ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡದಿರೆ ಕಠಿಣ ಕ್ರಮ: ತಹಶೀಲ್ದಾರ್ ಸುರೇಶ ವರ್ಮಾ

0
41

ಶಹಾಬಾದ: ನಗರದ ಅಂಗಡಿಯ ಮಾಲೀಕರು ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡದಿರಿ. ಒಂದು ವೇಳೆ ಕಂಡು ಬಂದರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದೆಂದು ಎಂದು ಅಗತ್ಯ ವಸ್ತುಗಳ ನಿರ್ವಹಣಾ ಸಮಿತಿ ಅಧ್ಯಕ್ಷ ಹಾಗೂ ತಹಸೀಲ್ದಾರ ಸುರೇಶ ವರ್ಮಾ ಎಚ್ಚರಿಕೆ ನೀಡಿದ್ದಾರೆ.

ಅವರು ಶುಕ್ರವಾರ ನಗರದ ಸಮಾಜ ಕಲ್ಯಾಣ ಇಲಾಖೆಯ ಪ್ರಮೆಟ್ರಿಕ್ ವಸತಿ ನಿಲಯದಲ್ಲಿ ಆಯೋಜಿಸಲಾದ ಅಗತ್ಯ ವಸ್ತುಗಳ ನಿರ್ವಹಣಾ ಸಮಿತಿಯ ಸಭೆಯಲ್ಲಿ ಮಾತನಾಡಿದರು.

Contact Your\'s Advertisement; 9902492681

ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಯಾವ ರೀತಿ ಪೂರೈಕೆ ಮಾಡಬೇಕು.ಅದರಲ್ಲೂ ಕುಡಿಯುವ ನೀರು, ಮೊಬೈಲ್ ರಿಚಾರ್ಜ, ಎಲ್‌ಪಿಜಿ, ಕಿರಾಣಾ ಸೇರಿದಂತೆ ಅನೇಕ ವಸ್ತುಗಳನ್ನು ಸಕಾಲದಲ್ಲಿ ಪೂರೈಸಲು ಕ್ರಮಕೈಗೊಳ್ಳಲು ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು.ಅಲ್ಲದೇ ಎಪ್ರಿಲ್ ೨೬ ರಂದು ದೇವನ ತೆಗನೂರಿನಲ್ಲಿ ನಡೆಯುವ  ಕರಿಘೂಳಿ ಬಸವೇಶ್ವರ ಜಾತ್ರೆ ಮತ್ತು ಸೀಮೆ ಮರಗಮ್ಮ ಜಾತ್ರೆ, ಮುತ್ತಗಾ ಗ್ರಾಮದ ಹಳ್ಳ ಬಸವೇಶ್ವರ ಜಾತ್ರೆ ಹಾಗೂ ಶಹಾಬಾದ ನಗರದ ಬಸವಣ್ಣದೇವರ ಮತ್ತು ಅಡವಿ ತಾತನ ಜಾತ್ರೆಯನ್ನು, ಎಪ್ರಿಲ್ ೨೮ ರಂದು ನಡೆಬೇಕಿದ್ದ ಮರತೂರಿನ ಹಯ್ಯಾಳ ಸಿದ್ದೇಶ್ವರ ಜಾತ್ರೆ ಹಾಗೂ ಮೇ ೧ ರಂದು ಕಡೆಹಳ್ಳಿ ಗ್ರಾಮದಲ್ಲಿ ನಡೆಯುವ ನಂದಿ ಕೋಲು ಉತ್ಸವವನ್ನು ರದ್ದುಪಡಿಸಲಾಗಿದೆ. ಸಾರ್ವಜನಿಕರು ಇದನ್ನು ಮನಗಂಡು ಮನೆಯ್ಲಿರಿ.

ಒಂದು ವೇಳೆ ಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಯಾವುದೇ ಕಾರಣಕ್ಕೂ ಜಾತ್ರೆ ನಡೆಸದಂತೆ ದೇವಸ್ಥಾನ ಕಮಿಟಿ ಮತ್ತು ಜಾತ್ರಾ ಸಂಯೋಜಕರಿಗೆ ಎಚ್ಚರಿಕೆ ನೀಡಿದ್ದೆವೆ ಎಂದರು.  ತೆರಿಗೆ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತೆ ನೀಲಗಂಗಮ್ಮ. ಎಸ್.ಬಬಲಾದ, ಬಿ.ಎಸ್.ಡಿಗ್ಗಿ , ನಗರಸಭೆಯ ಪೌರಾಯುಕ್ತ ವೆಂಕಟೇಶ, ಪಶು ವೈದ್ಯ ನೀಲಕಂಠರಾವ ಪಾಟೀಲ, ನಗರಸಭೆಯ ಆರೋಗ್ಯ ನಿರೀಕ್ಷಕ ಶಿವರಾಜಕುಮಾರ ಸೇರಿದಂತೆ ಅನೇಕ ಜನರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here