ಅನುಭವ ಮಂಟಪದ ಪರಿಕಲ್ಪನೆ ನೀಡಿ ಸಾಮಾಜಿಕ ಕ್ರಾಂತಿ ಮಾಡಿದವರು ಬಸವಣ್ಣವರು

0
72

ಕಲಬುರಗಿ: ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪದ ಪರಿಕಲ್ಪನೆ ನೀಡಿ ತಾರತಮ್ಯದ ಸಮಾಜದಲ್ಲಿ ಸಮಾನತೆಯನ್ನು ಬಿತ್ತುವ ಮೂಲಕ ಎಲ್ಲರನ್ನೂ ಒಂದಾಗಿಸಿ, ಸಾಮಾಜಿಕ ಕ್ರಾಂತಿಯ ಹರಿಕಾರರಾದರು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮುರುಗೇಶ ನಿರಾಣಿ ಹೇಳಿದರು.

ಅವರು ಸೋಮವಾರ ಶಹಾಬಾದ ನಗರಸಭೆ ಕಾರ್ಯಾಲಯ ವತಿಯಿಂದ ಬಸವೇಶ್ವರ ವೃತ್ತದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ವಿಶ್ವಗುರು ಬಸವಣ್ಣನವರ ಅಶ್ವಾರೂಢ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದರು.

Contact Your\'s Advertisement; 9902492681

ಜಾತಿ, ಮತ, ಪಂಥ, ಬಡವ-ಶ್ರೀಮಂತ ಮೇಲು-ಕೀಳುಗಳಿಂದ ತುಂಬಿದ ಜಡ್ಡುಗಟ್ಟಿದ ಸಮಾಜದಲ್ಲಿ ಸಮಾನತೆಯ ಪಾಠವನ್ನು ಹೇಳಿ ನುಡಿದಂತೆ ನಡೆದರು ಮತ್ತು ನಡೆದಂತೆ ನುಡಿದವರು ಬಸವಣ್ಣನವರು.ಎಲ್ಲಾ ಸಮಾಜದ ಜನರನ್ನು ಒಂದುಗೂಡಿಸಿ ಅನುಭವ ಮಂಟಪವನ್ನು ಸ್ಥಾಪಿಸಿದರು.

ಅವರ ಹಾಕಿಕೊಟ್ಟ ಮಾರ್ಗ ಹಾಗೂ ತತ್ವಗಳು ಅಜರಾಮರ.ಶರಣರ ವಚನಗಳು ಸಾರ್ವಕಾಲಿಕ ಸತ್ಯವಾಗಿದ್ದು, ಬದುಕಿಗೆ ಮಾನವೀಯ ಮೌಲ್ಯಗಳನ್ನು ತಂದು ಕೊಡುತ್ತದೆ. ಅವರ ಪ್ರತಿಮೆ ಅನಾವರಣವಾಗಿದ್ದು ಇಂದು ಸಂತೋಷ ತಂದಿದೆ.ಆದರೆ ಅವರ ತತ್ವಗಳ ಅನುಷ್ಠಾನವಾಗಬೇಕಿದ್ದು ಎಂದಿಗಿಂತಲೂ ಇಂದು ಅಗತ್ಯವಾಗಿದೆ. ಶಹಾಬಾದ ನಗರ ಫರ್ಸಿ, ಕಲ್ಲುಗಳ ನಾಡು.ಇಲ್ಲಿ ಕಾಯಕ ಜೀವಿಗಳು ಹೆಚ್ಚಾಗಿದ್ದು, ಬಸವಣ್ಣನವರ ಕಾಯಕ ಸಿದ್ಧಾಂತದ ಮೇಲೆ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಜನರು ಸ್ವಾವಲಂಬಿಯಾಗಿ ಉದ್ಯೋಗ ನೀಡುವ ಮಾಲೀಕರಾಗಬೇಕು.ಆಗ ಮಾತ್ರ ಭಾರತದ ಆರ್ಥಿಕ ಮಟ್ಟ ಸುಧಾರಿಸಬಹುದು.ಆ ನಿಟ್ಟಿನಲ್ಲಿ ತಾವೆಲ್ಲರೂ ಪ್ರಯತ್ನ ಮಾಡಿ.ಅದಕ್ಕೆ ನಮ್ಮ ಸರಕಾರದಿಂದ ಅನೇಕ ಯೋಜನೆಗಳಿವೆ ಎಂದು ಹೇಳಿದರು.

ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ಅಣ್ಣ ಬಸವಣ್ಣನವರ ಮೂರ್ತಿ ಸ್ಥಾಪನೆಯಾವಬೇಕು ಎಂಬುದು ಶಹಾಬಾದ ತಾಲೂಕಿನ ಜನರ ಬಹುದಿನಗಳ ಬೇಡಿಕೆಯಾಗಿತ್ತು.2015ರಿಂದ ಪ್ರಾರಂಭವಾದ ಚಟುವಟಿಕೆ ಇಂದು ಸಾಕಾರಗೊಂಡಿದೆ. ಬಸವಣ್ಣನವರ ಪ್ರತಿಮೆ ಸ್ಥಾಪನೆಗಾಗಿ ಬಹಳಷ್ಟು ಶ್ರಮಿಸಿದ ವೀರಶೈವ ಸಮಾಜದ ಅಧ್ಯಕ್ಷ ದಿ.ಸಂತೋಷಕುಮಾರ ಇಂಗಿನಶೆಟ್ಟಿ ಮತ್ತು ನಗರಸಭೆಯ ಮಾಜಿ ಅಧ್ಯಕ್ಷ ದಿ. ಗಿರೀಶ ಕಂಬಾನೂರ ಅವರ ಕನಸಾಗಿತ್ತು.ಅವರ ಆಸೆಯೂ ಈಡೇರಿದೆ.ಎಲ್ಲಕಿಂತ ಮುಖ್ಯವಾಗಿ ಎಲ್ಲಾ ಸಮಾಜದ ಜನರು ಮುಂಚಿಣಿಯಾಗಿ ನಿಂತು ಪ್ರತಿಮೆ ಅನಾವರಣಕ್ಕೆ ಸಾಕ್ಷಿಯಾಗಿದ್ದು ಮಾತ್ರ ಸಂತೋಷ ತಂದಿದೆ ಎಂದರು.

