Monday, July 15, 2024
ಮನೆಬಿಸಿ ಬಿಸಿ ಸುದ್ದಿಮಲ್ಲಾಬಾದ್ ಏತ ನೀರಾವರಿಗೆ ರೂ.295.26 ಕೋಟಿ ಅನುಮೋದನೆ: ಸಚಿವ ಕಾರಜೋಳ್

ಮಲ್ಲಾಬಾದ್ ಏತ ನೀರಾವರಿಗೆ ರೂ.295.26 ಕೋಟಿ ಅನುಮೋದನೆ: ಸಚಿವ ಕಾರಜೋಳ್

ಕಲಬುರಗಿ: ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಲಿಫ್ಟ್ 1 ಮತ್ತು ಲಿಫ್ಟ್ 2 ರ ವಿತರಣಾ ಕಾಲುವೆಯಡಿಯಲ್ಲಿ ಬರುವ 295. 26 ಕೋಟಿ ರು ಮೊತ್ತದ ಕಾಮಗಾರಿಗಳಿಗೆ ಮುಂಬರುವ ಕೆಬಿಜೆಎನ್‍ಎಲ್ ಮಂಡಳಿ ಸಭೆಯಲ್ಲಿಟ್ಟು ಅನುಮೋದನೆ ನೀಡಲಾಗುವುದು ಎಂದು ಜಲಸಂಪನ್ಮೂಲ ಖಾತೆ ಸಚಿವ ಗೋವಿಂದ ಕಾರಜೋಳ್ ಬೆಳಗಾವಿ ಸುವರ್ಣ ಸೌಧ ಕಲಾಪದಲ್ಲಿ ಬುಧವಾರ ಹೇಳಿಕೆ ನೀಡಿದ್ದಾರೆ.

ಬೆಳಗಾವಿ ಸುವರ್ಣ ಸದನದಲ್ಲಿನ ನಡೆದಿರುವ ಕಲಾಪದಲ್ಲಿ ಶೂನ್ಯ ವೇಳೆಯಲ್ಲಿ ಜೇವರ್ಗಿ ಶಾಸಕರು, ವಿರೋಧ ಪಕ್ಷದ ಮುಕ್ಯ ಸಚೇತಕರಾದ ಡಾ. ಅಜಯ್ ಧರ್ಮಸಿಂಗ್ ರಸ್ತಾಪಿಸಿದ ಈ ವಿಷದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತ ಡಿ. 5 ರ ಮಂಡಳಿ ಸಭೆಯಲ್ಲಿ ಈ ವಿಚಾರ ಬರಬೇಕಾಗಿತ್ತು, ಬಂದಿಲ್ಲ, ಖಂಡಿತ ಮುಂದಿನ ಮಂಡಳಿ ಸಭೆಯಲ್ಲಿ ಮಲ್ಲಾಬಾದ್ ನೀರಾವರಿ ಯೋಜನೆಯ ಲಿಫ್ಟ್- 1 ಹಾಗೂ ಲಿಫ್ಟ್ 2 ರ ಕಾಮಗಾರಿಗಳಿಗೆ ಆದ್ಯತೆ ಮೇಲೆ ಅನುಮೋದನೆ ನೀಡಲಾಗುತ್ತದೆ ಎಂದರು.

ಇದಕ್ಕೂ ಮುನ್ನ ಸದನದಲ್ಲಿ ಸದರಿ ವಿಷಯ ಗಂಭೀರವಾಗಿ ಪ್ರಸ್ತಾಪಿಸಿದ ಶಾಸಕ ಡಾ. ಅಜಯ್ ಧರ್ಮಸಿಂಗ್ ಮಲ್ಲಾಬಾದ್ ಏತ ನೀರಾವರಿಯ ಲಿಪ್ಟ್ 1 ರಲ್ಲಿ ಬರುವ ವಿತರಮಾ ಕಾಲುವೆ ಸಂಖ್ಯೆ 6 ರಿಂದ 9 ರ ವರೆಗಿನ ಹಾಗೂ ವಿತರಣಾ ಕಾಲುವೆ ಸಂಖ್ಯೆ 3 ರಡಿಯಲ್ಲಿ ಬರುವ ಲ್ಯಾಟರಲ್ ನಿರ್ಮಾಣ ಪ್ಯಾಕೇಜ್ ಕಾಮಗಾರಿಗಳ ಅಂದಾಜು ವೆಚ್ಚ 175. 26 ಕೋಟಿ ರು, ಲಿಫ್ಟ್ 2 ರಲ್ಲಿ ಬರುವ ವಿತರಣಾ ಕಾಲುವೆ ಸಂಖ್ಯೆ 1 ರಿಂದ 13 ಹಾಗೂ ವಿತರಮಾ ಕಾಲುವೆ ಬಿಡಿ 1 ಮತ್ತು ಬಿಡಿ 2 ರ ಲ್ಯಾಟರಲ್ ಒಳಗೊಂಡ ಪ್ಯಾಕೇಜು ಕಾಮಗಾರಿಗಳ ಅಂದಾಜು ವೆಚ್ಚ 120 ಕೋಟಿ ರು ಕಾಮಗಾರಿಗಳು ಕೆಬಿಜೆಎನ್‍ಎಲ್‍ನಿಂದ ಅನುಮೋದನೆಗೊಳಗಾಗದೆ ಕಾಮಗಾರಿಗಳೆಲ್ಲವೂ ನೆನೆಗುದಿಗೆ ಬಿದ್ದಿವೆ. ಇದರಿಂದಾಗಿ ಜೇವರ್ಗಿಯ 42 ಹಳ್ಳಿ, ಶಹಾಪುರದ- 17 ಹಾಗೂ ಸುರಪುರದ 8 ಹಳ್ಳಿ ಸೇರಿದಂತೆ ಒಟ್ಟು 72 ಹಳ್ಳಿಗಳ ಜನ ನೀರಾವರಿಯಿಂದ ವಂಚಿತರಾಗಿದ್ದಾರೆಂದು ರೈತರ ಗೋಳಾಟವನ್ನು ಸದನದಲ್ಲಿ ವಿವರಿಸಿ ಗಮನ ಸೆಳೆದರು.

