ಶಿಕ್ಷಕÀ ಆತ್ಮಹತ್ಯೆ: ಸುರಪುರನಲ್ಲಿ ನೌಕರರಿಂದ ಶ್ರದ್ಧಾಂಜಲಿ

0
12

ಸುರಪುರ: ರಾಜ್ಯದ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ ಬೋಧಕೇತರ ನೌಕರರಿಗೆ ಹಳೆ ಪಿಂಚಣಿ ಸೌಲಭ್ಯ ಒದಗಿಸುವಲ್ಲಿ ಸರಕಾರ ನಿರ್ಲಕ್ಷ್ಯ ಮನೋಭಾವನೆ ತೋರಿಸುತ್ತಿದ್ದು ಕೂಡಲೇ ಸರಕಾರ ಪಿಂಚಣಿ ಸೌಲಭ್ಯ ಜಾರಿಗೊಳಿಸಬೇಕು ಎಂದು ತಾಲೂಕು ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಾಹೇಬರಡ್ಡಿ ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿ ಮೃತಪಟ್ಟ ಶಿಕ್ಷಕ ಶಂಕ್ರಪ್ಪ ಬೋರೆಡ್ಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಬೆಂಗಳೂರನ ಫ್ರೀಡಂ ಪಾರ್ಕನಲ್ಲಿ ಕಳೆದ 140 ದಿನಗಳಿಂದ ನಡೆಯುತ್ತಿರುವ ಪಿಂಚಣಿ ವಂಚಿತ ನೌಕರರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಿಕ್ಷಕ ಶಂಕ್ರಪ್ಪ ಬೋರೆಡ್ಡಿರವರು ಬೆಂಗಳೂರನಲ್ಲಿಯೇ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು ಅನುದಾನಿತ ಶಿಕ್ಷಕರಿಗೆ ಪಿಂಚಣಿ ಸೌಲಭ್ಯ ಇಲ್ಲದೆ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದು ಅನುದಾನಿತ ನೌಕರರಿಗೆ ಪಿಂಚಣಿ ಸೌಲಭ್ಯ ನೀಡಬೇಕು ಎಂದು ಡೆತ್ ನೋಟ್ ಬರೆದಿದ್ದಾರೆ ಶಿಕ್ಷಕನ ಸಾವಿಗೆ ಸರಕಾರದ ನಿರ್ಲಕ್ಷ್ಯ ಧೋರಣೆಯ ಕಾರಣವಾಗಿದ್ದು ಈ ಸಾವು ನ್ಯಾಯವೇ ಸರಕಾರ ಉತ್ತರಿಸಬೇಕು ಎಂದು ಹೇಳಿದರು,

Contact Your\'s Advertisement; 9902492681

ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದ ಜೆಡಿ(ಎಸ್) ಮುಖಂಡ ದೇವಿಂದ್ರಪ್ಪ ಬಳಿಚಕ್ರ ಮಾತನಾಡಿ ಶಿಕ್ಷಕ ಶಂಕ್ರಪ್ಪ ಬೋರೆಡ್ಡಿ ಅವರ ಸಾವಿಗೆ ರಾಜ್ಯ ಸರಕಾರವೇ ಕಾರಣ ಕಳೆದ 3-4 ತಿಂಗಳುಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿರುವ ಅನುದಾನಿತ ನೌಕರರು ನ್ಯಾಯಯುತ ಬೇಡಿಕೆಗಳಾದ ಪಿಂಚಣಿ ಸೌಲಭ್ಯ ಹಾಗೂ ಆರೋಗ್ಯ ಸಂಜೀವಿನಿ ನೀಡುವುದು ಬೇಡಿಕೆಗಳನ್ನು ಈಡೇರಿಸುವಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಈ ಕುರಿತು ಮಾನ್ವಿಯಲ್ಲಿ ನಡೆದ ಪಂಚರಥ ಯಾತ್ರೆಯಲ್ಲಿ ಜೆಡಿ(ಎಸ್) ಮುಖಂಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿ ಸರಕಾರ ಅನುದಾನಿತ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಲ್ಲ ಮುಂಬರುವ ದಿನಗಳಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದಲ್ಲಿ ಅನುದಾನಿತ ನೌಕರರಿಗೆ ಹಳೆ ಪಿಂಚಣಿ ಸೌಲಭ್ಯ ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೃತಪಟ್ಟ ಶಿಕ್ಷಕ ಶಂಕ್ರಪ್ಪ ಬೋರೆಡ್ಡಿ ಭಾವಚಿತ್ರಕ್ಕೆ ಮಾಲಾರ್ಪಣೆಗಯದು ನಂತರ 2ನಿಮಿಷ ಮೌನಾಚರಣೆ ನೆರವೇರಿಸಿ ಶ್ರದ್ದಾಂಜಲಿ ಸಲ್ಲಿಸಲಾಯಿತು, ನಗರದ ಅನುದಾನಿತ ಶಾಲಾ-ಕಾಲೇಜುಗಳ ಶಿಕ್ಷಕರಾದ ಮಹೇಶ ಜಾಗೀರದಾರ, ಚುನ್ನುಪಟೇಲ, ಮಲ್ಲಣ್ಣ, ಗಂಗಾಧರ ರುಮಾಲ, ಮಹೇಶ ಕುಂಟೋಜಿ, ಪಾಲ್ ನಾಯಕ, ನಾಗೇಶ ಗದ್ದನಕೇರಿ, ಮಾನಪ್ಪ ಬಾಚಿಮಟ್ಟಿ,ಸೋಮಶೇಖರ ರಾಠೋಡ, ಸಂಪತಕುಮಾರ ಗುಡೂರ, ಸಂತೋಷ ಕುಲಕರ್ಣಿ, ಈರಣ್ಣ ಹೊನ್ನಗೋಳ, ವಿನೋದ ದಿವಟೆ, ದತ್ತುರಾವ ಕುಲಕರ್ಣಿ, ಶಂಕರ, ಧೀರೇಂದ್ರ ಕುಲಕರ್ಣಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ನಿವೃತ್ತ ನೌಕರರು ಉಪಸ್ಥತಿರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here