ಮುಖ್ಯ ಅತಿಥಿಗಳಾಗಿ ಬಿಜೆಪಿ ಮುಖಂಡ ಚಂದು ಪಾಟೀಲ, ತಹಸೀಲ್ದಾರ ಸುರೇಶ ವರ್ಮಾ ನಗರ ಸಭೆಯ ಉಪಾಧ್ಯಕ್ಷೆ ಸಲೀಮಾ ಬೇಗಂ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ, ವಾಡಿ ಶಹಾಬಾದ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್, ವೀರಶೈವ ಸಮಾಜದ ಮುಖಂಡರಾದ ಅಣವೀರ ಇಂಗಿನಶೆಟ್ಟಿ, ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ, ಹಳೆಶಹಾಬಾದ ವೀರಶೈವ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಚಂದನಕೇರಿ, ನಗರಸಭೆಯ ಸದಸ್ಯ ಹಾಗೂ ವೀರಶೈವ ಸಮಾಜದ ಅಧ್ಯಕ್ಷ ಸೂರ್ಯಕಾಂತ ಕೋಬಾಳ, ಸಂಗಮೇಶ ವಾಲಿ, ವಿಜಯ ಕುಮಾರ ಮುತ್ತಟ್ಟಿ, ಡಾ. ಎಮ.ಎ ರಶೀದ, ಪೌರಾಯುಕ್ತರಾದ ಬಸವರಾಜ ಹೆಬ್ಬಾಳ, ಶರಣು ಪೂಜಾರ,ಮುಜಮೀಲ ಆಲಂ, ಸಾಬಣ್ಣ ಸುಂಗಲಕರ, ಶಿವರಾಜ ಕುಮಾರ,ಸುನೀಲ ವೀರಶೆಟ್ಟಿ, ಮಾಣಿಕ್ ಪಾಟೀಲ, ಮೃತ್ಯುಂಜಯ್ ಹಿರೇಮಠ, ನಗರ ಸಭೆಯ ಸದಸ್ಯರಾದ ತಿಪ್ಪಣ್ಣ ನಾಟೇಕಾರ, ಪಾರ್ವತಿ ಪವಾರ, ರಜನಿಕಾಂತ ಕಂಬಾನೂರ, ಪೀರಮ್ಮ ಪಗಲಾಪೂರ, ಶ್ವೇತಾ ನಾಟೇಕಾರ, ಲಕ್ಷ್ಮೀಬಾಯಿ ಕುಸಾಳೆ, ಅಹ್ಮದ ಪಟೇಲ, ಅವಿನಾಶ ಕಂಬಾನೂರ, ಜಗದೇವ ಸುಬೇದಾರ, ಶರಣು ವಸ್ತ್ರದ, ಮಂಜುನಾಥ ಪೂಜಾರಿ, ಸೇರಿದಂತೆ ಅನೇಕರು ಇದ್ದರು.

ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ನಗರದ ಬಸವೇಶ್ವರ ವೃತ್ತದಲ್ಲೇ ಅಶ್ವಾರೂಢ ಬಸವಣ್ಣವರ ಪ್ರತಿಮೆ ಅನಾವರಣವಾಗಿದ್ದು ಉತ್ತಮ ಕಾರ್ಯ. ಪ್ರತಿಮೆ ನೋಡಿದಾಗಲೊಮ್ಮೆ ಬಸವಣ್ಣನವರ ಚಿಂತನೆಗಳನ್ನು ನೆನಪಿಡಲು ಸಹಕಾರಿಯಾಗಿದೆ.ಇಂದು ದಿ.ಸಂತೋಷಕುಮಾರ ಇಂಗಿನಶೆಟ್ಟಿ ಅವರನ್ನು ಸ್ಮರಿಸಲೇಬೇಕು. – ಸಿದ್ಧಲಿಂಗ ಶಿವಾಚಾರ್ಯರು ಮುಗುಳನಾಗಾಂವ.

ವಚನಗಳ ಮುಖಾಂತರ ಸಮಾಜದಲ್ಲಿರುವ ಅಂಕು-ಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದರು.ಇಡೀ ಮಾನವ ಕುಲಕ್ಕೆ ದಾರಿದೀಪವಾಗಿರುವ ಬಸವಣ್ಣನವರ ಮೂರ್ತಿ ನನ್ನ ಅವಧಿಯಲ್ಲಿ ಅನಾವರಣಗೊಂಡಿರುವುದಕ್ಕೆ ಸಂತಸ ತಂದಿದೆ. – ಅಂಜಲಿ ಗಿರೀಶ ಕಂಬಾನೂರ ಅಧ್ಯಕ್ಷ ನಗರಸಭೆ ಶಹಾಬಾದ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here