ಯುವಶಕ್ತಿ ರಾಷ್ಟ್ರ ಶಕ್ತಿಯಾಗಲಿ: ಡಾ. ಪೆರ್ಲ

0
22

ಕಲಬುರಗಿ: ದೇಶದ ಯುವಕ ಯುವತಿಯರು ಸ್ವಾಮಿ ವಿವೇಕಾನಂದರ ಚಿಂತನೆ ಅಳವಡಿಸಿ ರಾಷ್ಟ್ರ ಶಕ್ತಿ ಆಗಬೇಕು.ಅವರ ಜೀವನ ಸಾಧನೆ ಅದ್ಯನ ಮಾಡಿ ಭಾರತದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ನವ ಜೀವನ ರಕ್ತ ನಿಧಿ ಕೇಂದ್ರ ಆಸ್ಪತ್ರೆ ಇವುಗಳ ಜಂಟಿ ಆಶ್ರಯದಲ್ಲಿ ಕಲಬುರ್ಗಿಯ ಸರಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿನಲ್ಲಿ ನಡೆದ ಸ್ವಾಮಿ ವಿವೇಕಾನಂದ ಅವರ 160 ನೇ ಜನ್ಮ ದಿನದ ಪ್ರಯುಕ್ತ ರಾಷ್ಟ್ರೀಯ ಯುವ ಸಪ್ತಾಹ 2023 ಇದರ ಅಂಗವಾಗಿ ಒಂದು ವಾರದ ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಆದರ್ಶ ಭಾರತ ಚಿಂತನ ಮಂಥನ ಕಾರ್ಯಕ್ರಮವನ್ನು ದೀಪ ಬೆಳಗಿಸುವುದು ಮಾತನಾಡಿದರು. ಭಾರತದ ಶ್ರೇಷ್ಠ ಪರಂಪರೆಯನ್ನು ಸಂಸ್ಕೃತಿಯನ್ನು ಜಗದಗಲ ಪಸರಿಸಿದ ರಾಷ್ಟ್ರಸಂತ ಸ್ವಾಮಿ ವಿವೇಕಾನಂದರ ಚಿಂತನೆಗಳು ಅಮರವಾದುದು ಸ್ವಾಮೀಜಿಯವರ ಪ್ರೇರಣೆಯಿಂದ ಅಂದಿನ ದಿನಮಾನದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಧೀ:ಶಕ್ತಿ ತುಂಬಿದರು. ಕರ್ನಾಟಕ ಸೇರಿದಂತೆ ಜಗತ್ತಿನ ಎಲ್ಲರೂ ಕೂಡ ಅವರ ಆದರ್ಶಗಳಿಂದ ಪ್ರಭಾವಿತರಾಗಿ ತಮ್ಮ ಬದುಕನ್ನು ಕಟ್ಟಿಕೊಂಡ ವೀರ ಸನ್ಯಾಸಿಯ ಜೀವನ ನಮಗೆಲ್ಲ ಪಾಠ ಎಂದು ಪೆರ್ಲ ನುಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸವನ್ನು ಎ,ಬಿ,ಪಿ ಹಿರಿಯ ಕಾರ್ಯಕರ್ತರಾದ ಶ್ರೀ ಮಹೇಶ ದೇಶಪಾಂಡೆ ನೀಡಿ ಸ್ವಾಮೀಜಿಯವರವರ ಕೊಡುಗೆ ಭಾರತಕ್ಕೆ ತುಂಬಾ ಅಪಾರ . ಜೀವನದ ಹಾದಿ ಬಗ್ಗೆ ಈಗಿನ ವಿದ್ಯಾರ್ಥಿಗಳು ಪಾಠವಾಗಲಿ ಎಂದು ಹೇಳಿದರು, ಪ್ರಾಸ್ತಾವಿಕವಾಗಿ ಮಾತನಾಡುತ್ತೆ ಕರವೇ ಜಿಲ್ಲಾಧ್ಯಕ್ಷರಾದ ಮಂಜುನಾಥ್ ನಾಲ್ವರ್ಕರ್ ಅವರು ಕರವೇ ಕಾವಲು ಪಡೆಯಿಂದ ಪ್ರತಿ ವರ್ಷದಂತೆ ಈ ವರ್ಷ ಕೂಡ ಸ್ವಾಮೀಜಿಯವರ ಜನ್ಮ ದಿನದ ಪ್ರಯುಕ್ತ ರಾಷ್ಟ್ರೀಯ ಯುವ ಸಪ್ತಹ ಕಾರ್ಯಕ್ರಮಗಳನ್ನು ವಿವಿಧ ಶಾಲಾ-ಕಾಲೇಜುಗಳಲ್ಲಿ ಸ್ವಾಮೀಜಿಯವರ ಜೀವನ ಚರಿತ್ರೆಯನ್ನು ತಿಳಿಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಕಾರ್ಯಾಧ್ಯಕ್ಷರಾದ ಮುಖ್ಯ ಅತಿಥಿಗಳಾಗಿ ಮಾಜಿ ಸದಸ್ಯರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಲಬುರಗಿ ,ಅಧ್ಯಕ್ಷತೆಯನ್ನು ಸರಕಾರಿ ಬಾಲಕಿಯರ ಕಾಲೇಜು ಪ್ರಾಂಶುಪಾಲರಾದ ಶ್ರೀ ದೇವನಗೌಡ ಪಾಟೀಲ ರವರ ವಹಿಸಿದರು.

ಪ್ರಾಸ್ತಾವಿಕ ನುಡಿ ಕರವೇ ಜಿಲ್ಲಾಧ್ಯಕ್ಷರಾದ ಮಂಜುನಾಥ ಶ,ನಾಲವಾರಕರ್ ರವರು ಮಾತನಾಡಿ ಕರವೇ ಕಾವಲುಪಡೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷ ಕೂಡ ಸ್ವಾಮಿಜಿಯರವರ ಜನ್ಮದಿನದ ಪ್ರಯುಕ್ತ ” ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮಗಳು ವಿವಿಧ ಶಾಲಾ ಕಾಲೇಜುಗಳಲ್ಲಿ ಸ್ವಾಮಿಜೀ ಅವರ ಜೀವನ ಚರಿತ್ರೆ ವಿದ್ಯಾರ್ಥಿಗಳಿಗೆ ಪಾಠವಾಗಲಿ ಎಂದು ನಮ್ಮ ಪ್ರಯತ್ನ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಕಾರ್ಯಾಧ್ಯಕ್ಷರಾದ ಪ್ರಲ್ಹಾದ ಹಡಗೀಲಕರ್,ಉತ್ತರ ವಲಯ ಅಧ್ಯಕ್ಷರಾದ ರಾಕೇಶ ಪಾಟೀಲ್,ಮುಖಂಡರಾದ ಅರವಿಂದ ನಾಟೀಕಾರ ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here