371ಕಲಂ ಅಡಿ ನೇಮಕಾತಿ ಮತ್ತು ಮುಂಬಡ್ತಿ ನಡೆಸಲು ಒತ್ತಾಯ

0
17

ಕಲಬುರಗಿ: ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಜಾರಿಗೆ ಬಂದಿರುವ ಸಂವಿಧಾನದ 371ನೇ ಜೇ ಕಲಂ ತಿದ್ದುಪಡಿಯ ಅಡಿ ನೇಮಕಾತಿಗಳು ಮತ್ತು ಮುಂಬಡ್ತಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೇಮಕಾತಿ, ಮುಂಬಡ್ತಿಗಳ ಮಾನದಂಡದಂತೆ ನಡಸಿದರೆ ಮಾತ್ರ  ಕಲ್ಯಾಣ ಕರ್ನಾಟಕದ ನಿರುದ್ಯೋಗಿ ಯುವಕರಿಗೆ ನ್ಯಾಯ ಸಿಗುಲು ಸಾಧ್ಯ,  ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಕಲ್ಯಾಣ ಕರ್ನಾಟಕ ಜನಪರ ಸಂಫರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಯವರು ಬೂಮ್ಮಯಿ ಸರ್ಕಾರಕ್ಕೆ ಒತ್ತಾಯಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಸಮಿತಿಯ ಮುಖಂಡರು ಮತ್ತು ಚಿಂತಕರು ಹಾಗು ಫಲಾನುಬವಿಗಳು ಭಾಗವಹಿದರು. ಸಭೆಯಲ್ಲಿ ಸಮಿತಿಯ ಮುಖಂಡರಾದ ಡಾ.ಮಾಜಿದ ದಾಗಿ,ಬಿ.ಬಿ.ನಾಯಕ ಲಿಂಗರಾಜ ಸಿರಗಾಪೂರ, ಶಿವಲಿಂಗಪ್ಪ ಭಂಡಕ,  ಜ್ಞಾನಮಿತ್ರ ಶಾಮವೆಲ್,  ಡಾ.ಭದ್ರಶೆಟ್ಟಿ, ಅಬ್ದುಲ್ ರಹೀಮ್, ಅಸ್ಲಮ್ ಚೌಂಗೆ,ರಾಜು ಜೈನ್,  ಡಾ.ಗಾಂಧಿಜೀ ಮೋಳಕೇರೆ,ಪ್ರವೀಣ್ ಹರಿದಾಸ, ಬೀಮರಾಯ ಕಂದಳ್ಳಿ,  ಶಿವಯ್ಯಾ ಮಠಪತಿ, ಶಿವಕುಮಾರ ಬಿರಾದಾರ್, ವಿನೋದ ಪಾಟೀಲ, ಎಂ ಬಿ ನಿಂಗಪ್ಪ, ಮೊಖಬೂಲ್ ಪಟೇಲ್, ಬಾಬಾ ಪಕ್ರೋದ್ದಿನ್, ಶರಣು ನೆಲೋಗಿ, ವಾಹಿದಾ ಬೇಗಂ ಮಾತ್ನಾಡಿ ಸಲಹೆಗಳು ನೀಡಿದರು.

Contact Your\'s Advertisement; 9902492681

ಯಡಿಯೂರಪ್ಪನವರು ಮುಖ್ಯಮಂತ್ರಿಗಳಿದ್ದಾಗ ಬೇಡಿಕೆ ಇಟ್ಟಿದೇವು, ಇದಕ್ಕೆ ಆಗಿನ ಮುಖ್ಯಮಂತ್ರಿಗಳು ಸಹ ಒಪ್ಪಿಕೊಂಡು ದಿನಾಂಕ 17.9.2019 ರಂದು ಅಧಿಕೃತವಾಗಿ ಘೋಷಣೆ ಮಾಡಿರುರುವಂತೆ ಪ್ರಸ್ತುತ ಸರ್ಕಾರ ತಕ್ಷಣ ಸ್ಪಂದಿಸಿ ಕಲ್ಯಾಣಕ್ಕೆ ನ್ಯಾಯ ಒದಗಿಸಬೇಕೆಂದು  ಅದರಂತೆ ವಿಶೇಷ ಸ್ಥಾನಮಾನದ ಪರಿಣಾಮಕಾರಿ ಅನುಷ್ಠಾನಕ್ಕೆ ಮತ್ತು ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗೆ ಸರ್ಕಾರ ಪ್ರತ್ಯೇಕ ಮಂತ್ರಾಲಯ ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿದರು.

ಸಭೆಯಲ್ಲಿ ಸಮಿತಿಯ ಸದಸ್ಯರು ಹಾಗೂ 371ನೇ ಜೇ ಕಲಂ ಫಲದಿಂದ ಅರ್ಹ ಅಭ್ಯರ್ಥಿಗಳು ಸೇರಿದಂತೆ  ನೂರಾರು ಜನರು ಭಾಗವಹಿಸಿದರು.

ಸಭೆಯಲ್ಲಿ ಸರ್ವಾನುಮತದ ನಿರ್ಣಯದಂತೆ ಕಾಲಮಿತಿಯಲ್ಲಿ  ಮುಂದಿನ ಹೋರಾಟದ ರೂಪರೇಷಗಳನ್ನು ಹಮ್ಮಿಕೊಳ್ಳಲು ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರಿಗೆ ಅಧಿಕಾರ ನೀಡಲಾಯಿತು ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here