ಮೌಂಟೇನ್ ಡ್ಯೂನ `ಡರ್ ಕೆ ಆಗೇ ಜೀತ್ ಹೈ’ ಹೊಸ ಜಾಹೀರಾತಿನಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು

0
10

ಬೆಂಗಳೂರು: ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಗ್ರಾಹಕರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಮೌಂಟೇನ್ ಡ್ಯೂ ಇಂದು ಸೂಪರ್ ಸ್ಟಾರ್ ಮತ್ತು ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಮಹೇಶ್ ಬಾಬು ನಟಿಸಿರುವ ರೋಮಾಂಚಕಾರಿ ಬೇಸಿಗೆ ಜಾಹೀರಾತು ಅಭಿಯಾನವನ್ನು ಅನಾವರಣಗೊಳಿಸಿದೆ. ಮೌಂಟೇನ್ ಡ್ಯೂನ ತತ್ತ್ವ `ಡರ್ ಕೆ ಆಗೆ ಜೀತ್ ಹೈ’ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಈ ಅಭಿಯಾನವು ಗ್ರಾಹಕರನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ. ಹೈ-ಒಕ್ಟೇನ್ ಸ್ಟಂಟ್ ಗಳು ಮತ್ತು ಸ್ಪೂರ್ತಿದಾಯಕವಾದ ಕಥಾಹಂದರದೊಂದಿಗೆ ಹೊಸ ಟಿವಿಸಿಯಾಗಿರುವ ಈ ಅಭಿಯಾನದಲ್ಲಿ ಸವಾಲಿನ ಹೊರತಾಗಿಯೂ ಜೀವನದಲ್ಲಿ ಹೊರಹೊಮ್ಮುವ ಮೌಂಟೇನ್ ಡ್ಯೂ ಧ್ಯೇಯವಾಕ್ಯವನ್ನು ಮತ್ತಷ್ಟು ಮುಂದಕ್ಕೆ ಮತ್ತು ಎತ್ತರಕ್ಕೆ ಕೊಂಡೊಯ್ಯುವುದರಲ್ಲಿ ಸಂದೇಹವಿಲ್ಲ.

ಸೂಪರ್ ಸ್ಟಾರ್ ಆಗಿರುವ ಮಹೇಶ್ ಬಾಬು ಅವರು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಕಾರ್ಗೊ ವಿಮಾನದಿಂದ ಕೆಳಗೆ ಧುಮುಕುವ ಸಾಹಸಮಯ ದೃಶ್ಯವನ್ನು ಈ ಟಿವಿಸಿಯಲ್ಲಿ ಸೆರೆಹಿಡಿಲಾಗಿದೆ. ಅತ್ಯಂತ ಎತ್ತರದಿಂದ ಧುಮುಕುವ ಸಾಹಸವನ್ನು ಮಹೇಶ್ ಬಾಬು ಪ್ರದರ್ಶಿಸಲಿದ್ದಾರೆಯೇ ಎಂಬ ಅನುಮಾನ ಎಲ್ಲರಲ್ಲೂ ಮನೆ ಮಾಡಿತ್ತು. ಈ ಬಗ್ಗೆ ಎಲ್ಲರಿಗೂ ಭಯವಿತ್ತು. ಆದರೆ, ಇಂತಹ ಸವಾಲನ್ನು ಸಮರ್ಥವಾಗಿ ಮತ್ತು ಧೈರ್ಯವಾಗಿ ಎದುರಿಸುವ ಮೂಲಕ ಜಯಶಾಲಿಯಾಗಿ ಬಂದು ಎಲ್ಲರಿಗೂ ಸ್ಪೂರ್ತಿದಾಯಕರಾಗುತ್ತಾರೆ. ಮೌಂಟೇನ್ ಡ್ಯೂ ಫಿಲಾಸಪಿಗೆ ಅನುಗುಣವಾಗಿ ಸಾಹಸವನ್ನು ಮುಗಿಸುವ ಸಂಕಲ್ಪದೊಂದಿಗೆ ಮಹೇಶ್ ಬಾಬು ಮೌಂಟೇನ್ ಡ್ಯೂ ಅನ್ನು ಗುಟುಕಿಸುತ್ತಾರೆ ಮತ್ತು ಅದಕ್ಕಾಗಿ ಸಾಹಸಮಯ ಪ್ರದರ್ಶನವನ್ನು ನೀಡುತ್ತಾರೆ. ಮಹೇಶ್ ಬಾಬು ಅವರು ತಮ್ಮ ಮೋಟಾರ್ ಸೈಕಲ್ ನೊಂದಿಗೆ ಹೊರಟು ವಿಕ್ಟೋರಿಯಸ್ ನನ್ನು ಮತ್ತೊಂದು ಸರಕು ವಿಮಾನದಲ್ಲಿ ಮಧ್ಯದಲ್ಲಿ ಎದುರಿಸಿ ಸವಾಲುಗಳ ನಡುವೆ ಇಳಿಯುತ್ತಿದ್ದಂತೆಯೇ ಚಲನಚಿತ್ರವು ಒಂದು ಉತ್ತೇಜನ ಮತ್ತು ಸ್ಪೂರ್ತಿಯನ್ನು ತುಂಬುವುದರೊಂದಿಗೆ ಕೊನೆಗೊಳ್ಳುತ್ತದೆ.

