ಅನುಭವಗಳ ಹಿಡಿದಿಡುವ ಪುಸ್ತಕ “ಭರವಸೆಯ ಬೆಳಕು

0
109

ಕಲಬುರಗಿ: ಪುಸ್ತಕಗಳು ಜ್ಞಾನವನ್ನು ಹೆಚ್ಚಿಸುತ್ತವೆ. ಶೈಕ್ಷಣಿಕ ಕ್ಷೇತ್ರವೊಂದು ಸುಧಾರಣೆಯಾದರೆ ಉಳಿದೆಲ್ಲವೂ ತಾನಾಗಿಯೇ ಸುಧಾರಣೆಯಾಗುತ್ತದೆ. ಅವ್ವ ಕಲಿಸಿದ ಬದುಕಿನ ಶಿಕ್ಷಣ ಅದ್ಭುತವಾದದ್ದು. ಶೈಕ್ಷಣಿಕ ಕ್ಷೇತ್ರದ ಕೈಗನ್ನಡಿ. ಬದುಕಿನ ಅನುಭವಗಳನ್ನು ಹಿಡಿದಿಡುವ ಪುಸ್ತಕ “ಭರವಸೆಯ ಬೆಳಕು” ಎಂದು ದಿಶಾ ಕಾಲೇಜಿನ ಮುಖ್ಯಸ್ಥರಾದ ಶಿವಾನಂದ ಖಜೂರಿ ಅಭಿಮತ ವ್ಯಕ್ತಪಡಿಸಿದರು.

ಇಂದು ನಗರದ ಸರಕಾರಿ ಪದವಿ ಪೂರ್ವ ಬಾಲಕಿಯ ಕಾಲೇಜಿನಲ್ಲಿ ಪ್ರಜ್ಞಾ ಫೌಂಡೇಷನ್ ವತಿಯಿಂದ ಆಯೋಜಿಸಿದ “ಭರವಸೆಯ ಬೆಳಕು” ಪುಸ್ತಕ ಬಿಡುಗಡೆ, “ಮಕ್ಕಳು ಮೆಚ್ಚಿದ ಶಿಕ್ಷಕ” ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಡಿದರು. ನನ್ನ ವಿದ್ಯಾರ್ಥಿ ವಿಶ್ವನಾಥ ಅವರ ಬರವಣಿಗೆ ಅತ್ಯಂತ ಅಧ್ಯಯನ ಮತ್ತು ಅನುಭವಿಕ ನೆಲೆಯಲ್ಲಿದೆ. ಸಮಾಜವನ್ನು ಸುಧಾರಿಸುವ, ಬದಲಾವಣೆ ಬಯಸುವ ತುಡಿತವನ್ನು ಹೇಳುತ್ತವೆ. ಶಿಕ್ಷಣ ಕ್ಷೇತ್ರದ ಕಾಳಜಿಯನ್ನು ಒತ್ತಿ ಹೇಳುತ್ತವೆ. ಈ ಪುಸ್ತಕದಲ್ಲಿ ಶಿಕ್ಷಣ ಕ್ಷೇತ್ರದ ಮಹತ್ವದ ಫಲಾನುಭವಿಗಳಾದ ಮಕ್ಕಳು, ಶಾಲೆಗಳು, ಶಿಕ್ಷಕರು, ಅಧಿಕಾರಿಗಳು ಮತ್ತು ಪಾಲಕರನ್ನು ಗುರಿಯಾಗಿಸಿಕೊಂಡು ಅವರಲ್ಲಿ ಗುಣಾತ್ಮಕ, ರಚನಾತ್ಮಕ, ಧನಾತ್ಮಕ ಬದಲಾವಣೆ ತರಲು ಪೂರಕವಾಗುವ ಅಂಶಗಳಿಂದ ಒಳಗೊಂಡಿದೆ. ಶೈಕ್ಷಣಿಕ ಕ್ಷೇತ್ರ ಗುಣಾತ್ಮಕ ಅಂಶಗಳನ್ನು ಪರಿಚಯಿಸುತ್ತಾ ಅವುಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ಪರಿಚಯಿಸುವ ಮತ್ತು ಪಸರಿಸುವ ಕೆಲಸವನ್ನು ಈ ಪುಸ್ತಕ ಮಾಡಲಿದೆ. ಅದರ ಜೊತೆಗೆ ಮಕ್ಕಳು ಮೆಚ್ಚಿದ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ಕೊಡುತ್ತಿರುವ ಈ ಕೆಲಸ ಶ್ಲಾಘನೀಯವಾಗಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿದ ರಂಗಾಯಣದ ನಿರ್ದೇಶಕರಾದ ಪ್ರಭಾಕರ ಜೋಶಿ ಅವರು ಮರತೂರ ಅವರ ಬರವಣಿಗೆ ಓದಿಸಿಕೊಂಡು ಹೋಗುತ್ತದೆ. ಶೈಕ್ಷಣಿಕ ಚಿಂತನೆಗೆ ಹಚ್ಚುತ್ತವೆ. ಸಮಾಜದಲ್ಲಿ ಶಿಕ್ಷಣ ಕ್ಷೇತ್ರ ಹಾಗೂ ಶಿಕ್ಷಕ ಬದಲಾಬೇಕು. ನಮ್ಮ ಸುತ್ತಮುತ್ತಲು ಸಮಾಜದಲ್ಲಿರುವ ಧನಾತ್ಮಕ ಅಂಶಗಳನ್ನು ಗಮನಿಸಿ ಅವುಗಳನ್ನು ಇನ್ನಷ್ಟು ಹೆಚ್ಚು ಬೆಳೆಸಬೇಕು. ಯುವಕರಾದ ನಾವುಗಳೆಲ್ಲರೂ ಅತ್ಯಂತ ಶ್ರದ್ಧಾ ಭಕ್ತಿಯ ಮೂಲಕ ಸಮಾಜದಲ್ಲಿ ಬದುಕಿ ಬಾಳಬೇಕಿದೆ. ಯುವಕರು ಸಾಹಿತ್ಯದ ಕಡೆಗೆ ಓದಿನ ಕಡೆಗೆ ಆಸಕ್ತಿ ಹೆಚ್ಚು ಬೆಳಸಿಕೊಳ್ಳಬೇಕು ಎಂದು ಮಾರ್ಗದರ್ಶನ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಲೇಖಕ ಕೆ.ಎಂ.ವಿಶ್ವನಾಥ ಮರತೂರ, ಈ ಭೂಮಿಯ ಮೇಲೆ ಸಮೃದ್ಧ ಮಾನವ ಸಂಪನ್ಮೂಲ ತಯಾರಿಸುವ ಏಕೈಕ ಕ್ಷೇತ್ರ ಶಿಕ್ಷಣ. ಈ ದೇಶದಲ್ಲಿ ಅದೊಂದು ಕ್ಷೇತ್ರ ಸುಧಾರಣೆಯಿಂದ ಎಲ್ಲವೂ ಸುಧಾರಣೆಯಾಗಲಿದೆ. ಈ ಕ್ಷೇತ್ರ ಬದಲಾಗಲು ಇಲ್ಲಿರುವ ಶಿಕ್ಷಕರು, ಅಧಿಕಾರಿಗಳು, ಶಾಲೆಗಳು, ಪಾಲಕರು ತಮ್ಮೊಳಗೆ ಅಡಗಿರುವ ಗುಣಾತ್ಮಕ ಬಲಾವಣೆಯೊಂದಿಗೆ ಮುನ್ನುಗ್ಗಬೇಕಿದೆ. ಇವರೆಲ್ಲರೂ ರಚನಾತ್ಮಕವಾಗಿ ಆಲೋಚಿಸಿ ಅನುಷ್ಠಾನಗೊಳಿಸಬೇಕಿದೆ. ಸಮಾಜದಲ್ಲಿರುವ ಪ್ರತಿಯೊಬ್ಬರೂ ಈ ಶಿಕ್ಷಣ ಕ್ಷೇತ್ರದ ಫಲಾನುಭವಿಗಳಾಗುತ್ತಾರೆ. ಎಲ್ಲರಲ್ಲಿಯೂ ಗುಣಾತ್ಮಕ ಬದಲಾವಣೆಯಾಗದ ಹೊರತು ಸಮೃದ್ಧ ಮಾನವ ಸಂಪನ್ಮೂಲ ರಚನೆ ಗಗನಕುಸುಮವಾಗಿದೆ.

