ಟಿಪ್ಪು ಸುಲ್ತಾನ ಸಾವಿನ ತನಿಖೆಗೆ ಆಗ್ರಹಿಸಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ

0
26

ಸುರಪುರ: ತಾಲೂಕಿನ ಹದನೂರ ಗ್ರಾಮದ ಯುವಕ ಟಿಪ್ಪು ಸುಲ್ತಾನ ಸಾವಿನ ತನಿಖೆಗೆ ಆಗ್ರಹಿಸಿ ನಗರದ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ,ತಾಲೂಕಿನ ಹದನೂರ ಗ್ರಾಮದ ಯುವಕ ಟಿಪ್ಪು ಸುಲ್ತಾನ ಸಾವು ಸಂಭವಿಸಿ ಈಗಾಗಲೇ ಎರಡು ವಾರ ಕಳೆದಿದೆ,ಟಿಪ್ಪು ಸುಲ್ತಾನ ಸಾವು ಅನುಮಾನಾಸ್ಪದವಾಗಿದೆ ಎಂದು ಕುಟುಂಬಸ್ಥರು ಅನುಮಾನಿಸಿದ್ದಾರೆ,ಅಲ್ಲದೆ ಅವನ ಮೈಮೇಲಿನ ಗಾಯಗಳು ಅನುಮಾನ ಹುಟ್ಟಿಸುವಂತಿವೆ ಆದ್ದರಿಂದ ಯಾರೋ ದುಷ್ಕರ್ಮಿಗಳು ಕೊಲೆ ಮಾಡಿರುವುದು ಅನಿಸುತ್ತದೆ,ಆದ್ದರಿಂದ ಈ ಪ್ರಕರಣ 174 ಸಿ ಅಡಿಯಲ್ಲಿ ದಾಖಲಾದ ಕೇಸನ್ನು ಶೀಘ್ರದಲ್ಲಿಯೇ ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಒಂದು ವೇಳೆ ನಮ್ಮ ಮನವಿಯನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದಲ್ಲಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

Contact Your\'s Advertisement; 9902492681

ಪ್ರತಿಭಟನೆಯ ಆರಂಭದಲ್ಲಿ ಘಟನೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿ ಕೊಲೆಯ ತನಿಖೆ ನಡೆಸಿ ತಪ್ಪಿತಸ್ಥರ ಬಂಧಿಸುವಂತೆ ಒತ್ತಾಯಿಸಿದರು.ನಂತರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಬರೆದ ಮನವಿಯನ್ನು ಪಿಐ ಆನಂದ ವಾಘ್ಮೋಡೆ ಮೂಲಕ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ರವಿಚಂದ್ರ ಬೊಮ್ಮನಹಳ್ಳಿ,ಅಜೀಜಸಾಬ್ ಐಕೂರ,ಮಲ್ಲಿಕಾರ್ಜುನ ಕುರಕುಂದಿ,ಮಹಾದೇವಪ್ಪ ಬಿಜಾಸಪುರ,ಚಂದ್ರಕಾಂತ ಹಂಪಿನ್,ಬಸವರಾಜ ದೊಡ್ಮನಿ,ನಿಂಗಪ್ಪ ಹಂಪಿನ್,ಭೀಮಣ್ಣ ಕ್ಯಾತನಾಳ,ಮಲ್ಲಿಕಾರ್ಜುನ ಗುಡ್ಡೇರ,ರಮೇಶ ಹುಂಡೇಕಲ್,ಖಾಜಾಹುಸೇನ ಗುಡಗುಂಟಿ,ಶರಣಪ್ಪ ಎಮ್ ಬೊಮ್ಮನಹಳ್ಳಿ,ಮಲ್ಲಿಕಾರ್ಜುನ ಶೆಳ್ಳಗಿ,ಭೀಮಣ್ಣ ಮಾಲಗತ್ತಿ,ಹುಲಗಪ್ಪ ಜಾಂಗೀರ,ಉಮೇಶ ಲಿಂಗೇರಿ,ಪಾಲರಡ್ಡಿ ಆಂಧ್ರ,ಭೀಮಪ್ಪ ಲಕ್ಷ್ಮೀಪುರ ಸೇರಿದಂತೆ ಮೃತ ಯುವಕ ಟಿಪ್ಪು ಸುಲ್ತಾನ ಕುಟುಂಬಸ್ಥರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here