Contact Your\'s Advertisement; 9902492681

ಈ ಅಭಿಯಾನದ ಬಗ್ಗೆ ಮಾತನಾಡಿದ ಪೆಪ್ಸಿಕೊ ಇಂಡಿಯಾದ ಮೌಂಟೇನ್ ಡ್ಯೂನ ಕೆಟಗರಿ ಡೈರೆಕ್ಟರ್ ವಿನೀತ್ ಶರ್ಮಾ ಅವರು, “ಮೌಂಟೇನ್ ಡ್ಯೂಗಾಗಿ ನಮ್ಮ ಹೊಸ ಬೇಸಿಗೆ ಅಭಿಯಾನವನ್ನು ನಾವು ಅನಾವರಣಗೊಳಿಸಿದ್ದೇವೆ. ಇದರ ಮೂಲಕ ಮಹೇಶ್ ಬಾಬು ಅವರೊಂದಿಗಿನ ನಮ್ಮ ಸಹಭಾಗಿತ್ವವನ್ನು ಮುಂದುವರಿಸಲು ನಾವು ಸಂತೋಷಪಡುತ್ತೇವೆ. ಬ್ರ್ಯಾಂಡ್ ನ `ಡರ್ ಕೆ ಆಗೇ ಜೀತ್ ಹೈ’ ತತ್ತ್ವವನ್ನು ಬಲಪಡಿಸುತ್ತಿದ್ದೇವೆ. ಅವರ ಭಯವನ್ನು ಹೋಗಲಾಡಿಸುವ ಮತ್ತು ಸವಾಲನ್ನು ಜಯಿಸಿ ವಿಜೇತರಾಗಿ ಹೊರಹೊಮ್ಮುವ ಅನ್ವೇಷಣೆಯನ್ನು ಹೊಂದಿರುವ ಈ ಜಾಹೀರಾತು ಚಲನಚಿತ್ರವು ಪ್ರತಿಯೊಬ್ಬರೂ ಸಂಭ್ರಮಿಸುವಂತೆ ಮಾಡುತ್ತದೆ ಹಾಗೂ ಸಾಹಸಗಳನ್ನು ಜಯಿಸುವಂತೆ ಪ್ರೋತ್ಸಾಹ ನೀಡುತ್ತದೆ. ಈ ಅಭಿಯಾನವನ್ನು ಗ್ರಾಹಕರು ಮತ್ತು ದೇಶಾದ್ಯಂತ ಇರುವ ಮಹೇಶ್ ಅವರ ವೈವಿಧ್ಯಮಯ ಮತ್ತು ಅಪಾರ ಅಭಿಮಾನಿಗಳು ಇಷ್ಟಪಡುತ್ತಾರೆ ಎಂಬ ವಿಶ್ವಾಸ ನಮಗಿದೆ. ಈ ಮೂಲಕ ಅವರು ಮೌಂಟೇನ್ ಡ್ಯೂ ಅನ್ನು ಹೆಚ್ಚು ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆ ನಮ್ಮದಾಗಿದೆ’’ ಎಂದು ತಿಳಿಸಿದರು.

