ಕಲಬುರಗಿ:”ಕಲ್ಯಾಣ ಕರ್ನಾಟಕ ಉತ್ಸವ” ವನ್ನು ಸೆಪ್ಟೆಂಬರ್ “18” ರಂದು ಆಚರಿಸಲು ಕರ್ನಾಟಕ ಯುವಜನ ಒಕ್ಕೂಟ(ರಿ) ಮತ್ತು “ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗ್ರತಿ ಹೋರಾಟ ಸಮಿತಿ” ಜಂಟಿ ಯಾಗಿ ಆಗ್ರಹಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಕ.ಕ.ಪ್ರತ್ಯೇಕ ರಾಜ್ಯ ಜಾಗ್ರತಿ ಹೋರಾಟ ಸಮಿತಿಯ, ನ್ಯಾಯವಾದಿ ಜೆ. ವಿನೋದ ಕುಮಾರ ಈ ಹಿಂದೆ ಮಾನ್ಯ ಜೆ. ಮಾದುಸ್ವಾಮಿ ಯವರು ಕಾನೂನು ಮಂತ್ರಿಗಳಾಗಿ, ಮೊದಲ ಬಾರಿ ಮಂತ್ರಿಯಾಗಿ ಕಲಬುರಗಿಗೆ KAT ಪೀಠ ಉದ್ಘಾಟಿಸಲು ಆಗಮಿಸಿದ ಸಂದರ್ಭದಲ್ಲಿ ಮನವಿ ಮಾಡಿಕೊಂಡು ಎರಡು ವರ್ಷಗಳಾದರು ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಯನ್ನು 1998 ರಲ್ಲಿ ಸಚಿವ ಸಂಪುಟ ದಲ್ಲಿ ತೆಗೆದುಕೊಂಡ ನಿರ್ಣಯ ವನ್ನು ನೈಜ ಸಂಗತಿಗಳನ್ನು ಪರಿಗಣಿಸಿ, ಸತ್ಯಾಸತ್ಯತೆಯನ್ನು ಕಾನೂನಾತ್ಮಕ ವಾಗಿ ಸರಿಪಡಿಸಿ, ತಿದ್ದುಪಡಿಗೊಳಿಸಿ ಈ ಭಾಗದ ತಪ್ಪು ಆಚರಣೆಯ ದಿನವನ್ನು ಮರು ನಿಗದಿಗೊಳಿಸಿ ಆಚರಿಸುವ ಬಗ್ಗೆ ಮನವಿ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಈ ಭಾಗಕ್ಕೆ ಮಲತಾಯಿ ಧೋರಣೆ ಹೊಂದಿ ಅನ್ಯಾಯ ಎಸಗುತ್ತಿದೆ ಅಲ್ಲದೆ ನಮ್ಮ ಮನವಿಗೆ ಅಧಿಕೃತವಾಗಿ ಉತ್ತರವು ನೀಡದೆ ನಮ್ಮ ಭಾವನೆಗಳಿಗೆ ಸರ್ಕಾರ ಅಪಮಾನ, ಅವಮಾನ ಗೊಳಿಸುತಿದೆ ಎಂದು ಈ ಭಾಗದ ಕಲ್ಯಾಣ ಕರ್ನಾಟಕ ಯುವಜನ ಒಕ್ಕೂಟದ ರಾಜ್ಯ ಸಂಚಾಲಕರು ಹಾಗೂ ಪ್ರಧಾನ ಕಾರ್ಯದರ್ಶಿಗಳು, ಕ.ಕ.ಪ್ರತ್ಯೇಕ ರಾಜ್ಯ ಜಾಗ್ರತಿ ಹೋರಾಟ ಸಮಿತಿಯ, ನ್ಯಾಯವಾದಿ ಜೇನವೆರಿ ವಿನೋದ ಕುಮಾರ, ಒಕ್ಕೂಟದ ವಿಭಾಗೀಯ ಸಂಚಾಲಕ, ಉದಯಕುಮಾರ್ ಜೇವರ್ಗಿ, ಕಾರ್ಯಾಧ್ಯಕ್ಷ ಭೀಮರಾವ ಜಿರಗಿ, ಕರ್ನಾಟಕ ಯುವಜನ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಅನಂತ. ಜಿ. ಗುಡಿ ಹಾಗೂ ಸದಸ್ಯರು ಮತ್ತು ಇತರರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
371 j ನಂತರವೂ ಕೂಡಾ ಕಳೆದ ದಶಕಗಳಿಂದ ನಮ್ಮ ಒಕ್ಕೂಟದ ಪತ್ರಗಳಿಗೂ ಉತ್ತರ ನೀಡಿಲ್ಲ, ಸೆಪ್ಟೆಂಬರ್ 17 ರಂದೆ ಆಚರಿಸಲು ಸರ್ಕಾರದ ಬಳಿ ಇರುವ ಧಾಖಲೆಗಳು ಪ್ರಕಟಿಸಲು ಆಗ್ರಹಿಸಿದ್ದಾರೆ. ಒಬ್ಬ ನ್ಯಾಯವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ದಿ.2.7.2021 ರಂದು ಸಲ್ಲಿಸಿದ ಮನವಿಗೂ 3 ವರ್ಷಗಳಿಂದ ಉತ್ತರ ನೀಡದ ಜಿಲ್ಲಾಡಳಿತಕ್ಕೂ ಹಿಡಿ ಶಾಪದಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಪ್ರತಿ ವರ್ಷದಂತೆ ಈ ವರ್ಷವೂ ಸೆಪ್ಟೆಂಬರ್ 18 ರಂದು ಈ ಭಾಗದ ಮರು ಸ್ವಾತಂತ್ರೋತ್ಸವ ವನ್ನು ಪ್ರತ್ಯೇಕವಾಗಿ ಬೆಳ್ಳೆಗ್ಗೆ 8.30 ರಿಂದ 9 ರವರೆಗೆ ಆಚರಿಸಲಾಗುವುದು ಎಂದು ನ್ಯಾಯವಾದಿ ಜೆನವೇರಿ ವಿನೋದ ಕುಮಾರ ಈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಡಾ. ಅಂಬೇಡ್ಕರ್ ರ ಮಾತಿನಂತೆ, ಇತಿಹಾಸ ಅರಿಯದವರು, ಇತಿಹಾಸ ಶೃಷ್ಟಿಸಲಾರರು ಎನ್ನುವ ನಂಬಿಕೆ ಮೇಲೆ ವಿಶ್ವಾಸ ವಿಟ್ಟು ಆಚರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ನೈಜ ಇತಿಹಾಸಕ್ಕೆ ಬೆಂಬಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪಾಲಗೊಳ್ಳಲು ಕರೆ ನೀಡಿದ್ದಾರೆ ಹಾಗೂ ಈ ನಿಲುವಿಗೆ ಸದ್ಗುರು ದಾಸಿಮಯ್ಯ ಕಾನೂನು ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಹೈಕೋರ್ಟ್ ವಕೀಲರಾದ ಶಿವಲಿಂಗಪ್ಪಾ ಅಷ್ಟಗಿ ಯವರು ಬೆಂಬಲಿಸಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸಲಾಗುವುದೆಂದು ತಿಳಿಸಿದ್ದಾರೆ.