ಪತ್ರಕರ್ತರಿಗೆ -ಶಿಕ್ಷಕರಿಗೆ ಇಲ್ಲ ಸರ್ಕಾರದ ವಿಶೇಷ ಪ್ಯಾಕೇಜ್

0
63

ಕಲಬುರಗಿ: ಕೊರೊನಾ ಮೊದಲ ಅಲೆ ಮತ್ತು ಎರಡನೆಯ ಅಲೆಯ ಸಂದರ್ಭದಲ್ಲಿ ಪತ್ರಕರ್ತರು ತಮ್ಮ ಜೀವದ ಹಂಗನ್ನು ತೊರೆದು ನಗರ, ಪಟ್ಟಣ.ಹಳ್ಳಿ ಹಳ್ಳಿ,ಗಲ್ಲಿ ಗಲ್ಲಿ ತಿರುಗಿ ಕೊರೊನಾ ವಾಸ್ತವ ಸ್ಥಿತಿಯ ಸುದ್ದಿಯನ್ನು ಪ್ರಕಟಿಸಿ ಸರ್ಕಾರದ ಕಣ್ಣು ತೆರಸುವ ಪ್ರಾಮಾಣಿಕ ಕೆಲಸ ಮಾಡುವುದಲ್ಲದೇ ಸೋಂಕಿತರಿವ ಸ್ಥಳಗಳಿಗೆ ತೆರಳಿ ಅವರಿಗೆ ಆಗುವ ಅನೂಕೂಲ ಮತ್ತು ಅನಾನೂಕೂಲ ಬಗ್ಗೆ ತಿಳಿಸುವ ಪತ್ರಕರ್ತರ ಯಾವಾಗ ಸೋಂಕು ಹರಡುತ್ತೇ ಎನ್ನುವ ಆತಂಕದಲ್ಲಿ ನಿತ್ಯ ಸಾರ್ವಜನಿಕರ ಬಗ್ಗೆ ಕಳಿಕಳಿಯುಳ್ಳ ಒಬ್ಬ ಪತ್ರಕರ್ತರು ಯಾವದೇ ಫಲಾಪೇಕ್ಷವಿಲ್ಲದೇ ಸಾರ್ವಜನಿಕರ ರಂಗದಲ್ಲಿ ಪತ್ರಕರ್ತರು ಮತ್ತು ಅವರ ಕುಟುಂಬಗಳು ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಎಂದು ಯುವ ಕಾಂಗ್ರೆಸ್ ಗ್ರಾಮೀಣ ಮತಕ್ಷೇತ್ರದ ಸಾಮಾಜಿಕ ಜಾಲತಾಣ ವಿಭಾಗದ ಸಂಯೋಜಕರಾದ ಶಿವಾನಂದ ಆರ್.ಕಿಳ್ಳಿ  ತಿಳಿಸಿದ್ದಾರೆ.

ಇವರ ಸಮಸ್ಯೆ ಸರ್ಕಾರದ ಗಮನಕ್ಕೆ ಯಾಕೆ ಬರುತ್ತಿಲ್ಲ ನಿತ್ಯ ಸುದ್ದಿ ಮಾಡಲು ತೆರಳಿ ಮಹಾಮಾರಿಯನ್ನು ತಗೆದುಕೊಂಡು ಬಂದು ಅದೆಷ್ಟು ಪತ್ರಕರ್ತರು ಅಸುನೀಗುತ್ತಿದ್ದರೂ ಅವರ ಬಗ್ಗೆ ಕಿಂಚಿತ್ತು ಕಾಳಜಿಯಿಲ್ಲ. ಮೊನ್ನೆಯಷ್ಟೆ ಸಂಪಾದಕರಾದ ಜಯತೀರ್ಥ್ ಕಾಗಲ್ಕರ್ ಸರ್ ಅವರು ಮಹಾಮಾರಿಗೆ ಬಲಿ ಆದರು ಹೀಗೆ ಅನೇಕ ಪತ್ರಕರ್ತರು ಮತ್ತು ಅವರ ಕುಟುಂಬಗಳು ಅಭದ್ರತೆಯಲ್ಲಿದ್ದರೂ ಅವರ ಕಡೆಗೆ ಯಾಕೆ ಸರ್ಕಾರ ಗಮನ ಹರಿಸುತ್ತಿಲ್ಲ.

