ಸುರಪುರ: ಸಾಧಕಿಯರಿಗೆ ಸನ್ಮಾನ

0
12

ಸುರಪುರ: ಬಣಗಾರ ಪೌಂಡೇಶನ್ ಸುರಪುರ ಹಾಗೂ ಕನ್ನಡ ಸಾಹಿತ್ಯ ಸಂಘ ಸುರಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.ಕಾರ್ಯಕ್ರಮವನ್ನು ರಾಣಿ ಪುಷ್ಪಲತಾ ರಾಜಾ ಮುಕುಂದ ನಾಯಕ ಅವರು ಉದ್ಘಾಟಿಸಿದರು.ಕಾರ್ಯಕ್ರಮದ ಆರಂಭಕ್ಕೂ ಮುನ್ನ ಸಂಗೀತ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ಜಯಲಲಿತ ವಿ.ಪಾಟೀಲ್ ಸೇರಿದಂತೆ ಅನೇಕ ಮಹಿಳೆಯರು ಮಾತನಾಡಿ, ಇಂದು ಮಹಿಳೆ ಎಲ್ಲಾ ರಂಗದಲ್ಲೂ ತನ್ನ ಛಾಪನ್ನು ಮೂಡಿಸಿದ್ದಾಳೆ,ಆದರೂ ಇನ್ನೂ ಮಹಿಳೆಯರಿಗೆ ಸ್ವಾತಂತ್ರ್ಯ ಎನ್ನುವುದು ಸಂಪೂರ್ಣವಾಗಿ ದೊರೆತಿಲ್ಲ,ಮಹಿಳೆಯರಿಗೆ ಕಾನೂನು ಅನೇಕ ಸವಲತ್ತುಗಳನ್ನು ನೀಡಿದರು ಅವುಗಳನ್ನು ಜಾರಿಗೊಳಿಸುವಲ್ಲಿ ಸರಕಾರಗಳು ಮೀನಮೇಷ ಎಣಿಸುತ್ತವೆ.

Contact Your\'s Advertisement; 9902492681

ಅಲ್ಲದೆ ಮಹಿಳೆ ಇಂದಿಗೂ ಅನೇಕ ಸಮಸ್ಯೆಗಳನ್ನು ಹೆದರಿಸುವುದು ತಪ್ಪಿಲ್ಲ,ಅದರಲ್ಲಿ ಪ್ರಮುಖವಾಗಿ ವರದಕ್ಷಿಣೆ ಕಿರಕುಳದಿಂದ ಎಷ್ಟೊ ಮಹಿಳೆಯರ ಪ್ರಾಣ ಹಾನಿಯಾಗಿರುವ ಘಟನೆಗಳು ನಡೆದಿವೆ ದೇಶದಲ್ಲಿ ಪ್ರತಿ ಅರ್ಧ ಗಂಟೆಗೆ ಒಬ್ಬ ಮಹಿಳೆ ಮೇಲೆ ವರದಕ್ಷಿಣೆ ಕಿರಕುಳ ಜರುತ್ತಿವೆ ಎಂದು ತಜ್ಞರ ವರದಿಗಳು ಹೇಳುತ್ತಿವೆ,ಇನ್ನೂ ಅತ್ಯಾಚಾರ ಘಟನೆಗಳು ನಿತ್ಯವು ಜರಗುತ್ತಿವೆ,ದೆಹಲಿ ನಿರ್ಭಯಳಂತ ಪ್ರಕರಣಗಳು ನಿತ್ಯವು ನಡೆಯುತ್ತಿವೆ.ಮಹಿಳೆಗೆ ಎಷ್ಟೇ ಸ್ವಾತಂತ್ರ್ಯ ಕೊಟ್ಟರು ಪುರುಷ ಸಮಾಜ ಇಂತಹ ಹೀನ ಮನಸ್ಥಿತಿಯಿಂದ ಬದಲಾಗುವ ವರೆಗೆ ಮಹಿಳೆಯರ ಸಂಪೂರ್ಣ ಏಳಿಗೆ ಸಾಧ್ಯವಿಲ್ಲ ಎಂದರು.ಅಲ್ಲದೆ ಮಹಿಳೆಯರು ಇನ್ನೂ ಹೆಚ್ಚೆಚ್ಚು ಸಾಧನೆ ಮಾಡಲು ಪ್ರತಿಯೊಬ್ಬ ಮಹಿಳೆ ಸುಶಿಕ್ಷಿತಳಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಸಾಹಿತಿ ಶಿವಲೀಲಾ ಮಹಾಂತೇಶ ಮುರಾಳವರು ರಚಿಸಿರುವ ಹಾದಿ ತಂಪು ಕವನ ಸಂಕಲ್ಪ ಲೋಕಾರ್ಪಣೆಗೊಳಿಸಲಾಯಿತು.ಅಲ್ಲದೆ ಅನೇಕ ವಿವಿಧ ರಂಗಗಳಲ್ಲಿ ಸಾಧನೆಗೈದ ಸಾಧಕಿ ಮಹಿಳೆಯರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.ವಿವಿಧ ಮಕ್ಕಳಿಂದ ಭರತನಾಟ್ಯ ಪ್ರದರ್ಶನವು ಜರುಗಿತು ಹಾಗೂ ಮಹಿಳಾ ಕವಿಗೋಷ್ಠಿ ನಡೆಸಲಾಯಿತು.ಈ ಸಂದರ್ಭದಲ್ಲಿ ಅನೇಕ ಜನ ಮಹಿಳಾ ಕವಯಿತ್ರಿಯರು ತಮ್ಮ ಸ್ವರಚಿತ ಕವನ ವಾಚಿಸಿದರು.

ಕಾರ್ಯಕ್ರಮದ ವೇದಿಕೆ ಮೇಲೆ ಮಹಿಳಾ ಮುಖಂಡರಾದ ವಂದನಾ ವಿಜಯಕುಮಾರ ಬಣಗಾರ,ವಿಮಲಾಕ್ಷಿ ಅರವಿಂದ ಸಿಂದಗಿ,ನಿರ್ಮಲಾ ಸೂಗುರೇಶ ವಾರದ,ಡಾ:ಸವಿತಾ ಸಿರಗೋಜಿ ಕಲಬುರ್ಗಿ,ನ್ಯಾಯವಾದಿ ಛಾಯಾ ಕುಂಟೋಜಿ,ಶಿಕ್ಷಕಿ ಹಸೀನಾಬಾನು,ಪೊಲೀಸ್ ಇಲಾಖೆಯ ಸವಿತಾ ನಾಗರಾಜ ಗಿರಣಿ,ಐಶ್ವರ್ಯ ದೇವಿಕೇರಿ,ಭಾಗ್ಯವತಿ ಕೆಂಭಾವಿ ಮಾತನಾಡಿದರು.

ಹಿರಿಯ ಗಾಯಕಿ ನಿರ್ಮಲಾ ರಾಜಗುರು ಪ್ರಾರ್ಥಿಸಿದರು,ಶೃತಿ ಹಿರೇಮಠ ನಿರೂಪಿಸಿದರು,ಗೀತಾರಾಣಿ ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ,ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಜಾಲವಾದಿ,ಬಣಗಾರ ಪೌಂಡೇಶನ್ ಅಧ್ಯಕ್ಷ ವಸಂತಕುಮಾರ ಬಣಗಾರ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಶಿಕಲಾ ಗಾಳಿ,ಜಯಶ್ರೀ ಬಿರಾದಾರ,ಸಾವಿತ್ರಿ ಗಾಳಿ,ಸಜ್ಜನ್‍ಕುಮಾರ ಕಲ್ಯಾಣಶೆಟ್ಟಿ,ಸಾಹಿತಿ ಕನಕಪ್ಪ ವಾಗಣಗೇರ,ದೊಡ್ಡ ಮಲ್ಲಿಕಾರ್ಜುನ ಹುದ್ದಾರ ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here