ಮಕ್ಕಳ ಸಂತೆಯಿಂದ ಮಕ್ಕಳಲ್ಲಿ ವ್ಯವಹಾರದ ಜ್ಞಾನ ವೃದ್ಧಿ

0
10

ಶಹಾಬಾದ: ಮಕ್ಕಳ ಸಂತೆಯಿಂದ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ವ್ಯವಹಾರದ ಜ್ಞಾನವಿದ್ದರೆ ಭವಿಷ್ಯದಲ್ಲಿ ವ್ಯಾಪಾರ,ವ್ಯವಹಾರ ನಡೆಸಲು ದಾರಿ ಸುಲಭವಾಗುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕ ಶಂಕರ ಸೋಮ್ಯಾಜಿ ಹೇಳಿದರು.

ಅವರು ಗುರುವಾರ ಸರಕಾರಿ ಕನ್ಯಾ ಮಾದರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಮಕ್ಕಳ ಸಂತೆಗೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಮಕ್ಕಳ ಸಂತೆ ಮಾಡುವುದರಿಂದ ಮಕ್ಕಳಿಗೆ ಲಾಭ ನಷ್ಟದ ಬಗ್ಗೆ ಗೊತ್ತಾಗುತ್ತದೆ. ಗ್ರಾಹಕರು ನೂರು ಕೊಟ್ಟು ಒಂದು ವಸ್ತುಕೊಂಡರೆ ಅದಕ್ಕೆ ಚಿಲ್ಲರೆ ಎಷ್ಟು ಕೊಡಬೇಕು ಎಂಬ ಲೆಕ್ಕ ತಿಳಿಯುತ್ತದೆ. ಇದರಿಂದ ಮಕ್ಕಳು ಹಣದ ಮಹತ್ವ ತಿಳಿದುಕೊಳ್ಳುತ್ತಾರೆ. ಮಕ್ಕಳು ತಮ್ಮ ವಸ್ತುಗಳ ವಿಲೇವಾರಿಯಾಗಬೇಕಾದರೆ ಗ್ರಾಹಕರನ್ನು ಹೇಗೆ ಸೆಳೆಯಬೇಕು. ಅವರಿಗೆ ತಮ್ಮ ವಸ್ತುಗಳ ಬಗ್ಗೆ ಸರಿಯಾದ ಮಾಹಿತಿ ಕೊಟ್ಟು ಅದರಿಂದಾಗುವ ಪ್ರಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ತಮ್ಮ ವಸ್ತು ಕೊಂಡುಕೊಳ್ಳುವಂತೆ ಮಾಡುವ ಕಲೆ ಕಲಿತುಕೊಳ್ಳುತ್ತಾರೆ.ಎಲ್ಲಾ ವಸ್ತುಗಳ ಹೆಸರು ಮತ್ತು ಪ್ರಯೋಜನವೇನೆಂಬುದು ಅರಿಯುತ್ತಾರೆ ಎಂದು ಹೇಳಿದರು.

ನಗರಸಭೆಯ ಸದಸ್ಯೆ ಸಾಬೇರಾಬೇಗಂ ಮಾತನಾಡಿ, ಶಾಲೆಗಳಲ್ಲಿ ಮಕ್ಕಳ ಸಂತೆಯನ್ನು ನಡೆಸುವುದರಿಂದ ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜ್ಞಾನ ಹೆಚ್ಚಾಗುತ್ತದೆ.ಭವಿಷ್ಯದಲ್ಲಿ ವ್ಯಾಪಾರ ನಡೆಸುವ ಸಂದರ್ಭಕ್ಕೆ ಪೂರಕ ವೇದಿಕೆಯಾಗುತ್ತದೆ.ಈ ಹಿನ್ನೆಲೆಯಲ್ಲಿ ಮಕ್ಕಳು ವ್ಯವಹಾರದ ಜ್ಞಾನ ಅರಿಯಲು ತುಂಬಾ ಪ್ರಯೋಜನಕಾರಿಯಾಗುತ್ತದೆ ಎಂದು ಹೇಳಿದರು.

ಪ್ರಾಭಾರಿ ಮುಖ್ಯಗುರುಮಾತೆ ಭಾರತಿ,ಶಾಲೆಯ ಶಿಕ್ಷಕರಾದ ಅಂಜನಾ ದೇಶಪಾಂಡೆ, ಎಸ್‍ವಿಯುಎಮ್ ಮಹಾದೇವಿ, ಕೀರ್ತಿ ಸೇರಿದಂತೆ ಪಾಲಕರು, ಶಾಲಾಮಕ್ಕಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here