ಈ ಚಿತ್ರದ ಬಗ್ಗೆ ಮಾತನಾಡಿದ ಬ್ರ್ಯಾಂಡ್ ಅಂಬಾಸಿಡರ್ ಮಹೇಶ್ ಬಾಬು ಅವರು, “ಭಯದ ಮೇಲಿನ ಧೈರ್ಯ, ಅಜ್ಞಾತದ ರೋಮಾಂಚನವು ಮೌಂಟೇನ್ ಡ್ಯೂ ಅವರ ವ್ಯಕ್ತಿತ್ವವು ಯಾವಾಗಲೂ ನನ್ನೊಂದಿಗೆ ಅನುರಣಿಸುತ್ತದೆ. ಆ್ಯಕ್ಷನ್ ಮತ್ತು ಸಾಹಸಗಳೆರಡಲ್ಲೂ ಹೆಚ್ಚಿನ ಆ್ಯಕ್ಷನ್- ಪ್ಯಾಕ್ಡ್ ಚಿತ್ರಕ್ಕಾಗಿ ತಂಡದೊಂದಿಗೆ ಹಿಂತಿರುಗಲು ನಾನು ಉತ್ಸುಕನಾಗಿದ್ದೇನೆ’’ ಎಂದರು.

ಸ್ಟುಡಿಯೋ ಸಿಂಪಲ್ ನ ಕ್ರಿಯೇಟಿವ್ ಹೆಡ್ ಮತ್ತು ಸಹ-ಸಂಸ್ಥಾಪಕ ಸಾಯಿನಾಥ್ ಸರಬನ್ ಅವರು ಮಾತನಾಡಿ, “ಜಯ ಗಳಿಸುವ ಮುನ್ನ ಒಬ್ಬರು ಅನುಭವಿಸುವ ದುರ್ಬಲತೆಯ ಅಂಶವನ್ನು ಕಳೆದುಕೊಳ್ಳುವ ರೀತಿಯಲ್ಲಿನ ದವಡೆಗಚ್ಚುವ ಅಭಿಯಾನವನ್ನು ರಚಿಸುವುದು ಸಾಮಾನ್ಯ ಗುರಿಯಾಗಿದೆ. ನೀವು ಅದರಲ್ಲಿ ಹೆಚ್ಚಿನ ಆಕ್ಟೇನ್ ಡ್ರಾಮಾವನ್ನು ಅನುಭವಿಸುತ್ತೀರಿ. ಅದು ಮನುಷ್ಯನ ಮನದಲ್ಲಿ ಉಳಿಯುವಂತೆ ಮಾಡುತ್ತದೆ’’ ಎಂದು ಹೇಳಿದರು.

ಈ ಹೊಸ ಮೌಂಟೇನ್ ಡ್ಯೂ ಅಭಿಯಾನ ಮತ್ತು ಟಿವಿಸಿ ಸದ್ಯದಲ್ಲಿಯೇ ಟಿವಿ, ಡಿಜಿಟಲ್, ಹೊರಾಂಗಣ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರಗೊಳ್ಳಲಿದೆ. ಮೌಂಟೇನ್ ಡ್ಯೂ ಸಿಂಗಲ್ ಮತ್ತು ಮಲ್ಟಿ ಸರ್ವ್ ಪ್ಯಾಕ್ ಗಳಲ್ಲಿ ಎಲ್ಲಾ ಮಾಡರ್ನ್ ಮತ್ತು ಸಾಂಪ್ರದಾಯಿಕ ರೀಟೇಲ್ ಔಟ್ ಲೆಟ್ ಗಳಲ್ಲಿ ಹಾಗೂ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಗಳಲ್ಲಿ ಲಭ್ಯವಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here