ಜಿ-99, ನಾಲ್ಕುಚಕ್ರ ತಂಡ, ಸ್ಪಂದನಾ ಮಹಿಳಾ ತಂಡದ ವತಿಯಿಂದ ರಕ್ತದಾನ ಶಿಬಿರ 

0
9

ಕಲಬುರಗಿ : ನಗರದ ಮಕ್ತಾಂಪೂರ್ ಬಡಾವಣೆಯ ಶ್ರೀ ಗದ್ದುಗೆ ಮಠದಲ್ಲಿ ಪೂಜ್ಯಶ್ರೀ ವಿಜಯಮಾಹಾಂತ ದೇವರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಜಿ-99, ನಾಲ್ಕುಚಕ್ರ ತಂಡ ಹಾಗೂ ಸ್ಪಂದನಾ ಮಹಿಳಾ ತಂಡದ ವತಿಯಿಂದ ಐತಿಹಾಸಿಕ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು. ಪೂಜ್ಯ ಶ್ರೀ ಮೃತ್ಯುಂಜಯ ಸ್ವಾಮಿಗಳು ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.

ಈ ಒಂದು ಶಿಬಿರದಲ್ಲಿ 100 ಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ರಕ್ತದಾನ ಮಾಡುವ ಮೂಲಕ ಇದೊಂದು ಐತಿಹಾಸಿಕ ಯಶಸ್ವಿ ರಕ್ತದಾನ ಶಿಬಿರವನ್ನಾಗಿ ಮಾಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮನಿಪ್ರ ಮರುಳಸಿದ್ದ ಮಹಾಸ್ವಾಮಿಗಳು ಒಪತೇಶ್ವರ ಮಠ ಮಾಡ್ಯಾಳ, ಪರಮಪೂಜ್ಯ ಚನ್ನಬಸವ ದೇವರು ಅಕ್ಕಲಕೋಟ, ಪೂಜ್ಯ ಶ್ರೀ ಮೃತ್ಯುಂಜಯ ಸ್ವಾಮಿಗಳು, ಪೂಜ್ಯ ಶ್ರೀ ಅಭಿನವ ಶಿವಲಿಂಗೇಶ್ವರ ಮಹಾಸ್ವಾಮಿಗಳು ಮಾದನಹಿಪ್ಪರಗಾ ಹಾಗೂ ಪೂಜ್ಯ ಶ್ರೀ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳು, ಉತ್ಸವ ಸಮಿತಿ ಚರಪಟ್ಟಾಭಿಷೆಕ ಅಧ್ಯಕ್ಷ ಶಿವಶಂಕರಪ್ಪ ಎಸ್ ಹೊಸಗೌಡರು, ಉತ್ಸವ ಸಮಿತಿ ಚರಪಟ್ಟಾಭಿಷೆಕ ಕಾರ್ಯದರ್ಶಿ ಶರಣು ಎಸ್ ಗೊಬ್ಬುರ್, ಮಹಾಲಕ್ಶ್ಮಿ ಡಿಸ್ಟ್ರುಬ್ಯೂಟರ್ ಮಾಲಿಕರಾದ ರವೀಂದ್ರ ಬೆಕನಾಳ್, ಜಿ-99 ವ್ಯವಸ್ಥಾಪಾಕ ಶರಣು ಪಪ್ಪಾ, ನಾಲ್ಕುಚಕ್ರ ಮುಖ್ಯಸ್ಥರಾದ ಮಾಲಾ ಕಣ್ಣಿ, ಮಾಲಾ ದಣೂರ, ಸ್ಪಂದನಾ ಮಹಿಳಾ ತಂಡದ ಅಧ್ಯಕ್ಷೆ ಲತಾ ಬಿಲಗುಂದಿ, ಬಸವೇಶ್ವರ ಆಸ್ಪತ್ರೆ ಬ್ಲಡ್ ಬ್ಯಾಂಕ್ ವಿಭಾಗದ ಡಾ.ವಿದ್ಯಾ, ಆಸ್ಪತ್ರೆ ಸಿಬ್ಬಂದಿವರ್ಗ ಮತ್ತು ಜೀವನಧಾರ ಬ್ಲಡ್ ಬ್ಯಾಂಕ್ ಸಿಬ್ಬಂದಿವರ್ಗ ಹಾಗೂ ಬಡಾವಣೆಯ ಮಹಿಳೆರು.ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here