ಈ ಪುಸ್ತಕ ಶಿಕ್ಷಕರ ವೃತ್ತಿಪರತೆ ಹೆಚ್ಚಿಸುವ ಕೈಪಿಡಿಯಾಗುತ್ತದೆ. ಮಕ್ಕಳ ಜ್ಞಾನದ ಆಳವನ್ನು ಹೆಚ್ಚಿಸುವ ಹೊತ್ತಿಗೆಯಾಗಲಿದೆ. ಪಾಲಕರಿಗೆ ಮಕ್ಕಳನ್ನು ಶೈಕ್ಷಣಿಕವಾಗಿ ಬೆಳೆಸಲು ದಾರಿದೀಪವಾಗುತ್ತದೆ. ಯುವಕರಿಗೆ ಶೈಕ್ಷಣಿಕ ಸ್ಪೂರ್ತಿಯಾಗುತ್ತದೆ. ಶೈಕ್ಷಣಿಕ ಕ್ಷೇತ್ರದ ಮಾರ್ಗದರ್ಶಿಯಾಗುತ್ತದೆ. ಶಿಕ್ಷಣ ಕ್ಷೇತ್ರದ ಸಂಪನ್ಮೂಲಗಳ ಒಳನೋಟವಾಗಲಿದೆ ಎಂಬುವುದು ಈ ಪುಸ್ತಕದ ಪ್ರಮುಖವಾದ ಆಶೆಯವಾಗಿದೆ. ಸಮಾಜಕ್ಕಾಗಿ ಕೊಡುಗೆ ಕೊಡಲು ಇಂದು ರಾಜ್ಯದ ವಿಶೇಷವಾಗಿ “ಮಕ್ಕಳು ಮೆಚ್ಚಿದ ಶಿಕ್ಷಕ” ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ ದೇವನಗೌಡ ಪಾಟೀಲ ಮಾತನಾಡಿ ನಮ್ಮ ಕಾಲೇಜಿನಲ್ಲಿ ಇಂತದೊಂದು ಪ್ರಶಸ್ತಿ ಹಾಗೂ ಪುಸ್ತಕ ಬಿಡುಗಡೆ ಮಾಡುತ್ತಿರುವ ಉತ್ತಮ ಕೆಲಸ. ಶಿಕ್ಷಕರು ತಮ್ಮ ತಮ್ಮ ಕೆಲಸ ತಾವು ಮಾಡಿದರೆ ಗುಣಾತ್ಮಕ ಶಿಕ್ಷಣ ದೊರೆಯುತ್ತದೆ ಎಂದರು.
ಕರ್ನಾಟಕದ ಒಟ್ಟು 28 ಶಿಕ್ಷಕರಿಗೆ “ಮಕ್ಕಳು ಮೆಚ್ಚಿದ ಶಿಕ್ಷಕ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೀರಣ್ಣ ಮಡಿವಾಳ, ಬಸವರಾಜ ಸುಣಗಾರ ಬೆಳಗಾವಿ ಜಿಲ್ಲೆ. ಸೋಮು ಕುದಿರಿಹಾಳ- ಕೊಪ್ಪಳ ಜಿಲ್ಲೆ. ವೀರಯ್ಯ ಎಂ.ಪಿ.ಎಂ.-ಬಳ್ಳಾರಿ ಜಿಲ್ಲೆ, ಸತೀಷ್ ಬಿ.ಕೆ.- ದಾವಣಗೇರೆ ಜಿಲ್ಲೆ. ಹುಸೇನ ವಡಗೇರಾ, ಮಹೇಶಕುಮಾರ ಬಡಿಗೇರ, ಅಶೋಕ ತೊಟ್ನಳ್ಳಿ, ಸುವರ್ಣ, ಸಿದ್ಧಲಿಂಗ ಬಾಳಿ, ಪಾರ್ವತಿ, ರಾಜೇಶ್ವರಿ, ವಿಜಯಕುಮಾರ ಪಾಟೀಲ-ಕಲಬುರಗಿ ಜಿಲ್ಲೆ ತೋಟಮ್ಮ, ಭೀಮಪ್ಪ ಬೆಲ್ಲದ-ರಾಯಚೂರ ಜಿಲ್ಲೆ ಉಮಾಮಹೇಶ, ವಿಜಯಕುಮಾರಿ–ತುಮಕೂರ ಜಿಲ್ಲೆ. ನಾಗಣ್ಣ ಶಾಹಾಬಾದಿ,ನಾಗರತ್ನ, ಗುರಪ್ಪ ಬಂಡಿವಡ್ಡರ, ಈರಣ್ಣ ಭಜಂತ್ರಿ ಸಾಹೇಬಗೌಡ ಬಿರಾದಾರ–ಯಾದಗಿರಿ ಜಿಲ್ಲೆ. ಮಾರ್ಥಾಂಡ, ಸಂತೋಷಕುಮಾರ, ಖಲಿಲ್ ಅಹಮದ್, ವಿಷ್ಣುಕಾಂತ, ರಾಜೇಶ್ವರಿ ಕಲ್ಮನಿ,
ಕಾರ್ಯಕ್ರಮದಲ್ಲಿ ಶ್ರೀನಿವಾಸ ಕುಲಕರ್ಣಿ, ಜಗನ್ನಾಥ ನಾಗೂರೆ, ರಿಯಾಜ್ ಪಟೇಲ್, ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ಪ್ರಿಯಾಂಕ ಪಾಟೀಲ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here