Contact Your\'s Advertisement; 9902492681

ವಿವಿಧ ವಲಯದ ಕೆಲಸ ಮಾಡುತ್ತಿರುವ ಬಗ್ಗೆ ತಿಳಿಸುವ ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ಕೊಡಬೇಕು ಅಂತಾ ಯಾಕೆ ಮನಸ್ಸು ಮಾಡಿಲ್ಲ ಎಂಬುದೇ ಯಕ್ಷ ಪ್ರಶ್ನೆಯಾಗಿದೆ ಎಂದು ಸರಕಾರದ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಅಭದ್ರತೆಯಲ್ಲಿ ಕೆಲಸ ಮಾಡುತ್ತಿರುವ ಮಾಧ್ಯಮದ ಸ್ನೇಹಿತರು ಕೊರೊನಾ ಸೋಂಕಿಗೆ ಬಲಿಯಾಗಿ ಅದೆ? ಜನ ಪತ್ರಕರ್ತರು ಮರಣ ಹೊಂದಿ ಅವರನ್ನೇ ನಂಬಿಕೊಂಡ ಸಾವಿರಾರು ಕುಟುಂಬಗಳು ಕುಟುಂಬದ ಆಧಾರವಾಗಿದ್ದ ವ್ಯಕ್ತಿಯನ್ನು ಕೆಳದುಕೊಂಡು ಅನಾಥವಾಗಿ ಬೀದಿ ಪಾಲಾದ ಕುಟುಂಬಗಳ ನೋವಿನ ಧ್ವನಿ ಸರ್ಕಾರಕ್ಕೆ ಕೇಳಿಲ್ವಾ, ವಿವಿಧ ರಂಗದಲ್ಲಿ ಅಸಂಘಟಿತವಾಗಿ ಕಾರ್ಯ ನಿರ್ವಹಿಸುವರ ಜೊತೆ ಪತ್ರಕರ್ತರಿಗೂ ಪ್ಯಾಕೇಜ ನೀಡದಿರುವುದು ಪತ್ರಿಕಾ ರಂಗದಲ್ಲಿರುವ ಸ್ನೇಹಿತರಿಗೆ ನಿರಾಶೆಯಾಗಿದೆ ಎಂದರು.

ಶಿಕ್ಷಕರಿಗೆ ಹಾಗೂ ಕಾಲೇಜು ಉಪನ್ಯಾಸಕರಿಗೆ ಈಗಾಗಲೇ ಎರಡು ವ?ಗಳಿಂದ ವೇತನ ಇಲ್ಲ ಕೋವಿಡ್ ಹಿನ್ನೆಲೆಯಲ್ಲಿ ಈಗಾಗಲೇ ಶಾಲಾ ಕಾಲೇಜುಗಳು ಬಂದ್ ಆಗಿವೆ ಅಲ್ಲದೆ ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ಚುನಾವಣೆಗಳಲ್ಲಿ ಬಳಸಿಕೊಳ್ಳಲಾಗಿದೆ ಅನೇಕ ಶಿಕ್ಷಕರು ಕೊವಿಡ್ ಸಂದರ್ಭದಲ್ಲಿ ಕೆಲಸ ಮಾಡಿದ್ದಾರೆ ಈ ಸಂದರ್ಭದಲ್ಲಿ ಅನೇಕ ಶಿಕ್ಷಕರು ಹಾಗೂ ಉಪನ್ಯಾಸಕರು ಕರೋನಾಗೆ ಬಲಿಯಾಗಿದ್ದಾರೆ ಆದುದರಿಂದ ಆ ಕುಟುಂಬಗಳಿಗೂ ಕೂಡ ಪರಿಹಾರ ನೀಡಬೇಕು, ಹಾಗೂ  ಸರ್ಕಾರ ತಕ್ಷಣವೇ ಪತ್ರಕರ್ತರ ಹಾಗೂ ಶಿಕ್ಷಕರ ಮತ್ತು ಉಪನ್ಯಾಸಕರ  ನೋವನ್ನು ತಿಳಿದುಕೊಂಡು ಅವರಿಗೂ ಕೂಡ ವಿಶೇ? ಪ್ಯಾಕೇಜ್ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಪತ್ರಿಕಾ ಪ್ರಕಟಣೆ ಮೂಲಕ ಸರಕಾರಕ್ಕೆ ಮನವಿ ಮಾಡುತ್ತೇನೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here