ಸದಸ್ಯತ್ವ ಅಭಿಯಾನದ ಮೂಲಕ ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬಿ; ಬಾಣಿ

0
30

ಶಹಾಬಾದ: ಪಕ್ಷದ ಕಾರ್ಯಕರ್ತರು ಸದಸ್ಯತ್ವ ಅಭಿಯಾನದ ಮೂಲಕದ ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಬಿಜೆಪಿ ಸದಸ್ಯತ್ವ ಅಭಿಯಾನದ ಕಲಬುರಗಿ ಗ್ರಾಮಿಣ ಸಹಪ್ರಭಾರಿ ಶೋಭಾ ಬಾಣಿ ಹೇಳಿದರು.

ಅವರು ನಗರದ ಶ್ರೀರಾಮ ವೃತ್ತದಲ್ಲಿ ಭಾರತೀಯ ಜನತಾ ಪಕ್ಷದಿಂದ ಆಯೋಜಿಸಲಾದ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

Contact Your\'s Advertisement; 9902492681

ಮೊಬೈಲ್ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮುಖಾಂತರ ಪಕ್ಷದ ಸದಸ್ಯರಾಗಿ ಸೇರ್ಪಡೆಯಾಗಲು ವ್ಯವಸ್ಥೆ ಮಾಡಲಾಗಿದೆ. ಕಾರ್ಯಕರ್ತರು ಮೊದಲು ತಮ್ಮ ಮನೆಯ ಸದಸ್ಯರನ್ನು, ನಂತರ ಪಕ್ಕದ ಮನೆಯವರನ್ನು ಬಳಿಕ ಗ್ರಾಮಸ್ಥರನ್ನು ಪಕ್ಷದ ಸದಸ್ಯರನ್ನಾಗಿ ಮಾಡಬೇಕು. ಪಕ್ಷವು ಹಿಂದೆ ವಹಿಸಿದ್ದ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ಕಲಬುರಗಿ ಗ್ರಾಮೀಣ ಕ್ಷೇತ್ರ ಸದಾ ಮುಂಚೂಣಿಯಲ್ಲಿತ್ತು. ಸದಸ್ಯತಾ ಅಭಿಯಾನವನ್ನು ಜಿಲ್ಲೆಯಲ್ಲಿ ಅμÉ್ಟೀ ಅಲ್ಲದೇ ರಾಜ್ಯ ಮಟ್ಟದಲ್ಲಿ ಗಮನ ಸೆಳೆಯುವ ರೀತಿಯಲ್ಲಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಬಿಜೆಪಿ ಹಿರಿಯ ಮುಖಂಡ ಅರುಣ ಪಟ್ಟಣಕರ್,ಚಂದ್ರಕಾಂತ ಗೊಬ್ಬೂರಕರ್, ಭೀಮರಾವ ಸಾಳುಂಕೆ ಮಾತನಾಡಿ,ಸದಸ್ಯತ್ವ ಅಭಿಯಾನವನ್ನು ಪಕ್ಷದ ಕಾರ್ಯಕರ್ತರು ಗಂಭೀರವಾಗಿ ಪರಿಗಣಿಸಬೇಕು. ಪ್ರತಿ ಕಾರ್ಯಕರ್ತರು ತಮ್ಮ ಬೂತ್‍ಗಳಲ್ಲಿ ಸಾಧ್ಯವಾದಷ್ಟು ಹೆಚ್ಚು ಸದಸ್ಯರನ್ನು ಸೇರ್ಪಡೆ ಮಾಡಲು ಪ್ರಯತ್ನಿಸಬೇಕು. ಕಾರ್ಯಕರ್ತರು ನಿಗದಿತ ಗುರಿಗಿಂತ ಹೆಚ್ಚಿನ ಸದಸ್ಯರನ್ನು ಸೇರ್ಪಡೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನರೇಂದ್ರ ವರ್ಮಾ ಮಾತನಾಡಿ,18-24 ವರ್ಷದ ಯುವಕ- ಯುವತಿಯರು ಭಾರತೀಯ ಜನತಾ ಪಕ್ಷ ಸೇರಲು ಹುಮ್ಮಸ್ಸಿನಿಂದ ಇದ್ದಾರೆ. ಇಂತಹ ಯುವ ಪೀಳಿಗೆಯ ಆಸಕ್ತರನ್ನು ಪಕ್ಷದ ಸದಸ್ಯರನ್ನಾಗಿ ಭರಮಾಡಿಕೊಳ್ಳುವತ್ತ ನಾವೆಲ್ಲಾ ಒಟ್ಟುಗೂಡಿ ಕೆಲಸ ಮಾಡಬೇಕು. ವಿದ್ಯಾರ್ಥಿ ಸಮುದಾಯ ಯುವ ಪೀಳಿಗೆ, ಮಾತ್ರವಲ್ಲದೇ ಸಮಾಜದ ಎಲ್ಲಾ ಸಮುದಾಯ-ವರ್ಗದ ಹಾಗೂ ವಿಶೇಷವಾಗಿ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಸದಸ್ಯರನ್ನಾಗಿಸುವ ಮೂಲಕ ಈ ಅಭಿಯಾನ ಸರ್ವ ವ್ಯಾಪಿ ಸರ್ವ ಸ್ಪರ್ಶಿಯಾಗುವಂತೆ ಕೆಲಸ ಮಾಡಬೇಕೆಂದು ಹೇಳಿದರು.

ಬಿಜೆಪಿ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಮಾತನಾಡಿದರು. ಜಿಲ್ಲಾ ಮುಖಂಡೆ ಭಾಗೀರಥಿ ಗುನ್ನಾಪೂರ, ಪ್ರಭಾರಿ ಸಿದ್ರಾಮ ಕುಸಾಳೆ ಗಣ್ಯರಾದ ಮಹಾದೇವ ಗೊಬ್ಬೂರಕರ, ದಿನೇಶ ಗೌಳಿ, ಸಹಸಂಚಾಲಕರಾದ ಬಸವರಾಜ ಬಿರಾದಾರ, ಭೀಮಯ್ಯ ಗುತ್ತೆದಾರ, ಜಗದೇವ ಸುಬೆದಾರ, ನಾರಾಯಣ ಕಂದಕೂರ, ರಾಜು ಕುಂಬಾರ, ಜ್ಯೋತಿ ಶರ್ಮ, ಪದ್ಮಾ ಕಟಕೆ, ನಾಗರಾಜ ಮೆಲಗಿರಿ, ಕನಕಪ್ಪ ದಂಡಗುಲಕರ, ಪಕ್ಷದ ಪದಾಧಿಕಾರಿಗಳು, ಪ್ರಮುಖರು, ನಗರಸಭೆ ಸದಸ್ಯರು, ಮಹಾಶಕ್ತಿ ಕೇಂದ್ರ ಪದಾಧಿಕಾರಿಗಳು, ಶಕ್ತಿ ಕೇಂದ್ರ ಪ್ರಮುಖರು, ಮೊರ್ಚಾಗಳ, ಪ್ರಕೋಷ್ಟಗಳ ಮತ್ತು ಬೂತಿನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ದೇವದಾಸ ಜಾಧವ ನಿರೂಪಿಸಿ, ಸ್ವಾಗತಿಸಿದರು,ಬಸವರಾಜ ಬಿರಾದಾರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here