ಸುರಪುರ: ಕಡ್ಲಪ್ಪನವರ ಮಠದಲ್ಲಿ ಶರಣ ಚರಿತಾಮೃತ ಪ್ರವಚನಕ್ಕೆ ಚಾಲನೆ

0
5

ಸುರಪುರ: ಒತ್ತಡದ ಬದುಕಿನಲ್ಲಿ ಬದುಕುತ್ತಿರುವ ಮನುಷ್ಯ ಬದುಕಿನಲ್ಲಿ ನೆಮ್ಮದಿ ಕಾಣಬೇಕಾದರೆ ಹಾಗೂ ಮಾನವನ ಬದುಕು ಸಾಕಾರಗೊಳ್ಳಲು ಅಧ್ಯಾತ್ಮಕ ಅತ್ಯವಶ್ಯಕೆಂದು ಖೇಳಗಿಯ ಶಿವಲಿಂಗೇಶ್ವರ ಸಂಸ್ಥಾನದ ಮಠದ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.

ನಗರದ ಕಬಾಡಗೇರಾ ಕಡ್ಲಪ್ಪನವರ ನಿಷ್ಠಿ ವಿರಕ್ತಮಠದಲ್ಲಿ ಲಿಂ.ಮಲ್ಲಿಕಾರ್ಜುನ ಮಹಾಸ್ವಾಮಿಗಳ 47ನೆ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ಶರಣ ಚರಿತಾಮೃತ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಪುರಾಣ ಪ್ರಚನಗಳು ಮಾನವನ ಮನಸ್ಸನ್ನು ಶುದ್ಧೀಕರಿಸುವ ಸಾಧನಗಳಾಗಿವೆ ಇಂತಹ ಮಠಮಾನ್ಯಗಳಲ್ಲಿ ನಡೆಯುವ ಶರಣರ ಅಧ್ಯಾತ್ಮದ ಸಾಂಗತ್ಯದಿಂದ ಬದುಕಿನಲ್ಲಿ ಬರುವ ಒತ್ತಡ ಕಡಿಮೆ ಮಾಡಿಕೊಳ್ಳಲು ಸಹಕಾರಿ ಆಗುತ್ತದೆ ಭಕ್ತರ ಶ್ರೇಯೋಭಿವೃದ್ಧಿಗಾಗಿ ಶ್ರೀಮಠವು ನಿರಂತರವಾಗಿ ಶರಣರ ಪ್ರವಚನ ಏರ್ಪಡಿಸುತ್ತಾ ಬಂದಿರುವುದು ಸ್ತುತ್ಯಾರ್ಹವಾದದ್ದು ಎಂದು ಹೇಳಿದರು.

Contact Your\'s Advertisement; 9902492681

ಧಾರವಾಡದ ಶಿವಬಸವ ದೇವರು ಮಾತನಾಡಿ ಗುರು ಶಿಷ್ಯರ ಪರಂಪರೆಯಲ್ಲಿ ಸಂಸ್ಕಾರ ಪಡೆದುಕೊಳ್ಳುವದರಿಂದ ಯಶಸ್ವಿಯಾಗಿ ಜೀವನ ಸಾಗಿಸಬಹುದಾಗಿದೆ ಪ್ರವಚನವನ್ನು ಶ್ರವಣ ಮಾಡಿಕೊಳ್ಳುವ ಮೂಲಕ ಜೀವನವನ್ನು ಪಾವನವಾಗಿಸಿಕೊಳ್ಳಿ ಎಂದರು.
ಕೋಳೂರುದ ಮೃತ್ಯುಂಜಯ ದೇವರು ಹಾಗೂ ನೇತೃತ್ವ ವಹಿಸಿದ್ದ ಕಡ್ಲಪ್ಪನವರ ಮಠದ ಪೀಠಾಧಿಪತಿ ಪ್ರಭುಲಿಂಗ ಮಹಾಸ್ವಾಮಿಗಳು ಮಾತನಾಡಿದರು.

ಮಾ1 ವರೆಗೆ ನಡೆಯಲಿರುವ ಶರಣ ಚರಿತಾಮೃತ ಪ್ರವಚನವನ್ನು ಪ್ರವಚನಕಾರರಾದ ಶಿವಕುಮಾರಸ್ವಾಮಿ ಹಿರೇಮಠ ತಡಕಲ್(ಮಾನ್ವಿ) ಪ್ರವಚನ ನೆರವೇರಿಸಿಕೊಡಲಿದ್ದಾರೆ, ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು ಶಿವಕುಮಾರ ಮಸ್ಕಿ ನಿರೂಪಿಸಿದರು ರಾಜಶೇಖರ ದೇಸಾಯಿ ಸ್ವಾಗತಿಸಿದರು ಹೆಚ್.ರಾಠೋಡ ವಂದಿಸಿದರು. ಕೊಟ್ರಯ್ಯಸ್ವಾಮಿ ಬಳ್ಳುಂಡಗಿಮಠ, ವಿರೇಶ ನಿಷ್ಠಿ ದೇಶಮುಖ, ಬಲಭೀಮನಾಯಕ ವಕೀಲರು ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here