಜ್ಞಾನ ಅನೇಕ ಕ್ಷೇತ್ರಗಳು ಜನಪದದ ತಳಹದಿಯಿಂದಲೆ ಹುಟ್ಟಿಕೊಂಡಿವೆ, ಹಳೆಯ ವಸ್ತುಗಳು ಉಪಯೋಗಿಸುವುದರಿಂದ ಆರೋಗ್ಯವಾಗಿರಲು ಸಾಧ್ಯವಿದೆ. ಯುವ ಪೀಳಿಗೆ ಫಾಸ್ಟಪುಡ್, ಜಂಕ್‍ಪುಡ್ ತಿಂದು ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಅದಕ್ಕಾಗಿ ಜನಪದ ವಸ್ತುಗಳ ಬಗ್ಗೆ ತಿಳಿದುಕೊಳ್ಳುವುದು, ಬಳಸುವುದು ಮತ್ತು ಅವುಗಳನ್ನು ಉಪಯೋಗಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಆಳಂದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಣಮಂತ ಶೇರಿ ಖಜೂರಿ ಜನಪದ ವಸ್ತು ಸಂಗ್ರಹಾಲಯದ ಅವಶ್ಯಕತೆ ಕುರಿತು ನಡೆದ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿ ಭಾಗವಹಿಸಿ ಮಾತನಾಡಿದರು.

ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಪುಟ್ಟಮಣಿ ದೇವಿದಾಸ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡಿದರು. ಕೃಪಾಸಾಗರ ಗೊಬ್ಬುರ ನಿರೂಪಿಸಿ ವಂದಿಸಿದರೆ, ಕು. ಪೂಜಾ ಮಡಿವಾಳ ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಸೀಮಾ ಪಾಟೀಲ, ಶ್ರೀಮತಿ ಜಾನಕಿ ಹೊಸುರ, ಡಾ.ಶಾಂತಲಿಂಗ ಘಂಟೆ, ಡಾ.ನಾಗಮ್ಮ ಕೆ. ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here