ತೊಗರಿ ಹಾನಿ: ಸಾವಿರ ಕೋಟಿ ವಿಶೇಷ ಪ್ಯಾಕೇಜ್‍ ಘೋಷಣೆಗೆ ಶಾಸಕ ಅಜಯ್ ಸಿಂಗ್ ಆಗ್ರಹ

0
10

ಕಲಬುರಗಿ: ಸರ್ಕಾರ ನೆಟೆರೋಗದಿಂದ ಹಾನಿಗೊಳಗಾದ ತೊಗರಿ ಬೆಳೆಗಾರರಿಗೆ 1 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಪ್ರತಿ ಎಕರೆಗೆ 25,000 ರುಪಾಯಿಯಂತೆ ನಷ್ಟ ಪರಿಹಾರ ವಿತರಿಸಬೇಕು ಎಂದು ಜೇವರ್ಗಿ ಶಾಸಕರ, ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ಅಧಿವೇಶನದಲ್ಲಿ ಶೂನ್ಯ ವೇಳೆಯಲ್ಲಿ ತೊಗರಿ ರೈತರ ಸಮಸ್ಯೆಯ ಬಗ್ಗೆ ಎಳೆಎಳೆಯಾಗಿ ಪ್ರಸ್ತಾಪಿಸಿದ ಡಾ. ಅಜಯ್ ಸಿಂಗ್ ಎರಡು ವರ್ಷಗಳಿಂದ ಮಳೆ ಹೆಚ್ಚಿನ ಪ್ರಮಾಣದಲ್ಲಿ ಬೀಳುತ್ತಿರುವುದರಿಂದಲೇ ರೈತರು ಕಂಗಾಲಾಗಿದ್ದರು. ಇದೀಗ ಮಳೆಯ ಹೊಡೆತದ ಜೊತೆಗೇ ನೆಟೆ ರೋಗ, ಬೇರು ಒಣಗಿ ಹಾಗೂ ಎಲೆ ಉದುರುವ ಮೂರು ತರಹದ ರೋಗಗಲಿಂದ ತೊಗರಿ ಹಾಳಾಗಿದೆ ಎಂದು ರೈತರ ಗೊಳನ್ನು ವಿವರಿಸಿದರು.

Contact Your\'s Advertisement; 9902492681

ಪ್ರಸಕ್ತ ವರ್ಷ ಕಲಬುರಗಿ ಜಿಲ್ಲೆಯಲ್ಲಿ ಬಿತ್ತನೆಯಾದ 4.78 ಲP್ಷÀ ಹೆಕ್ಟೇರ್ ಪ್ರದೇಶದ್ಲಿನ ಫಸಲಲ್ಲಿ 1 ಲಕ್ಷ ಹೆಕ್ಟರ್‍ಗಿಂತ ಹೆಚ್ಚು ವಿಸ್ತೀರ್ಣದಲ್ಲಿ ನೆಟೆ ರೋಗದಿಂದ ಹಾಳಾಗಿದೆ. ಮೊದಲೇ ಅತಿವೃಷ್ಟಿಯಿಂದಾಗಿ ತೊಗರಿ ಹಾಳಾಗಿತ್ತು. ಇದೀಗ ನೆಟೆ ಸೇರಿದಂತೆ 3 ರೋಗದಿಂದ ತೊಗರಿ ಹಾಳಾಗಿದೆ. ತೊಗರಿ ಗಿಡಗಳು ಒಣಗಿ ನಿಂತಿವೆ. ಶೇ. 80 ರಷ್ಟು ಬಿತ್ತಲ್ಪಟ್ಟ ತೊಗರಿ ರೋಗಕ್ಕೆ ತುತ್ತಾಗಿದೆ ಎಂದು  ಸದನದ ಗಮನ ಸೆಳೆದರು.

ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ತೊಗರಿ ರೈತರಗೆ ಹೆಚ್ಚಿನ ಬೆಲೆಗೆ ಖರೀದಿಸಿz್ದÉೀವು, ಸಾಕಷ್ಟು ಬೆಂಬಲ ನೀಡಿz್ದÉೀವು. ಇಂದು ರೈತರು ಅನಾಥರಾಗಿದ್ದಾರೆ. ತೊಗರಿ ತಳಿ ಸಂಶೋಧನೆಯಾಗಿಲ್ಲ. ಒಂದೇ ತಳಿ ಬಿತ್ತಿರೋದರಿಂದ ನೆಟೆ ರೋಗ ಕಾಡುತ್ತಿದೆ ಎಂದೂ ಹೇಳಲಾಗುತ್ತಿದೆ. ಬಿತ್ತನೆಯಾದ 4,78 ಲP್ಷÀ ಹೆಕ್ಟೇರ್ ಪ್ರದೇಶದಲ್ಲಿ 1.30 ಲP್ಷÀ ಹೆಕ್ಟೇರ್, ಅತಿವೃಷ್ಟಿಯಿಂದ ಹಾಳಾದರೆ, ಉಳಿದುದರಲ್ಲಿ ಸುಮಾರು 1 ಲP್ಷÀಕ್ಕೂ ಅಧಿಕ ಹೆಕ್ಟೇರ್ ಪ್ರದೇಶ ನೆಟೆರೋಗದಿಂದ ಸಂಪೂರ್ಣ ಹಾಳಾಗಿದೆ. ತಕ್ಷಣ ಸಾವಿರ ಕೋಟಿ ರು ಪಾಯ್ಕೇಜ್ ನೀಡೋ ಮೂಲಕ ಹಾನಿಗೊಳಗಾದ ತೊಗರಿ ರೈತರ ನೆರವಿಗೆ ಬನ್ನಿರೆಂದು ಸರ್ಕಾರವನ್ನು ಆಗ್ರಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here