ಜಾಧವ ರೇಲ್ವೆ ಸಚಿವರ ಬೇಟಿ ಕೇವಲ ಚುನಾವಣೆ ಗಿಮಿಕ್ : ಡಾ.ರಶೀದ್

0
14

ಶಹಾಬಾದ :ಸಂಸದ ಡಾ.ಉಮೇಶ ಜಾಧವ ಅವರು ಕಲಬುರಗಿ ಜಿಲ್ಲೆಯ ರೈಲ್ವೆ ಇಲಾಖೆಯ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಭೇಟಿ ಮಾಡಿ, ಕಲಬುರಗಿ ಬೆಂಗಳೂರು ಹೊಸ ರೈಲು, ಶಹಾಬಾದನಲ್ಲಿ ವಿವಿಧ ರೈಲು ನಿಲ್ಲಿಸಲು ಮನವಿ ಸಲ್ಲಿಸಿರುವದು ನೋಡಿದರೆ ಇದೊಂದು ಚುನಾವಣಾ ಗಿಮಿಕ್ ಬಿಟ್ಟರೆ ಮತ್ತೊಂದಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಶೀದ್ ಮರ್ಚಂಟ್ ತಿಳಿಸಿದ್ದಾರೆ.

ಅವರು ಸುದ್ದಿಗರರೊಂದಿಗೆ ಮಾತನಾಡಿ, ಈ ಹಿಂದೆ ರಾಜ್ಯ ಹಾಗೂ ಕೇಂದ್ರದಲ್ಲಿ ತಮ್ಮದೇ ಆದ ಬಿಜೆಪಿ ಸರಕಾರ ಇರುವಾಗ ಯಾವುದೇ ಕೆಲಸ ಮಾಡಲಿಲ್ಲ. ಸಂಸದರಾಗಿ ಆಯ್ಕೆಯಾಗಿ ಐದು ವರ್ಷಗಳ ಅವಧಿಯಲ್ಲಿ ಕೇವಲ ಸುಳ್ಳು ಹೇಳುವುದು, ಬೂಟಾಟಿಕೆ ಪ್ರದರ್ಶನ ಮಾಡಿದ್ದು ಬಿಟ್ಟರೇ ಏನು ಮಾಡಿಲ್ಲ ಎಂಬುದು ಎಲ್ಲರಿಗೂ ಗೊತ್ತಿದ್ದ ವಿಷಯ. ಶಹಾಬಾದ ಜನತೆಯ ಸಮಸ್ಯೆಗಳನ್ನು ಆಲಿಸದ ಹಾಗೂ ಸಮಸ್ಯೆ ಪರಿಹರಿಸಲಾದ ಸಂಸದ ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತದಾರರ ಸಮಸ್ಯೆಗಳು ನೆನಪು ಬಂದ ಹಾಗೆ ಪ್ರದರ್ಶನ ಮಾಡುತ್ತಿದ್ದಾರೆ.

Contact Your\'s Advertisement; 9902492681

ಯುಪಿಎ ಸರ್ಕಾರದ ಅವಧಿಯಲ್ಲಿ ಕಲಬುರಗಿ ರೈಲ್ವೆ ಉಪ ವಿಭಾಗ ಮಾಡಿ ಸ್ಥಳ ಹಾಗೂ ಯೋಜನೆಗೆ ಬೇಕಾದ ಮೊತ್ತ ತೆಗೆದಿರಸಲಾಗಿತ್ತು. ಇವರಿಗೆ ಅದನ್ನು ಮುಂದುವರಿಸಿಕೊಂಡು ಹೋಗುವದಕ್ಕೆ ಆಗಗಲಿಲ್ಲ. ಕೋವಿಡ್-19 ಸಂದರ್ಭದಲ್ಲಿ ತಡೆಹಿಡಿದ ರೈಲುಗಳನ್ನು ಶಹಾಬಾದ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಲು ಆಗಲಿಲ್ಲ. ಈಗ ಕೋವಿಡ್-19 ಮುಗಿದು ಎರಡು ವರ್ಷಗಳು ಕಳೆದಿವೆ. ಇಲ್ಲಿಯವರೆಗೆ ಈ ಮೊದಲು ನಿಲ್ಲುತ್ತಿದ್ದ ರೈಲುಗಳು ಈಗಲೂ ನಿಲ್ಲತ್ತಿಲ್ಲ.

ಒಬ್ಬ ಸಂಸದ ರಾಜ್ಯ ಹಾಗೂ ಕೇಂದ್ರದಲ್ಲಿ ತಮ್ಮದೇ ಸರಕಾರ ಇರುವಾಗ ಕೇವಲ ಇಂದು ರೇಲ್ವೆಯನ್ನು ಶಹಾಬಾದ ರೇಲ್ವೆ ನಿಲ್ದಾಣದಲ್ಲಿ ಆಗದಿರುವುದು ಹಾಸ್ಯಸ್ಪದಾಗಿದೆ.ಈಗ ಕೇಂದ್ರ ರೈಲ್ವೆ ಮಂತ್ರಿಗಳನ್ನು ಬೇಟಿಯಾಗಿ ಮನವಿ ಪತ್ರ ಸಲ್ಲಿಸಿರುವದು ಕೇವಲ ಚುನಾವಣೆಯ ತಂತ್ರವಾಗಿದೆ.ಅಲ್ಲದೇ ಈ ಐದು ವರ್ಷಗಳಲ್ಲಿ ಜನರು ಸರಿಯಾಗಿ ಗಮನಿಸಿದ್ದಾರೆ.ಅಲ್ಲದೇ ಸಂಸದರಾಗಿ ಆಯ್ಕೆ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಯುವ ಅಧ್ಯಕ್ಷ ಕಿರಣ ಚವ್ಹಾಣ, ಫಜಲ್ ಪಟೇಲ, ಅನ್ವರ್ ಪಾಶಾ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here