ಶಿಲ್ಪ ಕಲೆಯ ಬ್ರಹ್ಮ ಮಾನಯ್ಯ ಬಡಿಗೇರ

0
13

ಕಲಬುರಗಿ: ಅಯೋಧ್ಯಾ ಶ್ರೀ ರಾಮ ಭವ್ಯ ಮೂರ್ತಿಯ ಸಲಹಾ ಸಮಿತಿಯ ಸದಸ್ಯರಾಗಿ ಮನಯ್ಯ ಬಡಿಗೇರ ಅವರನ್ನು ಕಲಬುರಗಿ ಜಿಲ್ಲಾ ವಿಶ್ವಕರ್ಮ ಸಮಾಜದ ಮುಖಂಡರು ಸನ್ಮಾನಿಸಿದರು.

ನಂತರ ಸಮಾಜದ ಮುಖಂಡರಾದ ಮನೋಹರ್ ಪೆÇದ್ದಾರ ಅವರು ಮಾತನಾಡಿ, ಮಾನಯ್ಯ ಬಡಿಗೇರ ಅವರು ಶ್ರೀ ರಾಮ ಭವ್ಯ ಮೂರ್ತಿ ಸಲಹಾ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿರುವುದು ಇಡೀ ಕರ್ನಾಟಕ ಹೆಮ್ಮೆ ಪಡುವಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

Contact Your\'s Advertisement; 9902492681

ಬಡಿಗೇರ ಅವರ ದೇಶದ ನಾನಾ ಕಡೆಗಳಲ್ಲಿ ಕೆತ್ತಿದ ದೇವರ ವಿಗ್ರಹಗಳು, ದೇಗುಲಗಳ ಬಾಗಿಲು, ಚೌಕಟ್ಟುಗಳು ನೋಡುಗರ ಕಣ್ಮನ ಸೆಳೆಯುತ್ತವೆ ಮತ್ತು ಪೂಜಿಸಲ್ಪಡುತ್ತವೆ. ಅದಕ್ಕಾಗಿ ಮಾನಯ್ಯ ಬಡಿಗೇರ ಅವರನ್ನು ಶಿಲ್ಪಕಲೆಯ ಬ್ರಹ್ಮ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಕುಪ್ಪಣ್ಣ ಪೆÇದ್ದಾರ, ಮನೋಹರ ಪೆÇದ್ದಾರ್, ದೇವಿಂದ್ರ ದೇಸಾಯಿ ಕಲ್ಲೂರ್, ರಾಜು ಖೇಳಗಿ, ಮಲ್ಲಿನಾಥ ಕೊಡ್ಲಾ, ಬಂಗಾರಪ್ಪ ಪೆÇದ್ದಾರ್, ದೇವಿಂದ್ರ ಹಸನಾಪುರ, ಮಹೇಶ್ ತಡಕಲ್, ಲೋಕೇಶ್ ಶ್ರೀವಂತ್ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here