ಮಾದನಹಿಪ್ಪರಗಿ: ಕಲಿಕಾ ಹಬ್ಬದಲ್ಲಿ ಮಕ್ಕಳೊಂದಿಗೆ ಕುಣಿದು ಕುಪ್ಪಳಿಸಿದ ಶಿಕ್ಷಕರು

0
9

ಮಾದನಹಿಪ್ಪರಗಿ: ಗ್ರಾಮದ ಹೊಸ ಬಡಾವಣೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಂದು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದಂದು ವಿವಿಧ ಶಾಲೆಯ ಮುಖ್ಯಗುರುಗಳು ಹಾಗೂ ಸಿಆರ್‍ಪಿ ಸೇರಿ ಮಕ್ಕಳೊಂದಿಗೆ ಎಲ್ಲರೂ ಕುಣಿದು ಕುಪ್ಪಳಿಸಿದರು.

ಹೊಸ ಬಡಾವಣೆಯ ಶಾಲೆಯಿಂದ ಹಲಗೆ ಬಾಜಾ ಬಂಜಂತ್ರಿಗಳೊಂದಿಗೆ ಮಕ್ಕಳ ಲೇಜಿಮ್ ಚಿನ್ನಿಕೋಲ ಆಟಗಳೊಂದಿಗೆ ಹೊರಟ ಮೆರವಣಿಗೆ ಗ್ರಾಮದ ಸರಕಾರಿ ಆಸ್ಪತ್ರೆ ಮಾರ್ಗವಾಗಿ ವಾರದ ಸಂತೆಯ ಮೈದಾನ, ಎಸ್‍ಬಿಆಯ್ ಬ್ಯಾಂಕ, ಅಂಬೇಡ್ಕರ ವೃತ್ತ ಮತ್ತು ಬಸವೇಶ್ವರ ವೃತ್ತದ ರಸ್ತೆಗಳ ಮೂಲಕ ಹೊರಟು ಶಾಲೆಗೆ ತಲುಪಿತು. ಶಿಕ್ಷಣ ಸಂಯೋಜಕ ವಿದ್ಯಾದರ ಭಾವಿಕಟ್ಟಿ ಉದ್ಘಾಟಿಸಿ ಮಾತನಾಡುತ್ತ, ಎಲ್ಲಾ ಮಕ್ಕಳಲ್ಲಿ ಏನಾದರೂ ಮಾಡಬೇಕು ಕಲೊಯಬೇಕೆಂಬ ಕ್ರಿಯಾಶೀಲತೆ ಇದ್ದೇ ಇರುತ್ತದೆ. ಅವುಗಳನ್ನು ಹೊರಹಾಕಿವುದೇ ಇಲಾಖೆಯ ಒಂದು ವಿನೂತನ ಪ್ರಯೋಗವೇ ಈ ಕಲಿಕಾಹಬ್ಬ ಎಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಚೆನ್ನಪ್ಪ ಹಾಳೇನವರು, ಲಕ್ಷ್ಮಣ ಹಡಲಗಿ, ರಾಜಕುಮಾರ ಮಶಾಳೆಕರ್, ಘಾಳೆಪ್ಪ ಹಡಲಗಿ, ಮುಖ್ಯಗರುಗಳಾದ ಶ್ರೀಮಂತ ಪರೇಣಿ, ವೈಜನಾಥ ಕೋಟೆ, ರೇವಮ್ಮ ಪಾಟೀಲ, ಗುರುನಾಥ ಕೋಳಶೆಟ್ಟಿ, ನಾಗಪ್ಪ ಇಕ್ಕಳಕಿ ಇದ್ದರು. ಕಲಿಕಾ ಹಬ್ಬದ ನೇತೃತ್ವವನ್ನು ಸರಕಾರಿ ಪೌಢಶಾಲೆಯ ಮುಖ್ಯಗುರು ಟ.ಆರ್.ಪಾಟೀಲವಹಿಸಿದ್ದರು. ಅಧ್ಯಕ್ಷತೆ ಶಾಲೆಯ ಮುಖ್ಯಗರು ಗಂಗಯ್ಯ ಸ್ವಾಮಿ ವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here