ತಾವು ಈಚೆಗೆ ಮಲ್ಲಾಬಾದ್ ಊರಿಗೆ ಭೇಟಿ ನೀಡಿದ್ದಾಗ ಅಲ್ಲಿನ ರೈತರು, ಜನತೆ, ಮುಖಂಡರೆಲ್ಲರೂ ಸೇರಿಕೊಂಡು ಯೋಜನೆ ಪೂರ್ಣಗೊಳ್ಳುಸಬೇಕೆಂದು ಆಗ್ರಹಿಸಿದ್ದಲ್ಲದೆ ನೆನೆಗುದಿಗೆ ಬಿದ್ದಿರುವ ಕೆಲಸಗಳನ್ನು ಕೈಗೆತ್ತಿಕೊಳ್ಳುವಂತೆಯೂ ದುಂಬಾಲು ಬಿದ್ದಾಗ ನೀರಾವರಿ ಸಚಿವ ಕಾರಜೋಳವರಿಗೆ ಅಲ್ಲಿಂದಲೇ ದೂರವಾಣಿ ಕರೆ ಮಾಡಿದ್ದನ್ನು ಮೆಲಕು ಹಾಕಿದರಲ್ಲದೆ, ಮಲ್ಲಾಬಾದ್ ಜನತೆಗೆ ನೀಡಿದ ಭರವಸೆಯಂತೆ ತಕ್ಷಣ ಲಿಫ್ಟ್ 1 ಹಾಗೂ ಲಿಫ್ಟ್2 ರ ಉಳಿದ ಕಾಮಗಾರಿಗಲಿಗೆ ತಗಲುವ ಅಂದಾಜು ವೆಚ್ಚ 295. 26 ಕೋಟಿ ರು  ಕಾಮಗಾರಿಗಳಿಗೆ ಅನುಮೋದನೆ ಕೊಡುವಂತೆ ಆಗ್ರಹಿಸಿದರು.

ಡಾ. ಅಜಯ್ ಸಿಂಗ್ ಅವರ ಶೂನ್ಯ ವೇಳೆಯಲ್ಲಿನ ಈ ಪ್ರಸ್ತಾವನೆ ಆಲಿಸಿ ಉತ್ತರಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ್ ಅವರು ಅಂದು ದೂರವಾಣಿಯಲ್ಲಿ ತಾವು ಮಲ್ಲಾಬಾದ್ ನೀರಾವರಿ ಕಾಮಗಾರಿಗಳ ಮಂಜೂರಾತಿ ಮಾಡಿಕೊಡುವ ಭರವಸೆ ನೀಡಿದ್ದು ತಾವು ನೀಡಿದ ಮಾತಿನಂತೆಯೇ ನಡೆಯೋದಾಗಿ ಹೇಳಿದರಲ್ಲದೆ ಮುಂದಿನ ಕೆಬಿಜೆಎನ್‍ಎಲ್ ಬೋರ್ಡ್ ಸಭೆಯಲ್ಲಿ ಈ ವಿಷಯವನ್ನಿಟ್ಟು ಅನುಮೋನನೆ ಕೊಡುವ ಭರವಸೆ ಸ್ಪೀಕರ್ ಕಾಗೇರಿ ಸಮ್ಮುಖದಲ್ಲಿ ನೀಡಿದರು.

ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯನವರೂ ಚರ್ಚೆಯಲ್ಲಿ ಪಾಲ್ಗೊಂಡು ಕಾಲಹರಣ ಯಾಕೆ? ಚುನಾವಣೆ, ನೀತಿ ಸಂಹಿತೆ ಬರೋದ್ರೊಳಗೇ ಈ ಕಾಮಗಾರಿಗೆ ಅನುಮೋದನೆ ಕೊಡೋದಕ್ಕೆ ಏನು ತೊಂದರೆ? ಎಂದು ಪ್ರಶ್ನಿಸಿದರು. ಮಾತು ಕೊಟ್ಟಂತೆಯೇ ತಾವು ನಡೆದಿಕೊಳ್ಳೋದಾಗಿ ಪುನರುಚ್ಚರಿಸಿದ ಸಚಿವ ಗೋವಿಂದ ಕಾರಜೋಳ್ ಮಲ್ಲಾಬಾದ್ ನೀರಾವರಿ ಯೋಜನೆಯ ಮೇಲೆ ಹೇಳಿದ ಕಾಮಗಾರಿಗಳಿಗೆ ಅನುಮೋದನೆ ನೀಡಿ ಅಗತ್ಯ ಅನುದಾನ ಲಭ್ಯವಿರುವಂತೆ ನೋಡಿಕೊಳ್ಳೋದಾಗಿ ಸ್ಪಷ್ಟಪಡಿಸಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular