ಕಾಣೆಯಾಗಿದ್ದಾರೆ: ನಿಲೋಫರ್ ಬಾನು ಹಾಗೂ ಮೊಹ್ಮದ್ ಉಮೇರ್

0
22

ಶಹಾಬಾದ: ನಗರದ ಭಾರತ ಚೌಕ್ ನಿವಾಸಿ ಮೊಹ್ಮದ್ ಸುಭಾನ್ ಖಾಝಾ ಹುಸೇನ್ ಅವರ ಹೆಂಡತಿ ನಿಲೋಫರ್ ಭಾನು (42) ಹಾಗೂ ಮಗ ಮೊಹ್ಮದ್ ಉಮೇರ್ (9) ಬಾಲಕ ಕಾಣೆಯಾಗಿದ್ದಾರೆ.

ಇವರಿಬ್ಬರು ಜುಲೈ 4 ರಂದು ನಾನು ಮನೆಯಿಂದ ಹೊರಗಡೆ ಹೋದ ನಂತರ ನನ್ನ ಹೆಂಡತಿನಿಲೋಫರ್ ಭಾನು ಹಾಗೂ ಮಗ ಮೊಹ್ಮದ್ ಉಮೇರ್‍ನನ್ನು ಕರೆದುಕೊಂಡು ಮನೆಯಿಂದ ಹೊರಗಡೆ ಹೋದವಳು ಇಲ್ಲಿಯವರೆಗೆ ಬಂದಿರುವುದಿಲ್ಲ.

Contact Your\'s Advertisement; 9902492681

ಇತ್ತ ಬಾರದ ಕಾರಣ ಕುಟುಂಬಸ್ಥರು ನಗರದಲ್ಲೆಡೆ ಹಾಗೂ ಸಂಬಂಧಿಕರ ಮನೆಗಳಿಗೆ, ಊರುಗಳಿಗೆ ಹೋಗಿ ವಿಚಾರಿಸಲಾಗಿದ್ದರೂ ಸಿಕ್ಕಿರುವುದಿಲ್ಲ. ಆದ ಕಾರಣ ಅವರ ಪತಿ ಮೊಹ್ಮದ್ ಸುಭಾನ್ ಖಾಝಾ ಹುಸೇನ್ ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ವ್ಯಕ್ತಿಗಳು ಕಂಡು ಬಂದಲ್ಲಿ ನಗರ ಪೊಲೀಸ್ ಠಾಣೆ ಮೊ.ಸಂ 9480803570ಗೆ ಸಂಪರ್ಕಿಸಲು ತಿಳಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here