ಉತ್ತಮ ಸಮಾಜಕ್ಕೆ ಸಾಹಿತ್ಯ ಅವಶ್ಯ

0
72

ಕಲಬುರಗಿ : ಉತ್ತಮ ಸಮಾಜ ತಿದ್ದಿತಿಡಿ ಹೊಸ ಬದುಕನ್ನು ಕಟ್ಟಿ ಕೊಡುವಲ್ಲಿ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ. ಜೀವ ಕೊನೆಯಾದರೂ ಕವಿಯ ಕೃತಿಗಳು ಉಳಿಯುತ್ತವೆ ಎಂದು ಸಾಹಿತಿ ಸಿದ್ದರಾಮ ರಾಜಮಾನೆ ಅಭಿಪ್ರಾಯ ಪಟ್ಟರು.

ನಗರದಲ್ಲಿ ಇತ್ತೀಚೆಗೆ ಇಬ್ಬನಿ ಎಂಬ ಹನಿಗವನಗಳ ಕೃತಿ ಜನಾರ್ಪಣೆಯಾದ ಪ್ರಯುಕ್ತ ಇಂದು ಗೆಳೆಯರ ಬಳಗ ಆಯೋಜಿಸಿದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

Contact Your\'s Advertisement; 9902492681

80 ದಶಕದ;ಲ್ಲಿ ಸಾಹಿತ್ಯ ಮತ್ತು ಸಾಂಸ್ಕøತಿಕ ಬದುಕಿನಲ್ಲಿ ಬೆಳೆದು ನಾಡಿಗೆ ಹೊಸ ಹೊಸ ಕೃತಿಗಳನ್ನು ಇನ್ನಷ್ಟು ಕೊಡಬೇಕಾಗಿದೆ. ಕೃತಿಗಳು ಓದುವ ಮೂಲಕ ಸಾಹಿತ್ಯದ ಒಳನೋಟ ಅರ್ಥೈಯಿಸಿ ಕೊಳ್ಳಬೇಕು. ಆಗ ಒಬ್ಬ ಬರಹಗಾರರನಿಗೆ ಗೌರವ ಸಲ್ಲುತ್ತದೆ ಎಂದರು.
ಸಾಹಿತಿ ಧರ್ಮಣ್ಣ ಧನ್ನಿ ಅಧ್ಯಕ್ಷತೆ ವಹಿಸಿ, ಸಮಾಜಿಕ ಜೀವನದಲ್ಲಿ ಸಾಹಿತಿಗಳಾದವರು ತಮ್ಮದೇ ಮೌಲಿಕ ಕೃತಿಗಳು ಕೊಡಬೇಕು. ಸಿದ್ದರಾಮ ರಾಜಮಾನೆ ಅವರು ನಾಡಿನ ಕಥೆಗಾರರು, ಕವಿಗಳಾಗಿ ವೃತ್ತಿ ಜೀವನ ನಡೆಸುತ್ತಿದ್ದಾರೆ. ಅವರ ಸಾಹಿತ್ಯ ಕೃತಿಗಳು ಅಧ್ಯಯನಕ್ಕೊಳಗಾಗಿವೆ ಎಂದು ನುಡಿದರು.

ನ್ಯಾಯವಾದಿ ವೀರಣ್ಣ ಬೆಣ್ಣೆಶಿರೂರ, ಸಮಾಜಸೇವಕ ಶರಣಗೌಡ ಪಾಟೀಲ ಪಾಳಾ, ನಾಗರಾಜ ಬಿರಾದಾರ, ಶಿವಯೋಗಿ ಭಜಂತ್ರಿ ಸೇರಿ ಇನ್ನಿತರ ಗೆಳೆಯರು ಪಾಲ್ಗೊಂಡಿದರು. ನಂತರ ಇಬ್ಬನಿ ಕೃತಿಯ ಕೆಲ ಹನಿಗವನಗಳನ್ನು ವಾಚಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here