ಶಹಾಬಾದ: ನಗರದ ಭಾರತ ಚೌಕ್ ನಿವಾಸಿ ಮೊಹ್ಮದ್ ಸುಭಾನ್ ಖಾಝಾ ಹುಸೇನ್ ಅವರ ಹೆಂಡತಿ ನಿಲೋಫರ್ ಭಾನು (42) ಹಾಗೂ ಮಗ ಮೊಹ್ಮದ್ ಉಮೇರ್ (9) ಬಾಲಕ ಕಾಣೆಯಾಗಿದ್ದಾರೆ.
ಇವರಿಬ್ಬರು ಜುಲೈ 4 ರಂದು ನಾನು ಮನೆಯಿಂದ ಹೊರಗಡೆ ಹೋದ ನಂತರ ನನ್ನ ಹೆಂಡತಿನಿಲೋಫರ್ ಭಾನು ಹಾಗೂ ಮಗ ಮೊಹ್ಮದ್ ಉಮೇರ್ನನ್ನು ಕರೆದುಕೊಂಡು ಮನೆಯಿಂದ ಹೊರಗಡೆ ಹೋದವಳು ಇಲ್ಲಿಯವರೆಗೆ ಬಂದಿರುವುದಿಲ್ಲ.
ಇತ್ತ ಬಾರದ ಕಾರಣ ಕುಟುಂಬಸ್ಥರು ನಗರದಲ್ಲೆಡೆ ಹಾಗೂ ಸಂಬಂಧಿಕರ ಮನೆಗಳಿಗೆ, ಊರುಗಳಿಗೆ ಹೋಗಿ ವಿಚಾರಿಸಲಾಗಿದ್ದರೂ ಸಿಕ್ಕಿರುವುದಿಲ್ಲ. ಆದ ಕಾರಣ ಅವರ ಪತಿ ಮೊಹ್ಮದ್ ಸುಭಾನ್ ಖಾಝಾ ಹುಸೇನ್ ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ವ್ಯಕ್ತಿಗಳು ಕಂಡು ಬಂದಲ್ಲಿ ನಗರ ಪೊಲೀಸ್ ಠಾಣೆ ಮೊ.ಸಂ 9480803570ಗೆ ಸಂಪರ್ಕಿಸಲು ತಿಳಿಸಲಾಗಿದೆ.